ನದಿಗಳಿಗೆ ತೆರಳಿ ಪುಣ್ಯ ಸ್ನಾನ
ಗುರುಮಠಕಲ್: ಮಕರ ಸಂಕ್ರಾಮದ ಹಿನ್ನಲೆಯಲ್ಲಿ ಜನತೆ ಇಲ್ಲಿಗೆ ಸಮೀಪದ ವಿವಿಧ ನದಿಗಳಿಗೆ ತೆರಳಿ ಪುಣ್ಯ ಸ್ನಾನವನ್ನು ಮಾಡಿ ಪುಣಿತರಾದರು. ಸ್ನಾನದ ನಂತರ ನದಿಯ ದಡದಲ್ಲಿದ್ದಂತಹ ದೇವಾಲಯಗಳಲ್ಲಿ ದೇವಾರ ದರ್ಶನ ಪಡೆದುಕೊಂಡರು. ಕುಟುಂಬದ ಎಲ್ಲಾ ಸದಸ್ಯರು ಹಾಗೂ ಸ್ನೇಹಿತರು ಬೆಳಿಗ್ಗೆ ಮನೆಯಿಂದ ಹೊರಟು ನದಿಯಲ್ಲಿ ಸ್ನಾನವನ್ನು ಮಾಡಿ, ತಾವು ತಂದಿದ್ದ ಶೇಂಗಾದ ಹೋಳಿಗೆ, ಎಳ್ಳಹಚ್ಚಿದ ರೊಟ್ಟಿ, ವಿವಿಧ ತರಕಾರಿಗಳನ್ನು ಹಾಕಿ ಸಿದ್ದ ಪಡಿಸಿದ ಭರತ (ಚಟ್ನಿ) ತುಪ್ಪಾ ಇನ್ನಿತರ ಆಹಾರ ಪದಾರ್ಥಗಳನ್ನು ಹಾಗೂ ಹಣ್ಣುಗಳನ್ನು ನದಿಯ ದಂಡೆಯ ಮೇಲೆ ಕುಳಿತು ಸವಿದರು.
ಎಳ್ಳು ಬೆಲ್ಲ ಕೊಟ್ಟು ಶುಭ ಕೋರಿಕೆ
ಸೈದಾಪುರ: ಇಲ್ಲಿಗೆ ಸಮೀಪದ ಗೂಗಲ್ ಬ್ಯಾರೇಜಿಗೆ ಹೊಂದಿಕೊಂಡ ನದಿ ದಡದಲ್ಲಿ ಸಂಕ್ರಾಂತಿ ಅಂಗವಾಗಿ ನೂರಾರು ಸಂಖ್ಯೆಯ ಜನರು ಪುಣ್ಯಸ್ನಾನ ಮಾಡಿದರು. ನಂತರ ಅಲ್ಲಮಪ್ರಭುವಿನ ದರ್ಶನ ಪಡೆದರು. ಇದಕ್ಕಾಗಿ ಸಾಲುಗಟ್ಟಿ ನಿಲ್ಲಬೇಕಾಯಿತು. ಮಕ್ಕಳು, ಮಹಿಳೆಯರು, ವಯೋವೃದ್ಧರು ಸೇರಿದಂತೆ ಅಪಾರ ಪ್ರಮಾಣದ ಜನಸ್ತೋಮವಿತ್ತು. ಎಳ್ಳು ಬೆಲ್ಲವನ್ನು ಕೊಟ್ಟು ಸಂಕ್ರಾತಿ ಹಬ್ಬದ ಶುಭ ಕೋರಿದರು. ವಿವಿಧ ಬಗೆಯ ಊಟದ ಬುತ್ತಿಯೊಂದಿಗೆ ಅದರ ಸವಿ ಅನುಭವಿಸಿದರು. ಇದೊಂದು ವಿಶೇಷ ದಿನವಾಗಿ ಮಕ್ಕಳಲ್ಲಿ ಕಂಡು ಬಂದಿತ್ತು. ಸಂಕ್ರಾತಿಯ ಸಂಭ್ರಮವನ್ನು ನದಿಯ ಪುಣ್ಯಸ್ನಾನ, ದೇವರ ದರ್ಶನ ಹಾಗೂ ರುಚಿರುಚಿಯಾದ ಊಟದೊಂದಿಗೆ ಆಚರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

