ದಕ್ಷ ಅಧಿಕಾರಿ ನಿಧನಕ್ಕೆ ಮೌನಾಚರಣೆ
ಸುರಪುರ: ಮುಂಬೈ ಪಾತಕಿ ಮುನ್ನಾ ಗುಂಡಿಗೆ ಬಲಿಯಾದ ದಕ್ಷ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಅವರ ನಿಧನಕ್ಕೆ ಜಿಲ್ಲಾ ವೀರಶೈವ ಯುವ ವೇದಿಕೆ ಹಾಗೂ ಕನ್ನಡ ಸೇನೆ ಜಂಟಿಯಾಗಿ ಬುಧವಾರ ಗಾಂಧಿ ವೃತ್ತದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದವು. 2 ನಿಮಿಷ ಮೌನಾಚರಿಸಿ ಮೃತರ ಆತ್ಮಕ್ಕೆ ಶಾಂತಿಕೋರಲಾಯಿತು.
ವೀರಶೈವ ಲಿಂಗಾಯತ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಮಂಜುನಾಥ ಜಾಲಹಳ್ಳಿ ಮಾತನಾಡಿ, ಸರ್ಕಾರ ಒಬ್ಬ ದಕ್ಷ ಅಧಿಕಾರಿಯನ್ನು ಕಳೆದುಕೊಂಡಿದೆ. ಬಂಡೆ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಕುಟುಂಬ ವರ್ಗಕ್ಕೆ ಉದ್ಯೋಗ ನೀಡಬೇಕು. ಮಕ್ಕಳನ್ನು ದತ್ತು ತೆಗೆದುಕೊಂಡು ಶಿಕ್ಷಣ ಕೊಡಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ಅಗತ್ಯ ನೆರವು ನೀಡಿ: ನ್ಯಾಯವಾದಿ ಜಿ.ಎಸ್. ಪಾಟೀಲ್ ಮಾತನಾಡಿ, ಇಂತಹ ಒಂದು ಸಾವಿನಿಂದ ಮುಂದಿನ ದಿನಗಳಲ್ಲಿ ದಕ್ಷಧಿಕಾರಿಗಳಿಗೆ ಸರ್ಕಾರ ಸಹಕಾರ ನೀಡದಿದ್ದರೆ ಮುನ್ನ ನಂತಹ ಗುಂಡಗಳೊಂದಿಗೆ ಕಾದಾಡಲು ಹಿಂಜರಿಯುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು. ಕಾರಣ ಸರ್ಕಾರ ಪೊಲೀಸ್ ಅಧಿಕಾರಿಗಳಿಗೆ ಅಗತ್ಯ ನೆರವು ನೀಡಬೇಕೆಂದು ಒತ್ತಾಯಿಸಿದರು.
ನಿರ್ಲಕ್ಷ್ಯವೇ ಕಾರಣ: ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ರಾಜೂ ಕುಂಬಾರ ಮಾತನಾಡಿ, ಬಂಡೆ ಸಾವಿಗೆ ಸರ್ಕಾರ ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯವೇ ಕಾರಣ. ವಿದೇಶದಲ್ಲಿ ಮಲಾಲಗೆ ನೀಡಿದಂತ ಚಿಕಿತ್ಸೆಯನ್ನು ಬಂಡೆಗೆ ನೀಡಿದ್ದರೆ ಅವರನ್ನು ಉಳಿಸಿಕೊಳ್ಳಬಹುದಿತ್ತು. ಸರ್ಕಾರ ಬಂಡೆ ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡಬೇಕೆಂದು ಹೇಳಿದರು.ರೈತಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿದರು. ಮುಖಂಡರಾದ ಸಿದ್ರಾಮಪ್ಪ ಪಾಟೀಲ್, ಮಹೇಶ ವಾಲಿ, ಚನ್ನಬಸಪ್ಪ ವಾಲಿ, ಗೌರಿಶಂಕರ ಎತ್ತಿನಮನಿ, ಸೋಮಶೇಖರ ಶಾಬಾದಿ, ಶರಣಗೌಡ ಮುನಮುಟಗಿ, ಚಂದ್ರಶೇಖರ ಲಕ್ಷ್ಮೀಪುರ, ಸಿದ್ದನಗೌಡ ಹೆಬ್ಬಾಳ, ವೆಂಕಟೇಶ ನಾಯಕ, ಸಂತೋಷ ಎತ್ತನಿಮನಿ, ಶರಣು ಜಾಲಹಳ್ಳಿ, ರಾಜು ಬಾರಿ, ಬುರನ್ ಅಲಿ, ಸಿದ್ದಣ್ಣ ಮುಧೋಳ, ಮಂಜುನಾಥ ತಳ್ಳಳ್ಳಿ, ದಿನೇಶ ದಾದ, ಸತೀಶ ಕೊಳ್ಳಿ, ಶರಣಯ್ಯ ಸ್ವಾಮಿ, ಭೀಮು ಕಳ್ಳಿಮನಿ ಇನ್ನಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

