ದೇಶದ ಅಭಿವೃದ್ಧಿ ಮೋದಿಯಿಂದ ಸಾಧ್ಯ: ಜೇವಗರ್
ಹುಣಸಗಿ: ದೇಶದ ಹಿತ ಕಾಪಾಡುವುದು ಬಿಜೆಪಿಯಿಂದ ಮಾತ್ರ ಸಾಧ್ಯ. ಬೇರೆ ಪಕ್ಷಗಳಲ್ಲಿ ಮೊದಲು ವ್ಯಕ್ತಿ, ನಂತರ ಪಕ್ಷ ತದನಂತರ ದೇಶ ಎಂಬ ಮಾತು ಇದೆ. ಆದರೆ ಬಿಜೆಪಿಯಲ್ಲಿ ಮಾತ್ರ ಮೊದಲು ದೇಶ ನಂತರ ಪಕ್ಷ ತದನಂತರ ವ್ಯಕ್ತಿ ಎಂದು ಬಿಜೆಪಿ ಪ್ರಮುಖ ವೇಣುಗೋಪಾಲ ಜೇವಗರ್ ಹೇಳಿದರು.
ಹುಣಸಗಿಯಲ್ಲಿ ನಡೆದ ವಿವಿಧ ಪಕ್ಷಗಳ ಕಾರ್ಯಕರ್ತತರನ್ನು ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು.
ಯುಪಿಎ ಸರ್ಕಾರದ ಬೆಲೆ ಏರಿಕೆ ನೀತಿ, ವಿವಿಧ ಹಗರಣಗಳಿಂದ ಜನತೆ ರೋಸಿ ಹೋಗಿದ್ದಾರೆ. ಮೋದಿ ಪ್ರಧಾನಿ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದು ಕಾಂಗ್ರೆಸ್ ಭಾರಿ ನಿರಾಶೆ ಮುಡಿಸಿದೆ. ದೇಶದ 72 ಕೋಟಿ ಯುವಕರ ಶಕ್ತಿಯನ್ನು ಮೋದಿ ಸದ್ಬಳಕೆ ಮಾಡುತ್ತಾರೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಬಿಜೆಪಿಗೆ ಬಂದಿರುವುದು ಪಕ್ಷಕ್ಕೆ ಹೆಚ್ಚು ಬಲ ಬಂದಿದೆ ಎಂದರು.
ತಾಲ್ಲೂಕು ಅಧ್ಯಕ್ಷ ಮಲ್ಲೇಶಿ ಪಾಟೀಲ ಮಾತನಾಡಿದರು. ಹುಣಸಗಿ ಯುವ ಮೋರ್ಚಾ ಘಟಕದ ಅಧ್ಯಕ್ಷ ಬಸವರಾಜ ಮೇಲಿನಮನಿ ಮಾತನಾಡಿದರು. ಬಸವರಾಜ ಜಡಿಮುರಾಳ, ರಂಗಪ್ಪನಾಯಕ, ಶರಣಬಸವ ಇತರು ಇದ್ದರು. ಬಸವರಾಜ ವೈಲಿ, ಆನಂದ ಬಾರಿಗಿಡದ, ವೆಂಕಟೇಶ ಅರಳಿಗಿಡದ, ಶರಣು ಮಲ್ಲಾಬಾದಿ, ಬಸವರಾಜ ಕಟ್ಟಿಮನಿ, ವೆಂಕೋಬ ಬೊಮ್ಮನಳ್ಳಿ, ಬಸವರಾಜ ಗೋಗಿ ಪಕ್ಷಕ್ಕೆ ಸೇರ್ಪಡೆಯಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

