ಗುಲ್ಬರ್ಗಾ

ಎಎಸ್‌ಐ ಉದ್ದಂಡಪ್ಪಗೆ ಪರಿಹಾರ: ಚಕಾರ ಎತ್ತದ ಸರ್ಕಾರ

Published On :

ಗುಲ್ಬರ್ಗ: ಪಾತಕಿ ಮುನ್ನಾ ಜತೆಗಿನ ಗುಂಡಿನ ಕಾಳಗದಲ್ಲಿ ಹೊಟ್ಟೆಗೆ ಗುಂಡು ತಗುಲಿ ತೀವ್ರ ಗಾಯಗೊಂಡ ರೋಜಾ ಠಾಣೆ ಎಎಸ್‌ಐ ಉದ್ದಂಡಪ್ಪ ಅವರಿಗೆ ಸರ್ಕಾರ ಪರಿಹಾರ ನೀಡುವ ವಿಚಾರವಾಗಿ ಚಕಾರವನ್ನೇ ಎತ್ತುತ್ತಿಲ್ಲ.
ಕರುಳಿಗೆ ಗುಂಡೇಟು ಬಿದ್ದಿದ್ದ ಉದ್ದಂಡಪ್ಪ ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ, ಸರ್ಕಾರದಿಂದ ಇದೂವರೆಗೂ ಪರಿಹಾರದ ಮಾತು ಬಾರದೇ ಇರುವುದು ಕುಟುಂಬದ ಸದಸ್ಯರನ್ನು ಆತಂಕಕ್ಕೀಡುಮಾಡಿದೆ. ಗೃಹ ಸಚಿವ ಜಾರ್ಜ್ ಗುಲ್ಬರ್ಗಕ್ಕೆ ಭೇಟಿ ನೀಡಿ ಗುಂಡಿನ ಕಾಳಗದಲ್ಲಿ ವೀರಮರಣ ಹೊಂದಿದ ಮಲ್ಲಿಕಾರ್ಜುನ ಬಂಡೆ ಅವರ ಕುಟುಂಬಕ್ಕೆ ಪರಿಹಾರ ನೀಡುವ ವಿಚಾರದಲ್ಲಿ ಅನೇಕ ಸಂಗತಿಗಳನ್ನು ಚರ್ಚಿಸಿದ್ದಾರೆ. ಆದರೆ, ಉದ್ದಂಡಪ್ಪ ಕುಟುಂಬದ ಬಗ್ಗೆ ಯಾವ ವಿಷಯವನ್ನೂ ಪ್ರಸ್ತಾಪಿಸದೆ ಹೋಗಿದ್ದು ಸೋಜಿಗವನ್ನುಂಟು ಮಾಡಿದೆ. ಇಂದಿನವರೆಗೂ ಉದ್ಧಂಡಪ್ಪ ಮನೆಗೆ ಜಿಲ್ಲಾಡಳಿತದ ಪರವಾಗಿ ಆಗಲಿ, ಪೊಲೀಸ್ ಇಲಾಖೆ ಪರವಾಗಿಯಾಗಲಿ ಹಿರಿಯ ಅಧಿಕಾರಿಗಳ್ಯಾರೂ ಭೇಟಿ ನೀಡಿಲ್ಲ ಎಂಬುದು ಬಂಧುಗಳ ಕೊರಗು. ಗುಲ್ಬರ್ಗಕ್ಕೆ ಭೇಟಿ ನೀಡಿದ್ದ ಎಡಿಜಿಪಿ ಎಂಎನ್ ರೆಡ್ಡಿ ಮಾತ್ರ ಗುಂಡಿನ ಕಾಳಗದಲ್ಲಿದ್ದ ತಂಡದ ಸದಸ್ಯರಗೆಲ್ಲ ಸಾಹಸ ಪುರಸ್ಕಾರಗಳಿಗೆ ಪರಿಗಣಿಸುವ ಇರಾದೆ ವ್ಯಕ್ತಪಡಿಸಿದ್ದರು. ಅಲ್ಲದೆ ಉದಾರವಾಗಿ ಬಹುಮಾನ ನೀಡಲಾಗುತ್ತದೆ ಎಂದಿದ್ದರು. ಅದನ್ನು ಹೊರತುಪಡಿಸಿದರೆ ಉದ್ದಂಡಪ್ಪ ವಿಚಾರದಲ್ಲಿ ಇಂದಿಗೂ ಪರಿಹಾರದ ಬಗ್ಗೆ ಸರ್ಕಾರ, ಪೊಲೀಸ್ ಇಲಾಖೆ ಚಕಾರವೆತ್ತಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.