ಕನ್ಯಾ ಕೊಳ್ಳೂರು ಕೊಲೆ, ಹಲ್ಲೆ ಘಟನೆಗೆ ಖಂಡನೆ
ಸುರಪುರ: ಇಲ್ಲಿಯ ಸಾಮೂಹಿಕ ದಲಿತ ಸಂಘಟನೆಗಳು ಶುಕ್ರವಾರ ಶಹಾಪುರ ತಾಲೂಕಿನ ಕನ್ಯಾ ಕೊಳ್ಳೂರು ಗ್ರಾಮದ ದಲಿತ ಮಾದಿಗ ಸಮಾಜದ ಮುಖಂಡ ದೇವಿಂದ್ರಪ್ಪ ದಳಪತಿ ಕೊಲೆ ಮತ್ತು ದಲಿತರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಖಂಡಿಸಿ ಗಾಂಧಿವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದವು.
ವೇದಿಕೆಯ ಮುಖಂಡರು ಮಾತನಾಡಿ, ಕ್ಷುಲಕ ಕಾರಣಕ್ಕಾಗಿ ದಲಿತರ ಮೇಲೆ ಸರ್ವಣೀಯರು ಹಲ್ಲೆ ಮಾಡಿರುವುದು ಖಂಡನೀಯ. ಪೊಲೀಸರ ಸಮ್ಮುಖದಲ್ಲಿಯೇ ದಲಿತ ವ್ಯಕ್ತಿಯನ್ನು ಹಟ್ಟಹಾಸವಾಗಿ ಕೊಲೆ ಮಾಡಿರುವುದು ಗುಂಡಾಗಿರಿ. ಕಣ್ಣೆದುರಿನಲ್ಲೇ ಭೀಕರ ಕೊಲೆ ನಡೆಯುತಿದ್ದರು ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ಮೂಕ ಪ್ರೇಕ್ಷಕರಾಗಿರುವುದು ನಾಚಿಕೆಗೇಡಿನ ಪ್ರಸಂಗ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಆರೋಪಿಗಳನ್ನು ಬಂಧಿಸಿ: ದೇವಿಂದ್ರಪ್ಪ ದಳಪತಿ ಕೊಲೆ ಮಾಡಿ ಉಳಿದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಅದೇ ಗ್ರಾಮದ ಅದೇ ಗ್ರಾಮದ ಆರೋಪಿಗಳನ್ನು ಬಂಧಿಸಬೇಕು. ಗ್ರಾಮದ ದಲಿತ ಕುಟುಂಬಗಳಿಗೆ ಸೂಕ್ತ ರಕ್ಷಣೆ ನೀಡಬೇಕು. ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಿ, ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕೆಂದು ಒತ್ತಾಯಿಸಿದರು.
ಅಖಿಲ ಭಾರತ ದಲಿತ ಮತ್ತು ಮೈನಾರೀಟಸ್ ಕ್ರಿಯಾ ಸಮಿತಿ ತಾಲೂಕು ಅಧ್ಯಕ್ಷ ಬಲಭೀಮಪ್ಪ ದೊಡ್ಡಮನಿ, ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಭೀಮರಾಯ ಕಡಿಮನಿ, ಆದಿ ಜಾಂಭವ ಕಲ್ಯಾಣ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಹಣಮಂತ ಕಟ್ಟಿಮನಿ, ಪ್ರಮುಖರಾದ ಹಣಮಂತ ದೇವರಗೋನಾಲ, ದೇವಿಂದ್ರಪ್ಪ ದೊಡ್ಮನಿ, ಬಸವರಾಜ ಕಡಿಮನಿ, ಮಲ್ಲಿಕಾರ್ಜುನ ಮಂದಾಲೆ, ನಾಗರಾಜ ಓಕಳಿ, ಯಲ್ಲಪ್ಪ ತಳ್ಳಳ್ಳಿ, ಭೀಮರಾಯ ಕುಂಬಾರಪೇಟೆ, ಹಣಮಂತ ದೊಡ್ಡಮನಿ ಬೋನ್ಹಾಳ, ಮರೆಪ್ಪ ಮ್ಯಾಗೇರಿ, ಕೃಷ್ಣಾ ಕಡಮನಿ, ಮಲ್ಲಿಕಾರ್ಜುನ ಅನಸೂರು, ಕೆಂಚಪ್ಪ ಕಟ್ಟಿಮನಿ, ಹಣಮಂತ ಆಲ್ದಾಳ, ಮಲ್ಲು ಗೋಗಿಕೇರಿ, ರಮೇಶ ಕಟ್ಟಿಮನಿ, ಪರಮಣ್ಣ ಮಂಜಲಾಪುರ, ಬಸವರಾಜ ಕಟ್ಟಿಮನಿ, ಮಹೇಂದ್ರಕುಮಾರ ಬಿಲ್ಲವ್, ಶಿವಲಿಂಗಪ್ಪ ಚಲುವಾದಿ ಇದ್ದರು. ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

