ನಾಲ್ಕು ವರ್ಷ ಕಳೆದರೂ ನಡೆಯದ ಜಿಲ್ಲಾ ಉತ್ಸವ
ಗುರುಮಠಕಲ್: ಡಿ. 31ಕ್ಕೆ ಯಾದಗಿರಿ ಜಿಲ್ಲಾ ಕೇಂದ್ರವಾಗಿ 4 ವರ್ಷ ಪೂರ್ಣವಾಗಿದೆ. ಆದರೆ ಯಾದಗಿರಿ ಜಿಲ್ಲೆ ಚೊಚ್ಚಲು ಉತ್ಸವ ಮಾತ್ರ ಇಲ್ಲಿಯವರೆಗೆ ನಡೆಯದಿರುವುದು ಇಲ್ಲಿನ ಜನತೆ ಹಾಗೂ ಸಾಹಿತಿಗಳು, ಹೋರಾಟಗಾರರ ಅಸಮಧಾನಕ್ಕೆ ಕಾರಣವಾಗಿದೆ.
ಗುಲ್ಬರ್ಗದಿಂದ ಯಾದಗಿರಿ ಬೇರ್ಪಟ್ಟು, ನಾಲ್ಕು ವರ್ಷ ಮುಗಿದು 5ನೇ ವರ್ಷಕ್ಕೆ ಪಾದರ್ಪಣೆ ಮಾಡಿದೆ. ಅದರೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಪ್ರಥಮ ಜಿಲ್ಲಾ ಸಹ ಆಯೋಜನೆ ಮಾಡುವಲ್ಲಿ ವಿಫಲವಾಗಿರುವುದು ದೊಡ್ಡ ದುರಂತವೇ ಸರಿ.
ಉತ್ಸವ ದಿನಾಂಕ ನಿಗದಿ ಇಲ್ಲ: ನೆರೆಯ ಜಿಲ್ಲೆ ಬೀದರ್ನಲ್ಲಿ ಜಿಲ್ಲಾಡಳಿತದಿಂದ ಜಿಲ್ಲಾ ಉತ್ಸವ ಆಯೋಜಿಸಲಾಗುತ್ತಿದ್ದು, ಈ ವರ್ಷವೂ ಫೆ.01,02,03ರಂದು ಬಿದರ ಜಿಲ್ಲಾ ಉತ್ಸವದ ದಿನಾಂಕ ನಿಗದಿಯಾಗಿದೆ. ಆದರೆ ಯಾದಗಿರೂ ಜಿಲ್ಲೆಯಾಗಿ 4 ವರ್ಷ ಗತಿಸಿದರೂ ಜಿಲ್ಲಾ ಉತ್ಸವದ ದಿನಾಂಕ ಹಲವು ಬಾರಿ ನಿಗದಿಯಾಗಿ, ಮತ್ತೆ ಮುಂದೂಡುತ್ತಲೇ ಇದೆ.
ಬೀದರ್ ಮಾದರಿಯಾಗಲಿ: ಬೀದರ್ ಜಿಲ್ಲಾ ಉತ್ಸವವನ್ನು ಅಚರಿಸುತ್ತ ಅಲ್ಲಿನ ಸಂಸ್ಕೃತಿ ಸಾಹಿತ್ಯ, ಕಲೆಯನ್ನು ಎಲ್ಲರಿಗೆ ಪರಿಚಯಿಸುತ್ತ ಅಲ್ಲಿನ ಸಾಹಿತ್ಯವನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವುದು ತಿಳಿದಿರುವ ವಿಷಯವೇ. ಇದು ಯಾದಗಿರಿ ಜಿಲ್ಲೆಗೆ ಮಾದರಿಯಾಗಬೇಕಾಗಿದೆ.
ಜಿಲ್ಲಾಡಳಿತ ಗಮನ ಹರಿಸಲಿ: 30ನೇ ಜಿಲ್ಲಾ ಕೇಂದ್ರವಾದ ಯಾದಗಿರಿ ಜಿಲ್ಲೆಯಲ್ಲಿ ಜಿಲ್ಲಾ ಉತ್ಸವವನ್ನು ಸರ್ಕಾರದ ವತಿಯಿಂದ ಆ ಭಾಗದ ಎಲ್ಲಾ ಸಂಘಟಕರ ಸಹಯೋಗದಲ್ಲಿ ಉತ್ಸವಗಳನ್ನು ಆಯೋಜನೆ ಮಾಡುವಲ್ಲಿ ಸರ್ಕಾರ ಗಮನ ಹರಿಸಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

