ಮನೆಮನೆಗಳಲ್ಲೂ ಭಾಗವತ ಶ್ಲೋಕಾನುವಾದ ಯೋಜನೆ
ಗುಲ್ಬರ್ಗ: ಲೋಕಕಲ್ಯಾಣದ ದೃಷ್ಟಿಯಿಂದ ಮತ್ತು ಸಮಾಜದ ಎಲ್ಲಾ ವರ್ಗದವರ ಕ್ಷೇಮಾಭ್ಯುದಯಕ್ಕಾಗಿ ಉಡುಪಿ ಭಂಡಾರಕೇರಿ ಮಠಾಧೀಶರಾದ ವಿದ್ಯೇಶತೀರ್ಥ ಶ್ರೀಪಾದರು ಮನೆಮನೆಗಳಲ್ಲೂ ಭಾಗವತ ಶ್ಲೋಕಾನುವಾದದ ತಮ್ಮ ವಿಶಿಷ್ಟ ಯೋಜನೆಯ ಅಂಗವಾಗಿ ಗುಲ್ಬರ್ಗ ನಗರ ಸಂಚಾರ ಆರಂಭಿಸಿದ್ದಾರೆ.
ಜ. 17ರಂದೇ ನಗರ ಪ್ರವೇಶ ಮಾಡಿರುವ ಶ್ರೀಪಾದರು ಜ. 24 ರವರೆಗೂ ಇಲ್ಲಿ ವಾಸ್ತವ್ಯ ಹೂಡಿ ಮನೆ- ಮನಗಳಲ್ಲಿ ಭಾಗವತ ಜ್ಞಾನದ ಬೆಳಕನ್ನು ಬೆಳಗಿಸಲಿದ್ದಾರೆ. ಗುರುಗಳ ಷಷ್ಠ್ಯಬ್ಧಿ ಅಭಿವಂದನೆಯ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. 60 ಸಾರ್ಥಕ ವರ್ಷಗಳ ಧಾರ್ಮಿಕ ಜೀವನದ ಈ ಸಂದರ್ಭದಲ್ಲಿ ಗುರುಗಳು ಗುಲ್ಬರ್ಗ ನಗರದಲ್ಲಿ ಒಂದು ವಾರ ಸಂಚಾರದಲ್ಲಿದ್ದು ಪಾದಪೂಜೆ, ಗೃಹ ಭಾಗವತ ಶ್ಲೋಕಾನುವಾದ, ಪೂಜಾದಿಗಳಲ್ಲಿ ಭಾಗವಹಿಸಲಿದ್ದಾರೆ.
ಭಕ್ತಾದಿಗಳು ನವಲಿ ಕೃಷ್ಣಾಚಾರ್ಯ- 94486 52620, ರವಿ ಲಾತೂರಕರ್- 98455 66994 ಅಥವಾ ಸುಧೀಂದ್ರ ಕೆರೂರ್- 94489 02558 ಇವರನ್ನು ಸಂಪರ್ಕಿಸಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

