ಗುಲ್ಬರ್ಗಾ

ದೋರನಹಳ್ಳಿ ಗ್ರಾಪಂ ಅವ್ಯವಸ್ಥೆ

Published On :

ಶಹಾಪುರ: ತಾಲೂಕಿನ ದೋರನಹಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ 2012-13 ನೇ ಸಾಲಿನ ಹಣಕಾಸು ಕ್ರಿಯಾ ಯೋಜನೆಗೆ ಬಂದ ಹಣದಲ್ಲಿ ನಿಗದಿತ ಕಾಮಗಾರಿಗಳಾಗದೇ ಸಂಪೂರ್ಣ ದುರುಪಯೋಗವಾಗಿದೆ ಎಂದು ದೋರನಹಳ್ಳಿಯ ಅಂಬೇಡ್ಕರ್ ನಗರದ ದಲಿತ ಮುಖಂಡ ನಿಂಗಪ್ಪ ಎಸ್. ಹಾಲಭಾವಿ ಮುಖ್ಯಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಸಮಗ್ರ ತನಿಖೆಗೆ ಆಗ್ರಹಿಸಿ ಮನವಿ ಸಲ್ಲಿಸಿದ್ದಾರೆ.
  ದೋರನಹಳ್ಳಿಗೆ 9 ಲಕ್ಷ ಅಧಿಕ ಹಣದ ಕ್ರಿಯಾಯೋಜನೆ ಇದ್ದರೂ ಕಾಮಗಾರಿಗಳು ಕಾಣುತ್ತಿಲ್ಲ.
ನಿಗದಿಪಡಿಸಿದ ಒಟ್ಟು ಹಣ: ಮುಖ್ಯವಾಗಿ ದೋರನಹಳ್ಳಿ ಗ್ರಾಮದಲ್ಲಿ ಮುಖ್ಯರಸ್ತೆಯಿಂದ ಅಗಸಿವರೆಗೆ ರಸ್ತೆ ಕಾಮಗಾರಿಗೆ ನಿಗದಿಪಡಿಸಿದ ಒಟ್ಟ 1 ಲಕ್ಷ, ಗ್ರಾಮದ ಜಂಬಣ್ಣ ಅಗಸಿಯಿಂದ ತಳವಾರ ಬಾಯಿವರೆಗೆ ರಸ್ತೆ ಕಾಮಗಾರಿಗೆ ನಿಗದಿಪಡಿಸಿದ ಒಟ್ಟು ಹಣ 88 ಸಾವಿರ, ಬೇವಿನಹಳ್ಳಿ ಮತ್ತು ದೋರನಹಳ್ಳಿ ತಾಂಡಾ ಗ್ರಾಮದಲ್ಲಿ ಕುಡಿವ ನೀರು ಹಾಗೂ ದುರಸ್ತಿಗಾಗಿ ಪೈಪ್‌ಲೈನ್ ಮೋಟಾರು ಖರೀದಿ ಈ ಕಾಮಗಾರಿಗೆ ನಿಗದಿಪಡಿಸಿದ ಒಟ್ಟು ಹಣ 1 ಲಕ್ಷ, ಪರಿಶಿಷ್ಟ ಜಾತಿ ಜಂಬಣ್ಣ ಅಗಸಿಯಿಂದ ಅಂಬೇಡ್ಕರ್ ಚೌಕವರೆಗೆ ರಸ್ತೆ ಕಾಮಗಾರಿಗೆ ನಿಗದಿ ಪಡಿಸಿದ ಹಣ 1 ಲಕ್ಷ, ಗ್ರಾಮದಲ್ಲಿ ಪರಿಶಿಷ್ಟ ಜಾತಿ ಪುತ್ರಪ್ಪ ಮನೆಯಿಂದ ನಿಂಗಪ್ಪ ಶಹಾಪುರ ಮನಡಯವರಿಗೆ ರಸ್ತೆ ಕಾಮಗಾರಿಗೆ ನಿಗದಿಪಡಿಸಿದ ಹಣ 1.25 ಸಾವಿರ, ಬೇವಿನಹಳ್ಳಿ ಗ್ರಾಮದಲ್ಲಿ ಸಿದ್ದಯ್ಯನ ಗುಡಿಯಿಂದ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆವರೆಗೆ ಚರಂಡಿ ಕಾಮಗಾರಿ ನಿಗದಿಪಡಿಸಿದ ಹಣ 60 ಸಾವಿರ, ದೋರನಹಳ್ಳಿಯಲ್ಲಿ ಕೊಂಡಡಗಿಯಿಂದ ಗ್ರಾಪಂ.ವರೆಗೆ ಚರಂಡಿ ಕಾಮಗಾರಿಗೆ 50331, ಅಂಗವಿಕಲರಿಗಾಗಿ ನಿಗದಿಪಡಿಸಿದ ಹಣ 27 ಸಾವಿರ ಕಲ್ಪಿಸಿದ್ದು ದಿ. 24-05-2013 ರಂದು ಸಾಮಾನ್ಯ ಸಭೆಯಲ್ಲಿ ಅನುಮೊದನೆ ಪಡಯಲಾಗಿದೆ.
ಸಂಪೂರ್ಣ ತನಿಖೆಯಾಗಲಿ: ಎಲ್ಲಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದೇ ಬೋಗಸ್ ಬಿಲ್‌ಮಾಡಿ ಸಂಪೂರ್ಣ ಹಣ ಲೂಟಿ ಮಾಡಿದ್ದಾರೆ. ಇದರ ಬಗ್ಗೆ ಸಂಪೂರ್ಣ ತನಿಖೆ ಮಾಡಬೇಕು. 13ನೇ ಹಣಕಾಸಿನ ಯೋಜನೆಗೆ ಹಣ ಬಿಡುಗಡೆ ಮಾಡಿದ್ದರು ಯಾವುದೇ ಕಾಮಗಾರಿಗಳನ್ನು ಮಾಡದೇ ಹಣ ಲೂಟಿ ಮಾಡುತ್ತಾ ಬಂದಿದ್ದಾರೆ. ದಿ. 18-12-2013 ರಂದು ದೋರನಹಳ್ಳಿ ಗ್ರಾಪಂ ಮುಂದೆ ಒಂದು ದಿನದ ಸಾಂಕೇತಿಕ ಧರಣಿ ಮಾಡಿದ್ರು ಇದುವರೆಗೆ ಯಾವುದೇ ತನಿಖೆ ಮಾಡಿರುವುದಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ. ತಕ್ಷಣವೇ ಇದರ ಬಗ್ಗೆ ಸಂಪೂರ್ಣ ತನಿಖೆ ಮಾಡಿ ಅಧ್ಯಕ್ಷರು ಹಾಗೂ ಅಭಿವೃದ್ಧಿಅಧಿಕಾರಿಗಳ ವಿರುದ್ಧ ಸೂಕ್ತಕ್ರಮ ಕೈಗೊಳ್ಳಬೇಕೆಂದು ನಿಂಗಣ್ಣ ಹಾಲಭಾವಿ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.