ಗುಲ್ಬರ್ಗಾ

ಸಿದ್ದರಾಮೇಶ್ವರ ಭವನಕ್ಕೆ ಶಾಸಕರಿಂದ ಅಡಿಗಲ್ಲು

Published On :

ಆಳಂದ: ಪಟ್ಟಣದ ಬೋವಿ ವಡ್ಡರ ಸಮಾಜದ ಬಡಾವಣೆಯಲ್ಲಿ ಶಾಸಕರ 5 ಲಕ್ಷ ರೂಪಾಯಿ ನಿಧಿಯಡಿಯಲ್ಲಿ ಶಿವಯೋಗಿ ಸಿದ್ಧರಾಮೇಶ್ವರ ಭವನ ನಿರ್ಮಾಣಕ್ಕೆ ಶಾಸಕ ಬಿ.ಆರ್. ಪಾಟೀಲ್ ಗುದ್ದಲಿ ಪೂಜೆ ನೆರವೇರಿಸಿದರು. ನಂತರ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ, ಶಾಸಕರು, ಭವನ ನಿರ್ಮಾಣದಿಂದ ಸ್ಥಳೀಯರು ಮತ್ತು ಗ್ರಾಮೀಣ ಭಾಗದ ಜನರು ವಿವಿಧ ಕೆಲಸ ಕಾರ್ಯಗಳಿಗಾಗಿ ಬರುವುದು ಸಾಮಾನ್ಯ. ಆದರೆ, ವ್ಯವಸ್ಥಿತವಾಗಿ ಸಮಾಜದ ಜನರು ಒಂದಡೆ ಸೇರಲು ಸೂಕ್ತವಾದ ಸ್ಥಳವಿಲ್ಲದಂತಾಗಿದೆ. ಭವನ ನಿರ್ಮಾಣದಿಂದ ಬೋವಿ ಜನರ ಮದುವೆ, ಧಾರ್ಮಿಕ  ಕಾರ್ಯಕ್ರಮಗಳು ಹಮ್ಮಿಕೊಳ್ಳಲು ಅನುಕೂಲವಾಗಲಿದೆ ಎಂದರು. ಪುರಸಭೆ ಮಾಜಿ ಅಧ್ಯಕ್ಷ ವಿಠಲರಾವ ಪಾಟೀಲ್, ಬೋವಿ ಸಮಾಜದ ವಿಭಾಗೀಯ ಮುಖಂಡ ಸುಭಾಷ ಬನ್ನಪೇಟ, ಜಿಪಂ. ಎಇಇ ಅಬ್ದುಲ್ ಸಲಾಂ, ಸಮಾಜದ ಅಧ್ಯಕ್ಷ ತಾಯಪ್ಪ ಗುತ್ತೇದಾರ, ಅಣಪ್ಪಾ ಗುತ್ತೇದಾರ, ದೇವೆಂದ್ರ ದಂಡಗುಲೇ, ಶೆಟ್ಟೆಪ್ಪ ಗುತ್ತೇದಾರ, ಬಡಪ್ಪಾ ಕೆ. ದಂಡಗೂಳೆ, ಅಂಬಣ್ಣಾ ಕುಸಳಕರ್, ಹಣಮಂತ ಕುಸಳಕರ್, ದೇವಿಂದ್ರಪ್ಪಾ ಎಂ. ದಂಡಗುಲೆ ಅನೇಕರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.