ಕನ್ಯಾಕೋಳೂರಿಗೆ ಪೊಲೀಸ್ ಮಹಾನಿರ್ದೇಶಕ
ಶಹಾಪುರ: ರಾಜ್ಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಎಂ.ಎನ್. ರೆಡ್ಡಿ ತಾಲೂಕಿನ ಕನ್ಯಾಕೋಳೂರು ಗ್ರಾಮಕ್ಕೆ ಭೇಟಿ ನೀಡಿ ಇತ್ತೀಚಿಗೆ ನಡೆದ ದಲಿತ ಮುಖಂಡ ದೇವಿಂದ್ರಪ್ಪ ದಳಪತಿ ಕೊಲೆ ಘಟನೆಗೆ ಸಂಬಂಧ್ನಿದಂತೆ ಪಿಐ ಜೆಎಸ್ ನ್ಯಾಮಗೌಡರ ಅವರಿಂದ ಘಟನೆಯ ಬಗ್ಗೆ ಮಾಹಿತಿ ಪಡೆದರು.
ಇಲ್ಲಿಯವರೆಗೆ ಬಂಧ್ನಿದ ಆರೋಪಿಗಳು ಘಟನೆಯಲ್ಲಿ ಗಾಯಗೊಂಡವರು ಘಟನೆಯ ಮೂಲಕಾರಣದ ಬಗ್ಗೆಯೂ ಸಮಗ್ರ ಮಾಹಿತಿ ಪಡೆದು, ಘಟನೆಯ ಸ್ಥಳವನ್ನು ಪರಿಶೀಲ್ನಿದರು.
ನಂತರ ಮೃತ ದೇವಿಂದ್ರಪ್ಪ ದಳಪತಿ ಮನೆಗೆ ತೆರಳಿ ಕುಟುಂಬದ ಸದಸ್ಯರಿಗೆ ಆತ್ಮವಿಶ್ವಾಸ ತುಂಬಿದ ಅಧಿಕಾರಿಗಳು, ಸರ್ಕಾರ ಪೊಲೀಸ್ ಇಲಾಖೆ ಈ ಘಟನೆಯನ್ನು ಗಂಭೀರವಾಗಿ ಪರಿಗಣ್ನಿದ್ದು, ತಪ್ಪಿತಸ್ಥರಿಗೆ ಕಾನೂನಿನನ್ವಯ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳ್ನಿದರು. ಎಷ್ಟೋ ಗ್ರಾಮದ ಅಮಾಯಕರು ಘಟನೆ ಸುದ್ದಿ ತಿಳಿದು ಗ್ರಾಮ ತೊರೆದಿದ್ದಾರೆ. ಅಂಥವರಿಗೆ ಎಲ್ಲರೂ ಸೇರಿ ವಿಶ್ವಾಸ ತುಂಬಿ ಮರಳಿ ಬರುವಂತೆ ಮಾಡಬೇಕು. ಸಾಮರಸ್ಯದ ಬಾಳು ಗ್ರಾಮದಲ್ಲಿ ಎಂದಿನಂತೆ ನಡೆಯಬೇಕು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

