ಗುಲ್ಬರ್ಗಾ

10ನೇ ತಾರೀಖಿನೊಳಗೆ ಪಡಿತರ ವಿತರಣೆಗೆ ಸೂಚನೆ

Published On :

ಸುರಪುರ: ಫೆಬ್ರವರಿ ತಿಂಗಳಿನಿಂದ ತಾಲೂಕಿನ ಪ್ರತಿ ನ್ಯಾಯಬೆಲೆ ಅಂಗಡಿಗಳಲ್ಲಿ 10ನೇ ತಾರೀಖಿನೊಳಗಾಗಿ ಕಾರ್ಡ್ದಾರರಿಗೆ ಕಡ್ಡಾಯವಾಗಿ ಪಡಿತರ ವಿತರಿಸಬೇಕು ಎಂದು ಆಹಾರ ನಿರೀಕ್ಷಕ ವಿಶ್ವರಾಧ್ಯ ಸತ್ಯಂಪೇಟೆ ಸೂಚನೆ ನೀಡಿದ್ದಾರೆ.
ಇಲ್ಲಿಯ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿದ ನ್ಯಾಯಬೆಲೆ ಅಂಗಡಿಗಳ ಡೀಲರ್ಗಳ ತಾಲೂಕು ಮಟ್ಟದ ಸಭೆಯಲ್ಲಿ ಮಾತನಾಡಿ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ ನೀಡಲಾಗುವ ಆಹಾರ ಧಾನ್ಯಗಳ ಎತ್ತುವಳಿಗಾಗಿ ಡೀಲರ್ಗಳು ಪ್ರತಿ ತಿಂಗಳು 20ರ ಒಳಗಾಗಿ ಡಿಡಿ ಸಲ್ಲಿಸಬೇಕು ಎಂದು ತಿಳ್ನಿದರು.
30ರ ಒಳಗಾಗಿ ಆಹಾರ ಧಾನ್ಯ ಎತ್ತುವಳಿಯಾಗಬೇಕು. 1ರಿಂದ 10ರವರೆಗೆ ನಿಗದಿತ ಸಮಯದ ವರೆಗೆ ಅಂಗಡಿ ಆರಂಭ್ನಿ ಪಡೀತರ ವಿತರಿಸಬೇಕು ಮತ್ತು 10ನೇ ತಾರೀಖು ಸಂಜೆ 5 ಗಂಟೆಗೆ ಬಾಕಿ ಉಳಿದಿರುವ ಪಡಿತರ ಧಾನ್ಯಗಳ ಶಿಲ್ಕ್ ಅಂತಿಮಗೊಳಿಸಬೇಕು ಎಂದು ಹೇಳಿದರು.
11ರ ನಂತರ ಇಲ್ಲ: ಈ ಬಗ್ಗೆ 11ರಂದು ಆಹಾರ ಇಲಾಖೆಗೆ ಮಾಹಿತಿ ಸಲ್ಲಿಸಬೇಕು. 11ರಂದು ಬರುವ ಕಾರ್ಡುದಾರರಿಗೆ ಆಹಾರ ಧಾನ್ಯ ನೀಡುವಂತಿಲ್ಲ. ಒಂದು ವೇಳೆ ನೀಡಲೇಬೇಕಾಗಿದ್ದಲ್ಲಿ ಮುಂದಿನ ತಿಂಗಳಲ್ಲಿ ನಮೂದಿಸಬೇಕು ಎಂದು ತಾಕೀತು ಮಾಡಿದರು.
ಬೈಮೆಟ್ರಿಕ್ ಮತ್ತು ನವೀಕರಣ ಮಾಡಿಕೊಳ್ಳದ ಕಾರ್ಡುದಾರರಿಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿದ್ದು, ಅಂಥವರಿಗೆ ತಿಳಿ ಹೇಳಿ ಕಳುಹಿಸಬೇಕು. ಅನ್ನಭಾಗ್ಯ ಯೋಜನೆಯನ್ನು ಸರಕಾರ ಖಾತ್ರಿ ಯೋಜನೆಯನ್ನಾಗಿ ರೂಪ್ನಿದೆ. ಈ ಹಿನ್ನೆಲೆಯಲ್ಲಿ ಡೀಲರ್ಗಳು ಸರ್ಕಾರ ನಿಗದಿಪಡ್ನಿದ ನಿರ್ದೇಶನಗಳನ್ನು ಪಾಲಿಸಬೇಕು. ಪಡಿತರ ಪಾರದರ್ಶಕ ವಿತರಣೆಗೆ ಸಹಕಾರ ನೀಡಬೇಕು ಎಂದು ಕೋರಿದರು. ಆಹಾರ ಶಿರಸ್ತೇದಾರ ರವಿಕುಮಾರ ಕಲ್ಬುರ್ಗಿ ಮತ್ತು ತಾಲೂಕಿನ ಹಲವಾರು ಡೀಲರ್ಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.