ಜಾತ್ಯತೀತ ಸಮಾಜಕ್ಕಾಗಿ ಶ್ರಮಿಸಿದ ನಿಷ್ಠುರವಾದಿ ನಿಜಶರಣ
ಸುರಪುರ: ಸಮಾಜದ ನೈಜ ಚಿತ್ರಣ ನೀಡುವದರ ಜೊತೆಗೆ ಓರೆ-ಕೋರೆಗಳನ್ನು ತಿದ್ದಿ, ತನ್ನ ವಚನಗಳ ಮೂಲಕ 12ನೇ ಶತಮಾನದಲ್ಲಿಯೇ ಜಾಗೃತಿ ಮೂಡಿಸಿದ ಅಂಬಿಗರ ಚೌಡಯ್ಯ ಒಬ್ಬ ಕ್ರಾಂತಿಕಾರಿ ವಚನಕಾರರಾಗಿದ್ದರು ಎಂದು ಉಪನ್ಯಾಸಕ ರಾಘವೇಂದ್ರ ಗುಡುಗುಂಟಿ ಹೇಳಿದರು.
ಇಲ್ಲಿಯ ಮಿನಿ ವಿಧಾನಸೌಧದ ಆವರಣದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ ಮಂಗಳವಾರ ಉಪನ್ಯಾಸ ನೀಡಿ, ಚೌಡಯ್ಯ ಸದಾ ನೀರಿನೊಂದಿಗೆ ವ್ಯವಹರಿಸುವ ಅಂಬಿಗನಾದರೂ, ಸಂಸಾರ ಎಂಬ ಭವಸಾಗರ ದಾಟಿ ಮೋಕ್ಷ ಹೊಂದುವ ಬಗೆಯನ್ನು ತನ್ನ ವಚನಗಳ ಮೂಲಕ ತೋರಿಸಿಕೊಟ್ಟ ಒಬ್ಬ ಶ್ರೇಷ್ಠ ಮಾರ್ಗದರ್ಶಕ ಎಂದರು.
ಚಿಂತನೆ: ಉಪನ್ಯಾಸಕ ಮಲ್ಲಿಕಾರ್ಜುನ ಕಮತಗಿ ಮಾತನಾಡಿ, ಜಾತತಿತ ಸಮಾಜ ಕಟ್ಟಲು ಶ್ರಮಿಸಿದ ನಿಷ್ಠೂರವಾದಿ ನಿಜಶರಣ ಅಂಬಿಗರ ಚೌಡಯ್ಯ. ತಮ್ಮ ವೈಚಾರಿಕ ಚಿಂತನೆಗಳ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಿಸಲು ಪ್ರಾಮಾಣಿಕ ಕಾಯಕ ಮಾಡಿದ ಶರಣ ಎಂದು ಹೇಳಿದರು. ತಾಪಂ ಅಧ್ಯಕ್ಷ ಶ್ರೀನಿವಾಸ ಪಾಟೀಲ್, ಪುರಸಭೆ ಅಧ್ಯಕ್ಷ ದೇವಿಂದ್ರಪ್ಪ ಕಳ್ಳಿಮನಿ ಉದ್ಘಾಟಿಸಿ ಮಾತನಾಡಿದರು. ತಹಸೀಲ್ದಾರ್ ಅರುಣಕುಮಾರ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾಜದ ತಾಲೂಕಾಧ್ಯಕ್ಷ ಯಂಕಣ್ಣ ಕಟ್ಟಿಮನಿ ವೇದಿಕೆಯಲ್ಲಿದ್ದರು.
ತಾಪಂ ಇಒ ಪ್ರಭಯ್ಯ ಹಿರೇಮಠ, ಜಿಪಂ ಎಇಇ ಬಸಯ್ಯ ಹಿರೇಮಠ, ಅಬಕಾರಿ ಇನ್ಸಪೆಕ್ಟರ್ ಭಾರತಿ, ಅಧಿಕಾರಿಗಳಾದ ಯಲ್ಲಪ್ಪ ನಾಯಕ, ಬಸವರಾಜ ಇನಾಂದಾರ್, ಮುಖಂಡರಾದ ದತ್ತಾತ್ರೇಯ ಗುತ್ತೇದಾರ್, ಮಾನಪ್ಪ ಸೂಗೂರು, ವೆಂಕಟರೆಡ್ಡಿ ಭೋವಿ, ಪಾರಪ್ಪ ಗುತ್ತೇದಾರ್, ವೆಂಕಟೇಶ, ಹರಿಶ್ಚಂದ್ರ ಕಟ್ಟಿಮನಿ, ನಂದಣ್ಣ ಬಾಕ್ಲಿ, ಹಣಮಂತ ಯಲ್ಲಗೋಡ್, ಜಕಪ್ಪ ಕಟ್ಟಿಮನಿ, ರಾಮಣ್ಣ ಪೂಜಾರಿ, ಸಾಯಿಬಣ್ಣ ಪೂಜಾರಿ, ಸಂಗಣ್ಣ ಬಾಕ್ಲಿ, ವಿನೋದ ಬಾಕ್ಲಿ, ಭಂಡಾರೆಪ್ಪ ನಾಟೇಕರ್,ಶರಣಪ್ಪ ದಖನಿ, ಆದಪ್ಪ ಹೊಸ್ಮನಿ, ನಾಗಣ್ಣ ಕಲ್ಲದೇವನಹಳ್ಳಿ, ಧರ್ಮರಾಜ ಬಡಿಗೇರ್, ಬಸವಲಿಂಗಪ್ಪ ಐನಾಪುರ, ರಮೇಶ ಇನ್ನಿತರರಿದ್ದರು. ಹಣಮಂತರಾಯ ಕಮತಗಿ ಸ್ವಾಗತಿಸಿ ಸಿದ್ದಯ್ಯಸ್ವಾಮಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

