ಗುಲ್ಬರ್ಗಾ

ನಿರ್ವಹಣೆ ಕೊರತೆ: ಗಬ್ಬೆದ್ದಿರುವ ಮೂತ್ರಾಲಯ

Published On :

ಮುದಗಲ್:  ಪ.ಪಂ. ವ್ಯಾಪ್ತಿಯಲ್ಲಿ ಇತ್ತೀಚಿಗಷ್ಟೇ ನಿರ್ಮಿಸಲಾದ ಸಾಮೂಹಿಕ ಮೂತ್ರಾಲಯವು ನಿರ್ವಹಣೆ ಕೊರತೆಯಿಂದಾಗಿ ಗಬ್ಬೆದ್ದು ನಾರುವಂತಾಗಿದೆ. 2011-12ನೇ ಸಾಲಿನ ಎಸ್‌ಎಫ್‌ಸಿ ಯೋಜನೆಯಡಿಯಲ್ಲಿ ಸುಮಾರು ರು. 2 ಲಕ್ಷ ಅಂದಾಜು ಮೊತ್ತದ ವೆಚ್ಚದಲ್ಲಿ ನಿರ್ಮಿಸಲಾದ ಸಾಮೂಹಿಕ ಮೂತ್ರಾಲಯವು ನಾಗರೀಕರ ಸೌಲಭ್ಯಕ್ಕೆ ಬಾರದಂತಾಗಿದೆ. ಮೂತ್ರಾಲಯ ಪ್ರವೇಶಿಸಬೇಕಾದರೆ ಮೂಗಿಗೆ ಬಟ್ಟೆ ಕಟ್ಟಿಕೊಂಡೆ ಪ್ರವೇಶಸಬೇಕಾದ ಪರಿಸ್ಥಿತಿ ಎದುರಾಗಿದೆ. ಅಷ್ಟೇ ಅಲ್ಲದೇ ಕೇವಲ ತಿಂಗಳ ಹಿಂದಷ್ಟೇ ಸಾರ್ವಜನಿಕರ ಉಪಯೋಗಕ್ಕೆ ನೀಡಿದ ಮೂತ್ರಾಲಯದಲ್ಲಿ ನೀರು ಸರಬರಾಜಿಗಾಗಿ ಅಳವಡಿಸಲಾದ ಪೈಪ್ ಸಾಮಾಗ್ರಿಗಳು, ನಲ್ಲಿಗಳೆಲ್ಲಾ ಕಾಣೆಯಾಗಿವೆ. ಸಾಮೂಹಿಕ ಮೂತ್ರಾಲಯದ ನಂತರ ಸಾರ್ವಜನಿಕರು ನೀರನ್ನು ಉಪಯೋಗಿಸದೇ ಇರುವುದರಿಂದ ಸುತ್ತಲಿನ ವಾತಾವರಣ ದಿನೇದಿನೇ ದುರ್ವಾಸನೆ ಬೀರುತ್ತದೆ. ನಿರ್ವಹಣೆ ಕೊರತೆಯಿಂದಾಗಿ ನೂತನವಾಗಿ ನಿರ್ಮಿಸಲಾದ ಸಾಮೂಹಿಕ ಮೂತ್ರಾಲಯವು ಸಾರ್ವಜನಿಕರ ಉಪಯೋಗಕ್ಕೆ ಬಾರದೇ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕೂಡಲೇ ಪ.ಪಂ. ನವರು ಸಾಮೂಹಿಕ ಮೂತ್ರಾಲಯಕ್ಕೆ ನಿರ್ವಹಣೆ ಮಾಡುವುದರ ಬಗ್ಗೆ ಚಿಂತಿಸಿ ಕಾಯಕಲ್ಪ ನೀಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.