ರಸ್ತೆ ತಡೆಯಿಲ್ಲದ ಹೆದ್ದಾರಿ, ಅಪಘಾತ ಸಂಖ್ಯೆ ಹೆಚ್ಚಳ
ಚಿಂಚೋಳಿ: ತಾಲೂಕಿನ ಮಿರಿಯಾಣ- ಚಿಂಚೋಳಿ ರಾಜ್ಯ ಹೆದ್ದಾರಿ ಮಾರ್ಗದಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ನಾಮಫಲಕಗಳು ಹಾಗೂ ರಸ್ತೆ ತಡೆಗಳಿಲ್ಲದ ಕಾರಣ ರಸ್ತೆ ಅಪಘಾತಗಳು ಹೆಚ್ಚುತ್ತಿವೆ. ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಇಲಾಖೆ, ಪೊಲೀಸ್ ಇಲಾಖೆ ಕಣ್ಣುಮುಚ್ಚಿ ಕುಳಿತಿವೆ ಎಂದು ತಾಲೂಕು ಸಮಾಜ ಸೇವಕ ಭೀಮಶೆಟ್ಟಿ ಮುಕ್ಕಾ ದೂರಿದ್ದಾರೆ.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ತಾಂಡೂರ- ಮಿರಿಯಾಣ- ಕಲ್ಲೂರ ಚಿಂಚೋಳಿ ರಾಜ್ಯ ಹೆದ್ದಾರಿಯಲ್ಲಿ ಹೊಸದಾರಿ ಡಾಂಬರೀಕರಣಗೊಂಡಿದೆ. ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ವಾಹನ ಸವಾರರಿಗೆ ಸೂಚನಾ ಫಲಕಗಳಿಲ್ಲದ ಕಾರಣ ಜನವರಿಯಲ್ಲಿಯೇ 4 ರಸ್ತೆ ಅಪಘಾತ ಸಂಭವಿಸಿ 8 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಅಮಾಯಕರ ಬಲಿ: ಚಿಂಚೋಳಿ- ಗುಲ್ಬರ್ಗ ರಸ್ತೆ ಮಾರ್ಗದಲ್ಲಿ ಬರುವ ಸಕ್ಕರೆ ಕಾರ್ಖಾನೆ, ಸೇತುವೆ ಹತ್ತಿರ ರೋಡ ಬ್ರೇಕರ್ ಇಲ್ಲದ ಕಾರಣ ಮೂವರು ಬೈಕ್ ಸವಾರರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಲೋಕೋಪಯೋಗಿ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರೂ ಕ್ರಮ ಕೈಕೊಂಡಿಲ್ಲ. ಇಲಾಖೆಗಳ ನಿರ್ಲಕ್ಷ್ಯದಿಂದಾಗಿ ಅಮಾಯಕರು ಜೀವತೆರಬೇಕಾಗಿದೆ ಎಂದು ಭೀಮಶೆಟ್ಟಿ ಮುಕ್ಕಾ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಎಚ್ಚರಿಕೆ: ಪಟ್ಟಣದ ಚಂದಾಪುರ ಪ್ರವಾಸಿ ಮಂದಿರ, ಸರ್ಕಾರಿ ಪಿಯು ಕಾಲೇಜ್, ಆಸ್ಪತ್ರೆ, ತಹಸೀಲ್ದಾರ್ ಆಫೀಸ್, ಬಸವೇಶ್ವರ ಚೌಕ್, ಬಸ್ ನಿಲ್ದಾಣ, ಅಂಬೇಡ್ಕರ್ ಚೌಕ್ ಮುಂತಾದ ಕಡೆಗಳಲ್ಲಿ ರೋಡ್ ಬ್ರೇಕರ್‌ಗಳಿಲ್ಲದ ಕಾರಣ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿವೆ. ರಸ್ತೆ ಅಪಘಾತ ತಡೆಯುವ ಕುರಿತು ಸವಾರರಿಗೆ ಸೂಚನಾ ಫಲಕಗಳು ರಸ್ತೆಯ ಬದಿಯಲ್ಲಿ ಹಾಕದಿದ್ದರೆ ಫೆಬ್ರವರಿಯಲ್ಲಿ ಸಾರ್ವಜನಿಕರೊಂದಿಗೆ ರಸ್ತೆತಡೆ ನಡೆಸಲಾಗುವುದೆಂದು ಸಮಾಜ ಸೇವಕ ಭೀಮಶೆಟ್ಟಿ ಮುಕ್ಕಾ ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

