ಗುಲ್ಬರ್ಗಾ

ಪೊಲೀಸ್ ಸಿಬ್ಬಂದಿ ಸ್ಥಳಾಂತರಕ್ಕೆ ಜಯ ಕರ್ನಾಟಕ ಒತ್ತಾಯ

Published On :

ಗುಲ್ಬರ್ಗ: ರಾಜ್ಯ ಮೀಸಲು ಪೊಲೀಸ್ 6ನೇ ಪಡೆ ಸಿಬ್ಬಂದಿಯನ್ನು ಸುಲ್ತಾನಪುರ ವಸತಿಗಳಿಂದ ನಗರದಲ್ಲಿರುವ ಸೂಪರ್ ಮಾರ್ಕೆಟ್ ಲೋಕೋಪಯೋಗಿ ಇಲಾಖೆ ವಸತಿಗಳಿಗೆ ಸ್ಥಳಾಂತರಿಸಲು ಜಯ ಕರ್ನಾಟಕ ಒತ್ತಾಯಿಸಿದೆ.
ಕೆಎಸ್‌ಆರ್‌ಪಿ 6ನೇ ಪಡೆ ಮುಂಚಿತವಾಗಿ ನಗರದ ಸೂಪರ್ ಮಾರ್ಕೆಟ್‌ನಲ್ಲಿರುವಾಗ ನಗರದಲ್ಲಿ ಕೊಲೆ, ಸುಲಿಗೆ, ಸರಗಳ್ಳತನದಂತಹ ಪ್ರಕರಣಗಳು ಕಡಿಮೆ ಆಗಿದ್ದವು. ಅಲ್ಲದೆ ಸಾರ್ವಜನಿಕರು ನೆಮ್ಮದಿಯಿಂದ ಬದುಕುತ್ತಿದ್ದರು. ಆದರೆ ಕಳೆದ 2 ವರ್ಷಗಳ ಹಿಂದೆ ನಗರದಲ್ಲಿ ವಾಸವಾಗಿದ್ದ ಎಲ್ಲಾ ಪೊಲೀಸ್ ಸಿಬ್ಬಂದಿಯನ್ನು ಅವರ ಕುಟುಂಬ ಸಮೇತ ನಗರದಿಂದ ಸುಮಾರು 7 ಕಿ.ಮೀ ದೂರದಲ್ಲಿರುವ ತಾಜಾಸುಲ್ತಾರನಪುರ ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಈ ಕಾರಣದಿಂದ ನಗರದಲ್ಲಿ ಅಪರಾಧ ಕೃತ್ಯಗಳು ಹೆಚ್ಚಾಗತೊಡಗಿವೆ. ಜನನಿಬಿಡ ಪ್ರದೇಶ ಸೂಪರ್ ಮಾರ್ಕೆಟ್‌ನಲ್ಲಿ ಸಂಜೆ ವಿಶೇಷವಾಗಿ ಮಹಿಳೆಯರು ಭಯದಿಂದ ತಿರುಗಾಡುವ ಪ್ರಸಂಗ ನಿರ್ಮಾಣವಾಗಿದೆ. ಅಲ್ಲದೆ ನಗರದಲ್ಲಿ ಏನೇ ಅನಾಹುತ ಸಂಭವಿಸಿದರೂ ಕೆಎಸ್‌ಆರ್‌ಪಿ ಸಿಬ್ಬಂದಿಗೆ ಸುಲ್ತಾನಪುರದಿಂದ ಘಟನಾ ಸ್ಥಳಕ್ಕೆ ಸರಿಯಾದ ಸಮಯಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಅಲ್ಲಿಯ ವಸತಿ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳಿಲ್ಲ. ಆದ್ದರಿಂದ ನಗರದಿಂದ ಸುಲ್ತಾನಪುರಕ್ಕೆ ಸ್ಥಳಾಂತರಿಸಿಲಾದ ಸಿಬ್ಬಂದಿಯನ್ನು ಸೂಪರ್ ಮಾರ್ಕೆಟ್ ಲೋಕೋಪಯೋಗಿ ಇಲಾಖೆ ವಸತಿಗಳಿಗೆ ಸ್ಥಳಾಂತರಬೇಕೆಂದು ಜಯ ಕರ್ನಾಟಕ ರಾಜ್ಯಾಧ್ಯಕ್ಷ ವೀರಣ್ಣ ಎಂ. ಕೋರಳ್ಳಿ ಜಿಲ್ಲಾಧಿಕಾರಿ ಮೂಲಕ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ, ರಾಜ್ಯ ಯೋಜನಾ ಸಂಚಾಲಕ ಬಿ.ಬಿ. ನಾಟಕ, ಗೌರವಾಧ್ಯಕ್ಷ ರವಿಕುಮಾರ ಗೌಳಿ, ಬಸವರಾಜ ಮಡಿವಾಳ, ತಾಲೂಕು ಕಾರ್ಯಾಧ್ಯಕ್ಷ ಶಿವುಕುಮಾರ ನಾಸಿ ಸೇರಿದಂತೆ ಕಾರ್ಯಕರ್ತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.