ಗುಲ್ಬರ್ಗಾ

ಬಸ್ ಸೌಲಭ್ಯಕ್ಕೆ ಪ್ರಯತ್ನ: ಜಾಧವ್

Published On :

ಚಿಂಚೋಳಿ: ತಾಲೂಕಿನಲ್ಲಿ ಸಾರಿಗೆ ಸಂಪರ್ಕವಿಲ್ಲದ ಗ್ರಾಮಗಳಿಗೆ ಬಸ್ ಸೌಲಭ್ಯ ಒದಗಿಸಿ ಕೊಡುವ ಪ್ರಯತ್ನ ನಡೆದಿದೆ ಎಂದು ಶಾಸಕ ಡಾ. ಉಮೇಶ ಜಾಧವ್ ಹೇಳಿದರು.
ತಾಲೂಕಿನ ಸಾಲೇಬೀರನಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗೌಡಪ್ಪಗುಡಿ ತಾಂಡದಲ್ಲಿ ರವಿವಾರ ನೂತನ ಬಸ್ ಸಂಚಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸಾರಿಗೆ ಸಂಪರ್ಕದಿಂದ ಶಾಲಾ ಕಾಲೇಜು ಮಕ್ಕಳಿಗೆ ವಯೋವೃದ್ಧರಿಗೆ, ಅಂಗವಿಕಲರಿಗೆ, ರೋಗಿಗಳಿಗೆ ಮತ್ತು ಗರ್ಭಿಣಿಯರಿಗೆ ಅನುಕೂಲವಾಗಿದೆ. ಚಿಂಚೋಳಿ ಘಟಕಕ್ಕೆ 15 ಹೊಸ ಬಸ್ ಅತೀ ಶೀಘ್ರದಲ್ಲಿ ಬರಲಿವೆ ಎಂದರು.
ಜಿಲ್ಲಾ ಸಾರಿಗೆ ವ್ಯವಸ್ಥಾಪಕ ಎಂ.ಎ. ಮುಲ್ಲಾ ಮಾತನಾಡಿ, ತಾಲೂಕಿನಲ್ಲಿ ಜಿಲವರ್ಷ, ಸಂಗಾಪುರ, ವೆಂಕಟಾಪುರ, ಚಂದನಕೇರಾ, ಎಲಮಡಗಿ ತಾಂಡ, ರಟಕಲ್, ಹಾಗೂ ಗೌಡಪ್ಪಗುಡಿ ತಾಂಡಕ್ಕೆ ಹೊಸ ಬಸ್ ಸಂಚಾರ ಪ್ರಾರಂಭಗೊಂಡಿವೆ ಎಂದರು. ವ್ಯವಸ್ಥಾಪಕ ಧೂಳಪ್ಪಾ, ಶಾಮರಾವ ರಾಠೋಡ್, ತಾಪಂ ಸದಸ್ಯ ಜಾನೂ ರಾಠೋಡ್, ವಿಠಲ ಚವ್ಹಾಣ, ಧರ್ಮು ನಾಯಕ, ಬಲಭೀಮ ರಾಠೋಡ್, ಹೀರಾಸಿಂಗ, ರಾಜೂ ರಾಠೋಡ್,  ಪ್ರಭುಲಿಂಗ ಲೇವಡಿ, ಬಸರೆಡ್ಡಿ ಸೇರಿಕಾರ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.