ಗುಲ್ಬರ್ಗಾ

ಸುರಪುರ ತಾಲೂಕು ಪಂಚಾಯಿತಿಗೆ ಬೀಗಮುದ್ರೆ

Published On :

ಕನ್ನಡಪ್ರಭ ವಾರ್ತೆ  ಸುರಪುರ  ಜ.29
ತಾಲೂಕಿನ ಹಗರಟಗಿ ಗ್ರಾಪಂ ಕಚೇರಿಯಲ್ಲಿ ಗಣರಾಜೋತ್ಸವದಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಇಟ್ಟು ಪೂಜಿಸದೇ ಅವಮಾನಿಸಲಾಗಿದೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಬುಧವಾರ ತಾಪಂ ಕಚೇರಿಗೆ ಬೀಗಮುದ್ರೆ ಹಾಕಿ ಪ್ರತಿಭಟಿಸಿದರು.
  ಸಮಿತಿಯ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ನೇತೃತ್ವ ವಹಿಸಿ ಮಾತನಾಡಿ, ಈ ಬಾರಿ ಗಣರಾಜೋತ್ಸವದಲ್ಲಿ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರದೊಂದಿಗೆ ಅಂಬೇಡ್ಕರ್ ಅವರ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಬೇಕು ಎಂದು ಸರ್ಕಾರದ ಆದೇಶವಿದ್ದರೂ ಕೂಡಾ ಪಿಡಿಒ ಅವರು ಅವಮಾನಿಸಿದ ಘಟನೆಯಿಂದ ದಲಿತರಿಗೆ ನೋವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
  ಪಿಡಿಒ ಅವರನ್ನು ತಕ್ಷಣ ಅಮಾನತುಗೊಳಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಬಿಗಿಪಟ್ಟು ಹಿಡಿದರು. ತಾಪಂ ಇಒ ಪ್ರಭಯ್ಯ ಹಿರೇಮಠ ಅವರು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಕ್ರಮ ಜರುಗಿಸುವಂತೆ ಶಿಫಾರಸು ಮಾಡುವುದಾಗಿ ಲಿಖಿತ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆಯಲಾಯಿತು.
  ಜಿಲ್ಲಾ ಸಂಸ ಶರಣಪ್ಪ ದಖನಿ, ಮಲ್ಲಿಕಾರ್ಜುನ ತಳಳ್ಳಿ. ಶಿವಲಿಂಗಪ್ಪ ಛಲವಾದಿ, ನಿಂಗಣ್ಣ ಗೋನಾಳ, ಅಂಬ್ರೇಶ ಶೆಳ್ಳಗಿ, ಮಾನಪ್ಪ ಶೆಳಗಿ, ವೀರಭದ್ರ ತಳವಾರಗೇರಿ, ತಿಪ್ಪಣ್ಣ ಶೆಳ್ಳಗಿ, ಮಹೇಶ ಯಾದಗಿರಿ, ಮಾನಪ್ಪ ಹುಣಸಿಹೊಳೆ, ರಾಮಣ್ಣ ಶೆಳ್ಳಗಿ, ಮೌನೇಶ ಹುಣಸಿಹೊಳೆ, ಶೇಖಪ್ಪ ಕೋನಾಳ, ಬಸಲಿಂಗಪ್ಪ ಏವೂರು, ಮಾನಪ್ಪ ದೇವರಗೋನಾಳ, ಜಟ್ಟೆಪ್ಪ ನಾಗರಾಳ, ನಾಗಪ್ಪ ಗೋಗಿಕೇರಿ ಇನ್ನಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.