ಕಂದಕೂರಲ್ಲಿ ಬಿಗುವಿನ ವಾತಾವರಣ
ಗುರುಮಠಕಲ್: ಇಲ್ಲಿಗೆ ಸಮೀಪದ ಕಂದಕೂರು ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದೆ ಗ್ರಾಮದ ಕ್ರೈಸ್ತ ಮಂದಿರದ ಮುಂದಿನ ನಾಗಾರಕಟ್ಟೆಯಲ್ಲಿನ ದೇವರ ಮೂರ್ತಿಗಳನ್ನು ತೆಗೆದು ಹಾಕಿದ ಸಂಬಂಧವಾಗಿ ನಡೆದ ಗಲಭೆಯಿಂದಾಗಿ ಇದೀಗ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಜ.28ರಂದು ನಡೆದ ಜಗಳದಿಂದಾಗಿ ಸುಮಾರು 14 ಜನರ ವಿರುದ್ಧ ಪ್ರಕರಣ ದಾಖಲಾಗಿ ಗ್ರಾಮದ ಇದೀಗ ಬಿಗುವಿನ ವಾತಾವರಣ ನಿರ್ಮಾಣವಾಗಿ ಜನ ಹೊರಗಡೆ ತಿರುಗಾಡಲು ಹೆದರುವಂತಾಗಿದೆ.
ಘಟನೆ ಹಿನ್ನೆಲೆ: ಜ.2ರಂದು ಗ್ರಾಮದ ಚರ್ಚ್ ಮುಂದೆ ಇರುವ ನಾಗಾರಕಟ್ಟೆಯಲ್ಲಿ ನಾಗ ದೇವತೆಗಳ ಮೂರ್ತಿಗಳನ್ನು ಕ್ರೈಸ್ತ ಧರ್ಮಕ್ಕೆ ಸೇರಿದ ಕೆಲವರು ತೆಗೆದು ಕಟ್ಟೆ ಧ್ವಂಸ ಮಾಡಲು ಯತ್ನಿಸಿದ್ದರು ಎಂದು ಆರೋಪಿಸಿ ಮಾದಿಗ ದಂಡೋರ ಸಮಿತಿಯವರು ಠಾಣೆಯ ಮೆಟ್ಟಿಲು ಹತ್ತಿದ್ದರು. ಸಮಸ್ಯೆಗೆ ಪರಿಹಾರ ನೀಡಿ ಮತ್ತೊಮ್ಮೆ ಇಂತಹ ಘಟನೆಗಳು ನಡೆಯದಂತೆ ಎರಡು ಗುಂಪಿನವರಿಗೆ ಸೂಚನೆ ನೀಡಿ ಸಮಸ್ಯೆಗೆ ತಾತ್ಕಾಲಿಕವಾಗಿ ಬ್ರೇಕ್ ನೀಡಲಾಗಿತ್ತು.
ಜ.28ರಂದು ಗ್ರಾಮದ ಮಾದಿಗ ಸಮುದಾಯಕ್ಕೆ ಸೇರಿದ ಕೆಲವರು ಧ್ವಂಸಗೊಂಡಿರುವ ನಾಗ ದೇವತೆಗಳ ಮೂರ್ತಿ ಸರಿಪಡಿಸಿ ಪೂಜೆ ಮಾಡಲು ಚಂದ್ರಪ್ಪ ನೇತೃತ್ವದಲ್ಲಿ ಘೋಷಣೆ ಕೂಗುತ್ತ ನಾಗರಕಟ್ಟೆಗೆ ಮಾದಿಗ ದಂಡೋರ ಸಮಿತಿ ಧ್ವಜದೊಂದಿಗೆ ತೆರಳಿದ ಸಂದರ್ಭದಲ್ಲಿ ಘೋಷಣೆಗಳಿಂದ ಕೆರಳಿದ ಕ್ರೈಸ್ತ ಸಮುದಾಯ ಹಾಗೂ ದಂಡೋರ ಸಮಿತಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು ವಿಕೋಪಕ್ಕೆ ತಿರುಗಿ ಘರ್ಷಣೆಗೆ ಕಾರಣವಾಗಿದೆ.
ಪೊಲೀಸ್ ಬಂದೋಬಸ್ತ್: ಘಟನೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ, ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ನಾಗರಕಟ್ಟೆ ಸ್ಥಳ ಯಾರಿಗೆ ಸೇರಿದ್ದು ಎಂದು ಪರಿಶೀಲನೆ ನಡೆಸಿ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

