ಧರ್ಮಗಳು ಮನಸ್ಸನ್ನು ಗೆಲ್ಲಲು ಹೇಳಿವೆ
ನಾಲವಾರ(ಶಹಾಬಾದ್): ಆತ್ಮ ದೇಹವನ್ನು ಬಟ್ಟೆಯಂತೆ ಬದಲಿಸಿಕೊಳ್ಳುತ್ತದೆ. ಮನುಷ್ಯ ಜನ್ಮದಲ್ಲಿ ಮಾತ್ರ ಮಾತನಾಡುವ ಜ್ಞಾನ ಭಗವಂತ ನೀಡಿದ್ದು, ಪಂಚೇಂದ್ರಿಯಗಳ ಇಚ್ಛೆಯಿಂದ ಮಾತ್ರ ದೇಹದ ವಾಹನ ಓಡುತ್ತದೆ. ಮನಸ್ಸನ್ನು ಗೆಲ್ಲಲು ಜಗತ್ತಿನ ಎಲ್ಲಾ ಧರ್ಮಗಳು ಹೇಳಿದ್ದು, ಅದಕ್ಕೆ ಮಾನವ ಸ್ಥಿತ ಪ್ರಜ್ಞನಾಗಿರಬೇಕೆಂದು ಕೋಡಿಮಠದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ ಹೇಳಿದರು.
ಅವರು ಗುರುವಾರ ನಾಲವಾರದ ಕೋರಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಉದ್ಘಾಟನೆ, ಹಾಗೂ ಶಿವಾನುಭವ ಚಿಂತನೆ, ಪಂಚರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಮನುಷ್ಯ ಕೋಪವನ್ನು ನಿಯಂತ್ರಿಸಬೇಕು. ಕೋಪ ಅವಿವೇಕದ ಲಕ್ಷಣವಾಗಿದೆ. ನಮ್ಮ ನೋಡುವ ನೋಟ ಶುದ್ಧವಾಗಿರಬೇಕು. ಪಂಚೇಂದ್ರಿಯಗಳ ಮೇಲೆ ಹತೋಟಿ ಹೊಂದಿರಬೇಕು. ಅಂಥವರು ಮಾತ್ರ ಜಗತ್ತನ್ನು ಗೆಲ್ಲಬಹುದು ಎಂದು ಹೇಳಿದರು. ಕೋರಿಸಿದ್ದೇಶ್ವರರು ಪಂಚೇಂದ್ರಿಯಗಳನ್ನು ಗೆದ್ದವರು. ಅಂಥವರ ಗದ್ದುಗೆಗಳು ಬೇಡಿದ್ದನ್ನು ಕೊಡುವ ಶಕ್ತಿ ಹೊಂದಿರುತ್ತವೆ ಎಂದು ಹೇಳಿದರು.
ಪ್ರಶಸ್ತಿ: ಡಾ.ಸಿದ್ದ ತೋಟೆಂದ್ರ ಮಹಾಸ್ವಾಮಿಗಳು ಅಶೀರ್ವಚನ ನೀಡಿದರು. ಶ್ರೀಮಠದಿಂದ ಪ್ರಥಮ ಬಾರಿಗೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ಸಿದ್ದ ತೋಟೆಂದ್ರ ಪಂಚರತ್ನ ಪ್ರಶಸ್ತಿಯನ್ನು ಉದ್ಯಮಿ ಡಾ. ಅಶೋಕ ಖೇಣಿಯವರಿಗೆ(ಸಮಾಜ ಸೇವಾ ರತ್ನ), ಸಾಹಿತಿ ಡಾ. ಎಚ್.ಎಸ್. ವೆಂಕಟೇಶಮೂರ್ತಿಯವರಿಗೆ(ಸಾಹಿತ್ಯ ರತ್ನ), ಸಂಗೀತ ವಿದ್ವಾಂಸ ಪಂ. ನರಸಿಂಹಲು ವಡವಾಟಿಯವರಿಗೆ(ಸಂಗೀತ ರತ್ನ), ಪ್ರವಚನಕಾರ ಕಾಶೀನಾಥ ಶಾಸ್ತ್ರಿ ಮಳ್ಳಿಮಠರವರಿಗೆ (ಪ್ರವಚನ ರತ್ನ), ವಿಆರ್ಎಲ್ ಸಮೂಹ ಸಂಸ್ಥೆಯ ಚೇರ್ಮನ್ ವಿಜಯ ಸಂಕೇಶ್ವರರವರಿಗೆ(ಮಾಧ್ಯಮ ರತ್ನ) ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಮಂಡ್ಯದ ಕಲಾವಿದರಿಂದ ಸಂಗೀತ ರಸಮಂಜರಿ, ಭರತ ನಾಟ್ಯ, ಆಸ್ಥಾನ ಕಲಾವಿದರಿಂದ ಸಂಗೀತ ಸೇವೆ ನಡೆಯಿತು. ಕೇಂದ್ರ ಸಚಿವ ಡಾ. ಮಲ್ಲಿಕಾರ್ಜುನ ಖರ್ಗೆ, ವೈದ್ಯಕೀಯ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಕಾರ್ಯದರ್ಶಿ ವೀರಣ್ಣಗೌಡ ಪರಸರೆಡ್ಡಿ, ಕಾಂಗ್ರೆಸ್ ಮುಖಂಡ ಲಿಂಗಾರೆಡ್ಡಿ ಬಾಸರೆಡ್ಡಿ, ಜಿಪಂ.ಸದಸ್ಯ ಸಾಬಣ್ಣಾ ಅಡ್ಡೇಶಿ, ಬಿ.ಜಿ. ಪಾಟೀಲ, ಚನ್ನಾರೆಡ್ಡಿ ತುನ್ನೂರ, ಕರವೇ ರಾಜ್ಯ ಸಂಚಾಲಕ ಬಸವರಾಜ ಪಡಕೋಟೆ, ಮಹಾದೇವ ಗವ್ಹಾರ ಉಪಸ್ಥಿತರಿದ್ದರು.
ಮೋದಿ ಪ್ರಧಾನಿ: ಗುರುವಾರ ನಾಲವಾರದ ಜಾತ್ರಾ ಮಹೋತ್ಸವ ಉದ್ಘಾಟನೆಗೆ ಆಗಮಿಸಿದ ಕೋಡಿಮಠದ ಶಿವಯೋಗಿ ರಾಜೇಂದ್ರ ಮಾಹಾಸ್ವಾಮಿ ಸಾರ್ವಜನಿಕರ ಒತ್ತಾಯದ ಮೇರೆಗೆ ಮಠದ ಶೈಲಿಯಂತೆ ಈ ವರ್ಷ ಜಾಗತಿಕ ಮಟ್ಟದಲ್ಲಿ ಪ್ರಳಯವಾಗಲಿದೆ. ಕೆಲವೆಡೆ ಭೂಮಿ ಮುಳುಗಲಿದೆ. ದೇಶದಲ್ಲಿ ಪ್ರಧಾನಿ ಸ್ಥಾನಕ್ಕೆ 'ಮುತ್ತಿನ ಗಿಳಿ ಮುಂದಾಗಿ ಮುತ್ತಾಯಿತು' ಎಂದು ಹೇಳಿದನ್ನು ಸಾರ್ವಜನಿಕರು ಮುತ್ತಿನ ರಾಜ್ಯವಾದ ಗುಜರಾತಿನ ನರೇಂದ್ರ ಮೋದಿ ಪ್ರಧಾನಿಯಾಗಬಹುದು ಎಂದು ಅರ್ಥೈಸಿದರು. ರಾಜ್ಯ ರಾಜಕೀಯದಲ್ಲಿ ಸದರಿ ಕಾಂಗ್ರೆಸ್ ಸರ್ಕಾರ ಪೂರ್ಣಾವಧಿ ಮುಗಿಸುವುದಿಲ್ಲವೆಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

