ಗುಲ್ಬರ್ಗಾ

ಕುಡಿದ ಅಮಲಿನಲ್ಲಿ ಪತ್ನಿಯನ್ನೇ ಕೊಚ್ಚಿದ ಪತಿರಾಯ

Published On :

ಶಹಾಬಾದ್: ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಕುಡಿದ ಅಮಲಿನಲ್ಲಿ ಮನೆಯಲ್ಲಿ ಮಲಗಿದ್ದ ಹೆಂಡತಿಯನ್ನೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಗುರುವಾರ ಮಧ್ಯರಾತ್ರಿ ಸಂಭವಿಸಿದೆ. ಶಾರುಬಾಯಿ (34) ಕೊಲೆಯಾದ ಮಹಿಳೆ. ಪಟ್ಟಣದ ಬಿಯಾಬಾನ್ ಏರಿಯಾದ ನಿವಾಸಿಯಾಗಿರುವ ಮಹಾದೇವಸಿಂಗ್ ರಾಠೋಡ ಗುರುವಾರ ರಾತ್ರಿ ತನ್ನ ಮನೆಗೆ ಕುಡಿದ ಅಮಲಿನಲ್ಲಿ ಬಂದಿದ್ದಾನೆ. ಆ ಸಂದರ್ಭದಲ್ಲಿ ಶಾರುಬಾಯಿ ಊಟ ಮಾಡುವಂತೆ ಗಂಡನಿಗೆ ಹೇಳಿದ್ದಾಳೆ. ಊಟ ಬೇಡ ಎಂದು ಹೇಳಿ ಮತ್ತೆ ಹೊರಗೆ ಹೋಗಿದ್ದಾನೆ. ನಂತರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಮನೆಗೆ ಹಿಂತಿರುಗಿದ ಮಹಾದೇವಸಿಂಗ್ ಕೊಡಲಿಯಿಂದ ಹೆಂಡತಿ ಕುತ್ತಿಗೆಗೆ ನಾಲ್ಕು ಬಾರಿ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಸಮಯದಲ್ಲಿ ಆತನ ಮಗ ಪ್ರೀತಮ್‌ಸಿಂಗ್ ನಿದ್ರೆಯಿಂದ ಎಚ್ಚೆತ್ತು ತಂದೆಯನ್ನು ಪ್ರಶ್ನಿಸಿದ್ದಾನೆ. ಅಮಲಿನಲ್ಲಿದ್ದ ಮಹಾದೇವ್‌ಸಿಂಗ್ ಕೊಲೆ ಮಾಡುವುದಾಗಿ ಮಗನಿಗೂ ಹೆದರಿಸಿ ಮಲಗಿಸಿದ್ದಾನೆ. ಹೆಂಡತಿಯನ್ನು ಕೊಂದು ಕೊಡಲಿಯನ್ನು ಮನೆಯಲ್ಲೇ ಬಚ್ಚಿಟ್ಟು ಪರಾರಿಯಾಗಿದ್ದಾನೆ. ಮೃತಳ ತಾಯಿ ಚಂದಮ್ಮ ನೀಡಿದ ದೂರಿನನ್ವಯ ವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ಅಮಿತ್‌ಸಿಂಗ್, ಡಿವೈಎಸ್‌ಪಿ ಮಹೇಶ ಮೇಘಣ್ಣನವರ, ಚಿತ್ತಾಪುರ ಸಿಪಿಐ ಶಂಕರಗೌಡ ಪಾಟೀಲ್, ವಾಡಿ ಪಿಎಸ್‌ಐ ನಟರಾಜ ಲಾಡೆ ಸ್ಥಳಕ್ಕೆ ಭೇಟಿ ಪರಿಶೀಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.