ರೈತರ ಸಮಸ್ಯೆಗೆ ಸ್ಪಂದಿಸದಿದ್ದರೆ ಕ್ರಮ
ಹುಣಸಗಿ: ಅಚ್ಚುಕಟ್ಟು ಪ್ರದೇಶದ ನೀರು ಬಳಕೆದಾರರ ಸಂಘಗಳ ಹಾಗೂ ರೈತರ ಸಮಸ್ಯೆಗಳ ಬಗ್ಗೆ ತಕ್ಷಣವಾಗಿ ಸ್ಪಂದಿಸದಿದ್ದರೆ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೆಬಿಜೆಎನ್ಎಲ್ನ ನಾರಾಯಣಪುರ ವೃತ್ತದ ಅಧೀಕ್ಷಕ ಅಭಿಯಂತ ಡಿ.ಆರ್. ಕೃಷ್ಣಮೂರ್ತಿ ಎಚ್ಚರಿಸಿದರು.
ಇತ್ತೀಚೆಗೆ ನಾರಾಯಣಪುರ ಕ್ಯಾಂಪಿನ್ ಮನೋರಂಜನಾ ಕೇಂದ್ರದ ಸಭಾಂಗಣದಲ್ಲಿ ನಿಗಮದ ವತಿಯಿಂದ ಕರೆಯಲಾಗಿದ್ದ ವೃತ್ತ ವ್ಯಾಪ್ತಿಯ ನೀರು ಬಳಕೆದಾರ ಸಂಘಗಳ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ನಿಗಮದ ಆಧೀನ ಅಧಿಕಾರಿಗಳ ಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡುತ್ತ ಮಾತನಾಡಿದರು.
ಕಾಲುವೆ ಭಾಗದ ಯಾವ ಪ್ರದೇಶದಲ್ಲಿ ನೀರು ಪೋಲಾಗುತ್ತಿರುವುದರ ಬಗ್ಗೆ ನೀರು ಬಳೆಕೆದಾರರ ಸಂಘದ ಪದಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರುವುದರ ಜೊತೆಗೆ ಅದರ ತುರ್ತು ನಿರ್ವಹಣೆಗೆ ಅನುಸರಿಸಬೇಕಾದ ಕ್ರಮಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.
ನೀರಾವರಿ ಸಲಹಾ ಸಮಿತಿಯಲ್ಲಿ ಸಂಘದಿಂದ ಇಬ್ಬರಿಗೆ ಸದಸ್ಯತ್ವ ನೀಡಬೇಕೆಂಬ ಸಂಘದವರ ಬೇಡಿಕೆಯನ್ನು ಸರ್ಕಾರದ ಮಟ್ಟದಲ್ಲಿ ತಿಳಿಸುವುದಾಗಿ ಪ್ರತಿಕ್ರಿಯಿಸಿದರು.
ಕಾಲುವೆಯ ಕೊನೆಯ ಭಾಗದ ರೈತರಿಗೆ ನೀರು ತಲುಪಿಸುವ ಮಹತ್ವದ ಗುರಿಯಿಟ್ಟುಕೊಂಡು ಸಂಬಂಧಿಸಿದ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕೆಂದರು. ಕ್ಲೋಜರ್ ಅವಧಿಯಲ್ಲಿ ನೆನೆಗುದಿಗೆ ಬಿದ್ದಿರುವ ಕಾಲುವೆ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಭಿಯಂತರರಿಗೆ ಸೂಚಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ನಿಂಗನಗೌಡ ಬಿರಾದರ ಹಾಗೂ ರಾಘವೇಂದ್ರ ಕಾಮನಟಗಿ, ಮಲ್ಲಿಕಾರ್ಜುನ ದೇಸಾಯಿ ಹಾಗೂ ವಿಶ್ವನಾಥ ಕುಲಕರ್ಣಿ ನೀರು ಬಳಕೆದಾರ ಸಂಘಗಳ ಹಲವಾರು ಸಮಸ್ಯೆಗಳನ್ನು ಚರ್ಚೆಯಲ್ಲಿ ಪ್ರಸ್ತಾಪ ಮಾಡಿದರು. ನಿಗಮದಿಂದ ಸಂಘಗಳಿಗೆ ಪ್ರತಿ ಮೂರು ವರ್ಷಗಳಿಗೊಮ್ಮೆ ಅನುದಾನ ನೀಡಬೇಕೆಂಬ ಬೇಡಿಕೆ ಸಲ್ಲಿಸಲಾಯಿತು. ಅಚ್ಚುಕಟ್ಟು ಪ್ರದೇಶದಲ್ಲಿ ಕಾರ್ಯನಿರ್ವಹಿಸುವಾಗ ನಿಗಮದ ಅಧಿಕಾರಿಗಳಿಗೆ ಕಾಡುತ್ತಿರುವ ಹಲವಾರು ಸಮಸ್ಯೆಗಳು ಮತ್ತು ಸವಾಲುಗಳ ಕುರಿತಂತೆ ಕೊಡೇಕಲ್ಲ ಉಪ ವಿಭಾಗದ ಜೆಇ ಎಚ್.ಡಿ.ಪಾಟೀಲ್ ತೋಡಿಕೊಂಡರು. ಪ್ರತಿ ಮೂರು ತಿಂಗಳಿಗೊಮ್ಮೆ ಈ ಸಭೆ ಕರೆಯುವುದಾಗಿ ಎಸ್ಇ ಕೃಷ್ಣಮೂರ್ತಿ ಹೇಳಿದರು.
ನೀರು ಬಳಕೆದಾರರ ಸಂಘಗಳ ವ್ಯಾಪ್ತಿಯ ಕಾಲುವೆ ಜಾಲದ ಸ್ಥಿತಿಗತಿಗಳು, ಸವುಳು ಜವುಳು, ನೀರಿನ ಕರ ವಸೂಲಾತಿ ಹಾಗೂ ಬಾಕಿ, ಎಲ್ಲ ನೀರು ಬಳಕೆದಾರರ ಸಂಘಗಳ ಸದ್ಯದ ಸ್ಥಿತಿ ಮತ್ತು ನಿಗಮದ ಕಾರ್ಯಗಳ ಬಗ್ಗೆ ಬಹು ವಿಸ್ತೃತ ಚರ್ಚೆ ನಡೆಸಲಾಯಿತು. ವೇದಿಕೆಯಲ್ಲಿ ವೃತ್ತದ ವ್ಯಾಪ್ತಿಯ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಗಳ ಅಧ್ಯಕ್ಷರಾದ ಆರ್. ಎಮ್ ರೇವಡಿ, ರಂಗಪ್ಪ ಡಂಗಿ, ಹಣಮಂತ ಬಂಡಿ, ಹಾಗೂ ಅನೇಕ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

