ಗುಲ್ಬರ್ಗಾ

ಮೂಲ ಸೌಲಭ್ಯಕ್ಕೆ ಗ್ಯಾರೇಜ್ ಮೆಕ್ಯಾನಿಕ್ ಸಂಘ ಮನವಿ

Published On :

ಯಾದಗಿರಿ: ನಗರದ ಗ್ಯಾರೇಜ್ ಮೆಕಾನಿಕ್ ಹಾಗೂ ಮಾಲೀಕರಿಗೆ ವಿವಿಧ ಸೌಲಭ್ಯ ನೀಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಗ್ಯಾರೇಜ್ ಮೆಕ್ಯಾನಿಕ್ ಸಂಘದ ವತಿಯಿಂದ ಮನವಿ ಸಲ್ಲಿಸಿದರು. ಕೃಷಿ ಹಾಗೂ ಕೈಗಾರಿಕೆಗಳು ಪ್ರಗತಿಯಲ್ಲಿ ಮುಖ್ಯ ಪಾತ್ರವಹಿಸುತ್ತಿವೆ. ಕೈಗಾರಿಕೆ ಬೆಳೆಯಲು ಸರ್ಕಾರ ವಿಶೇಷ ಆಸಕ್ತಿ ವಹಿಸಬೇಕು. ಇದರಿಂದ ಅನೇಕರಿಗೆ ಉದ್ಯೋಗವಕಾಶಗಳು ದೊರೆಯುತ್ತವೆ. ಕೈಗಾರಿಕೆಗಳ ಅಭಿವೃದ್ಧಿಯ ಗ್ಯಾರೇಜ್ ರುವಾರಿಗಳಾದ ಮೆಕಾನಿಕರ್ ಹಾಗೂ ಮಾಲೀಕರಿಗೆ ವಿಶೇಷ ಸಾಲ ಸೌಲಭ್ಯ ದೊರೆಯಬೇಕು ಇನ್ನಿತರ ಸೌಲಭ್ಯ ಹಾಗೂ ಪ್ರೋತ್ಸಾಹ ಸಿಗುವಂತಾಗಬೇಕು ಎಂದು ಸಂಘದ ಮುಖಂಡ ಉಮೇಶ್ ಮುದ್ನಾಳ ಆಗ್ರಹಿಸಿದ್ದಾರೆ. ಆಟೋ ನಗರ ನಿರ್ಮಾಣ, ಎಲ್ಲಾ ಗ್ಯಾರೇಜ್‌ಗಳಿಗೆ ನಗರಸಭೆಯಿಂದ ಉಚಿತ ಪರವಾನಿಗೆ, ಮಾಲೀಕರ ಮಕ್ಕಳಿಗೆ ತಾಂತ್ರಿಕ ಶಿಕ್ಷಣದಲ್ಲಿ ರಿಯಾಯ್ತಿಗೆ ಆಗ್ರಹಿಸಿದ್ದಾರೆ. ವಿಜಯ್ ಕುಮಾರ್ ಚವ್ಹಾಣ, ಶೇಖ ಮಹ್ಮದ್, ಹಣಮಂತ್ರಾಲಯ, ಮಹ್ಮದ್ ಹುಸೇನ್, ಶರಣಪ್ಪ ಕೌಳೂರ, ಮಹ್ಮದ ಶಫಿ, ಶೇಖ ಶಹಾ ವಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.