ಗುಲ್ಬರ್ಗಾ

ಅಂಗವಿಕಲರ ಸೌಲಭ್ಯ, ಯೋಜನೆ ಜಾರಿಗೆ ಆಗ್ರಹ

Published On :

ಚಿತ್ತಾಪುರ: ರಾಜ್ಯ ಸರ್ಕಾರವು ಅಂಗವಿಕಲರಿಗಾಗಿ ಹಲವು ಯೋಜನೆ ಜಾರಿಗೊಳಿಸಿ ಶೇ.3ರಷ್ಟು ಅನುದಾನ ಮೀಸಲಿಟ್ಟರೂ ಫಲಾನುಭವಿಗಳಿಗೆ ಸೌಲಭ್ಯ ತಲುಪುತ್ತಿಲ್ಲ ಎಂದು ಮಾನಸಿಕ ಅಂಗವಿಕಲರ ವಿವಿದೋದ್ದೇಶ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾಧ್ಯಕ್ಷ ಮಹ್ಮದ್ ಇಬ್ರಾಹಿಂ ಒತ್ತಾಯಿಸಿದ್ದಾರೆ.
ಬೇಡಿಕೆಗಳು: ಅಂಗವಿಕಲರ ಶೇ.3ರ ಮೀಸಲಾತಿಯಲ್ಲಿ ಅಂಗವಿಕಲರಿಗೆ ಸೌಲಭ್ಯಗಳು ಕಲ್ಪಿಸಬೇಕು, ಅಂಗವಿಕಲರ ಸಂಘಗಳ ಸಲಹಾ ಕೇಂದ್ರಗಳಿಗೆ ನ್ಯಾಯಬೆಲೆ ಅಂಗಡಿ, ಸೀಮೆಎಣ್ಣೆ ಏಜನ್ಸಿ ಮಂಜೂರು ಮಾಡಬೇಕು, ಶೇ 45ರಷ್ಟು ಅಂಗವೈಕಲ್ಯವುಳ್ಳವರಿಗೆ ನೀಡುವ ಮಾಸಾಶನ 500ರ ಬದಲಾಗಿ 1000 ಮತ್ತು ಶೇ.75 ಪ್ರಮಾಣದ ಅಂಗವಿಕಲರಿಗೆ ನೀಡುವ 1200 ಬದಲಾಗಿ 2,000 ಮಾಸಾಶನ ಹೆಚ್ಚಿಸಬೇಕು,  ರಿಯಾಯತಿ ಬಸ್‌ಪಾಸ್ 100 ಕಿಮೀ ಬದಲಾಗಿ ರಾಜ್ಯಾದ್ಯಾಂತ ಸಂಚರಿಸಲು ಅನುಕೂಲ ಮಾಡಿಕೋಡಬೇಕೆಂಬುದು ಸೇರಿದಂತೆ ನಾನಾ ಬೇಡಿಕೆಯುಳ್ಳ ಮನವಿ ಪತ್ರವನ್ನು ತಹಸೀಲ್ದಾರ್ ಮೂಲಕ ಸಿಎಂಗೆ ಸಲ್ಲಿಸಿದರು. ಸಂಘದ  ಮಹೇಂದ್ರಕುಮಾರ ಜಾಯಿ, ಶರಣಪ್ಪ ಒಂಟಿಕಮಾನ, ದೇವೇಂದ್ರಪ್ಪ ತಳವಾರ, ಇಮಾಮಸಾಬ್ ಡೋಣಗಾಂವ, ಮೆಹಬೂಬ್ ಟೇಲರ್, ಮಲ್ಲಿಕಾರ್ಜುನ ಕಾಳಗಿ ಸೇರಿದಂತೆ ಹಲವಾರು ಸಂಘದ ಕಾರ್ಯಕರ್ತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.