ಮುಂದುವರಿದ ಕೋರ್ಟ್ ಕಲಾಪ ಬಹಿಷ್ಕಾರ
ಗುಲ್ಬರ್ಗ: ಗುಲ್ಬರ್ಗ ಹೈಕೋರ್ಟ್ ಪೀಠ ವ್ಯಾಪ್ತಿಗೆ ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳನ್ನು ಸೇರ್ಪಡೆ ಸ್ಥಾಪನೆಗೆ ಒತ್ತಾಯಿಸಿ ವಕೀಲರು ನಡೆಸುತ್ತಿರುವ ಕಲಾಪ ಬಹಿಷ್ಕಾರ ಮಂಗಳವಾರವೂ ಮುಂದುವರಿದಿದೆ.ಇಲ್ಲಿನ ಸರ್ದಾರ್ ಪಟೇಲ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ವಕೀಲರು ಸರ್ಕಾರ ಜಿಲ್ಲೆಗಳ ಹಂಚಿಕೆಯಲ್ಲಿ ಗುಲ್ಬರ್ಗ ಪೀಠಕ್ಕೆ ಅನ್ಯಾಯ ಮಾಡಿದೆ. ತಕ್ಷಣ ಈ ಅನ್ಯಾಯ ಸರಿಪಡಿಸಬೇಕು. ಕರ್ನಾಟಕ ಆಡಳಿತಾತ್ಮಕ ಪ್ರಾಧಿಕಾರ (ಕೆಎಟಿ), ಕಂದಾಯ ಹಾಗೂ ಸಹಕಾರ ಮೇಲ್ಮನವಿ ಪ್ರಾಧಿಕಾರಗಳನ್ನು ಗುಲ್ಬರ್ಗದಲ್ಲೇ ಸ್ಥಾಪಿಸಬೇಕು, ಜೊತೆಗೆ ಗ್ರಾಹಕರ ಕುಂದುಕೊರತೆ ಪರಿಹಾರ ಆಯೋಗವನ್ನು ಗುಲ್ಬರ್ಗದಲ್ಲಿ ಸ್ಥಾಪಿಸುವಂತೆ ಒತ್ತಾಯಿಸಿದರು.
ಬೆಂಗಳೂರಿಗೆ ತೆರಳಿ ಜು.16 ರಂದು ಮುಖ್ಯ ನ್ಯಾಯಮೂರ್ತಿಗಳು, ಮುಖ್ಯಮಂತ್ರಿ, ಕಾನೂನು ಸಚಿವರನ್ನು ಭೇಟಿ ಮಾಡುವುದಾಗಿಯೂ ವಕೀಲರು ಹೇಳಿದ್ದಾರೆ.
ಗುಲ್ಬರ್ಗ ವಕೀಲರು ಆರಂಭಿಸಿರುವ ಹೋರಾಟಕ್ಕೆ ಬೆಂಬಲವಾಗಿ ವಿಜಾಪುರ, ಬೀದರ್, ರಾಯಚೂರು, ಯಾದಗಿರಿ ಜಿಲ್ಲಾ, ತಾಲೂಕು ಕೋರ್ಟ್ಗಳಲ್ಲಿಯೂ ವಕೀಲರು ಕಲಾಪ ಬಹಿಷ್ಕರಿಸಿ ಹೋರಾಟಕ್ಕಿಳಿದಿದ್ದಾರೆ. ಜು.18ರ ವರೆಗೂ ವಕೀಲರ ಕಲಾಪ ಬಹಿಷ್ಕಾರ ಮುಂಜದುವರಿಯಲಿದೆ. ಗುಲ್ಬರ್ಗ ಹೋರಾಟದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಸ್.ಆರ್. ಭೀಮಳ್ಳಿ, ಕಪನೂರ್ ವಕೀಲರು, ಎಸ್.ಜಿ. ಬಿರಾದಾರ್, ಎಂ.ಎನ್. ಪಾಟೀಲ್, ಹಣಮಂತರೆಡ್ಡಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

