ಆಸ್ಪತ್ರೆ ಅವ್ಯವಹಾರಕ್ಕೆ ತಾಪಂ ಸದಸ್ಯರ ಗರಂ
ಶಹಾಪುರ: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತಪಟ್ಟವರ ಮರಣೋತ್ತರ ಪರೀಕ್ಷೆ ನಡೆಸಿ ವಾರುಸುದಾರರಿಗೆ ನೀಡಲು ಲಂಚ ನೀಡಲೇಬೇಕಾಗಿದೆ ಎಂದು ತಾಪಂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ತಾಪಂ ನೂತನ ಅಧ್ಯಕ್ಷೆ ಚಂದಪ್ಪ ಸೀತ್ನಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಜರುಗಿತು. ತಾಲೂಕು ಅಧಿಕಾರಿಗಳು ಆರೋಗ್ಯ ಇಲಾಖೆ ಪ್ರಗತಿ ಬಗ್ಗೆ ವರದಿ ನೀಡುವ ಸಂದರ್ಭದಲ್ಲಿ ಸದಸ್ಯ ಶಿವನಗೌಡ ಪಾಟೀಲ ಮದ್ರಿಕಿ ವೈದ್ಯರನ್ನು ಕುರಿತು ಮಾತನಾಡಿ, ಇತ್ತೀಚೆಗೆ ಸರ್ಕಾರಿ ನೌಕರರರೊಬ್ಬರು ಅಪಘಾತದಲ್ಲಿ ತೀರಿಕೊಂಡಿದ್ದರು. ಅವರ ಮರಣೋತ್ತರ ಪರಿಕ್ಷೆ ನಡೆಸಿ ಪಾರ್ಥಿವ ಶರೀರ ವಾರುಸುದಾರರಿಗೆ ತಲುಪಿಸಲು ಹೆಚ್ಚಿನ ಹಣ ತೆಗೆದುಕೊಂಡಿದ್ದಾರೆಂದು ದೂರಿದರು.
ತಾಪಂ ಅಧ್ಯಕ್ಷ ಚಂದಪ್ಪ ಸೀತ್ನಿ ಮಾತನಾಡಿ, ತಾಲೂಕಿನ ಎಲ್ಲ ಆರೋಗ್ಯ ಕೇಂದ್ರದಲ್ಲಿ ಸರ್ಕಾರದ ಯೋಜನೆಗಳ ಸಕಾರಾತ್ಮಕವಾಗಿ ತಲುಪುತ್ತಿಲ್ಲ. ಮುಂದಿನ ದಿನಗಳಲ್ಲಿ ಹೀಗಾಗದಂತೆ ಎಚ್ಚರ ವಹಿಸಬೇಕು ಎಂದ ಅವರು, ಪಟ್ಟಣದ ಆರೋಗ್ಯ ಕೇಂದ್ರವನ್ನು ಮೇಲಧಿಕಾರಿಗಳ ಗಮನಕ್ಕೆ ತರಲು ಸೂಚಿಸಲಾಯಿತು.
ಗ್ಯಾಸ್ ಸ್ವಂತಕ್ಕೆ ಬಳಕೆ: ತಾಲೂಕಿನ 360 ಅಂಗನವಾಡಿ ಕೇಂದ್ರದಲ್ಲಿ 264 ಅಂಗನವಾಡಿ ಕೇಂದ್ರಗಳಲ್ಲಿ ಸರ್ಕಾರದ ಗ್ಯಾಸ್ ಸಿಲಿಂಡರ್ಗಳನ್ನು ಮನೆಗಳಿಗೆ ಬಳಸಲಾಗುತ್ತಿದೆ. ಅಧಿಕಾರಿಗಳು ಪರಿಶೀಲನೆ ಮಾಡದಿರುವುದೇ ಇದಕ್ಕೆ ಕಾರಣವಾಗಿದೆ. ಅಂಗನವಾಡಿ ಕೇಂದ್ರಗಳ ಕಾಯಕಲ್ಪಕ್ಕೆ ಮುಂದಾಗಬೇಕೆಂದು ಸದಸ್ಯ ಶರಣಭೂಪಾಲರಡ್ಡಿ, ಯಮನಪ್ಪ ಮತ್ತು ತಾಪಂ ಅಧ್ಯಕ್ಷರು ಸಿಡಿಪಿಒಗೆ ತಿಳಿಸಿದರು.
ತೋಟಗಾರಿಕೆ ಹಣ್ಣಿನ ಗಿಡಗಳ ಮಾಹಿತಿ, ತುಂತುರು ನೀರು ಸೌಲಭ್ಯ ಇನ್ನಿತರ ಯೋಜನೆಗಳನ್ನು ಗ್ರಾಮಸಭೆಗಳಲ್ಲಿ ತಿಳಿಸಬೇಕೆಂದು ಸದಸ್ಯ ಶಂಕರಪಟ್ಲೆಗಾರ ಒತ್ತಾಯಿಸಿದರು.
ಹತ್ತಿ ಬೀಜದ ಮಾರಾಟದಲ್ಲಿ ಅವ್ಯವಹಾರ ನಡೆದಿದ್ದು, ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಸದಸ್ಯರಾದ ಶಂಕರ ಪಟ್ಲೆಗಾರ, ಶಿವಣ್ಣಗೌಡ, ನಿಂಗನಗೌಡ ಕೃಷಿ ಇಲಾಖೆ ಬಗ್ಗೆ ಗಮನ ಸೆಳೆದಾಗ ಅಂಥ ಯಾವುದೇ ದೂರುಗಳು ಬಂದಿಲ್ಲವೆಂದು ಜಾಗೃತದಳ ಅಧಿಕಾರಿ ತಿಳಿಸಿದರು. ಇದೇ ವೇಳೆ ಭೂ ಸೇನಾ ನಿಗಮ, ಈ.ಕ.ರ. ಸಾರಿಗೆ ಶಿಕ್ಷಣ ಇಲಾಖೆ, ಅಕ್ಷರ ದಾಸೋಹ, ರೇಷ್ಮೆ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

