ನ್ಯಾ. ಸದಾಶಿವ ಆಯೋಗ ಜಾರಿಗೆ ಮನವಿ
ಯಾದಗಿರಿ: ಪರಿಶಿಷ್ಟ ಜಾತಿಗಳ ಜನಸಂಖ್ಯಾವಾರು ಮೀಸಲು ಹಂಚಿಕೆ ಮಾಡಿ ನ್ಯಾ. ಎ.ಜೆ. ಸದಾಶಿವ ಆಯೋಗ ಜಾರಿಗೆ ಒತ್ತಾಯಿಸಿ ಮಾದಿಗ ಮೀಸಲು ಹೋರಾಟ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಚಾರಿತ್ರಿಕ ಕಾರಣಗಳ ಹಿನ್ನೆಲೆಯಲ್ಲಿಯೇ ಜನಸಂಖ್ಯಾವಾರು ಮೀಸಲು ಹಂಚಿಕೆಯಾಗದೇ, ತುಳಿತಕ್ಕೊಳಗಾದ ಅಸ್ಪಶ್ಯ ಜಾತಿಗಳಿಗೆ ಸಾಮೂಹಿಕ ನ್ಯಾಯವಾಗಬಲ್ಲದೆಂಬ ವೈಜ್ಞಾನಿಕ ದೃಷಿಕೋನದಿಂದ ಕರ್ನಾಟಕದಲ್ಲಿ ಕಳೆದ 17 ವರ್ಷಗಳಿಂದ ಹೋರಾಡುತ್ತಾ ಬಂದಿದೆ. ಬೇರೆ ರಾಜ್ಯಗಳಲ್ಲಿ ಬಹುಬೇಗ ಮೀಸಲು ಅನುಷ್ಠಾನಕ್ಕೆ ಬಂದರೂ ಕರ್ನಾಟಕದಲ್ಲಿ ಮಾತ್ರ ಆಯೋಗ ರಚಿಸಲು, ಆಯೋಗ ವರದಿ ಅಂಗಿಕರಿಸಲು 17 ವರ್ಷಗಳ ಕಾಲ ಅನಿರ್ಧಿಷ್ಟ ಹೋರಾಟ ಮುಂದುವರೆದಿರುವುದು ದಲಿತರ ಬಗ್ಗೆ ಕರ್ನಾಟಕ ಸರ್ಕಾರಕ್ಕಿರುವ ನಿರ್ಲಕ್ಷಕ್ಕೆ ನಿದರ್ಶನವಾಗಿದೆ ಎಂದು ಸಮಿತಿ ಆರೋಪಿಸಿದೆ. ನ್ಯಾ. ಸದಾಶಿವ ವರದಿ ಅಂಗೀಕಾರಕ್ಕಾಗಿ ತಾವು ವಹಿಸಿರುವ ವಿಳಂಬ ಧೋರಣೆಯನ್ನು ಖಂಡಿಸಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗಿದೆ. ಪ್ರಸ್ತುತ ಅಧಿವೇಶನದಲ್ಲಿ ಈ ವರದಿ ಬಗ್ಗೆ ಸರ್ಕಾರ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಒಂದು ವೇಳೆ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಸಮಿತಿ ರಾಜ್ಯ ಉಪಾಧ್ಯಕ್ಷ ದೇವಿಂದ್ರನಾಥ, ಜಿಲ್ಲಾಧ್ಯಕ್ಷ ಲಿಂಗಪ್ಪ ಹತ್ತಿಮನಿ, ಚನ್ನಯ್ಯ ಮಾಳಿಕೇರಿ, ಮಲ್ಲು ಮಾಳಿಕೇರಿ, ಶಾಂತಪ್ಪ ಖಾನಳ್ಳಿ, ಪರಶುರಾಮ, ನಾಗರಾಜ, ಶಿವಪ್ಪ, ನಿಂಗಪ್ಪ ವಡ್ಡನಳ್ಳಿ, ಆಂಜನೇಯ, ರಾಜು, ವಿಜಯ ಹಿಡ್ಲೂರ ಮತ್ತಿತರರು ಇದ್ದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

