ಅನರ್ಹ ಕೈಬಿಟ್ಟು, ಅರ್ಹರನ್ನು ಆಯ್ಕೆ ಮಾಡಿ
ಯಾದಗಿರಿ: 2013-14ನೇ ಸಾಲಿನ ವಾಜಪೇಯಿ ವಸತಿ ಯೋಜನೆಯಡಿ ಆಯ್ಕೆಯಾಗಿರುವ ಫಲಾನುಭವಿಯನ್ನು ಪರಿಶೀಲಿಸಲು ಜಿಲ್ಲಾ ಮಟ್ಟದಲ್ಲಿ ತಂಡವನ್ನು ನೇಮಿಸುವಂತೆ ರಾಜೀವ್ಗಾಂಧಿ ಗ್ರಾಮೀಣ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಕೆ.ಜಿ. ಜಗದೀಶ ಅವರು ಯಾದಗಿರಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.
ಈ ಹಿಂದೆ ಯಾದಗಿರಿ ನಗರಸಭೆ ಸದಸ್ಯರು ವಸತಿ ಯೋಜನೆಯ ಎಂಡಿ ಅವರನ್ನು ಭೇಟಿಯಾಗಿ ಯಾದಗಿರಿ ಶಾಸಕರು ವಾಜಪೇಯಿ ನಗರ ವಸತಿ ಯೋಜನೆಯಲ್ಲಿ ಆಶ್ರಯ ಸಮಿತಿ ಸಭೆಯನ್ನು ಕರೆದು ಎಲ್ಲರ ಸಮಕ್ಷಮದಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿಲ್ಲ. ಸರ್ಕಾರದ ನಿಯಮದಂತೆ, ಆಶ್ರಯ ಸಮಿತಿ ಸಭೆ ಕರೆದರೆ ನಡೆವಳಿಕೆಯ ಪುಸ್ತಕದಲ್ಲಿ ಬರೆಯಬೇಕಾಗುತ್ತದೆ. ಸಭೆಯಲ್ಲಿ ಚರ್ಚಿಸಿದ ವಿಷಯಗಳ ಕೂಡ ಲಿಖಿತ ರೂಪದಲ್ಲಿ ಬರೆದು ಎಲ್ಲರ ಸಹಿ ಪಡೆಯಬೇಕಾಗುತ್ತದೆ. ಸರ್ಕಾರದ ನಿಯಮ ಗಾಳಿಗೆ ತೂರಿ ಮನಬಂದಂತೆ ಪಟ್ಟಿ ತಯಾರಿಸಿದ್ದಾರೆ.
ಎಲ್ಲರ ಸಮಕ್ಷಮ ಅಗತ್ಯ: ಈಗಾಗಲೇ ಆಯ್ಕೆ ಮಾಡಿದ ಪಟ್ಟಿಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮಹಿಳಾ ಘಟಕದ ಉಪಾಧ್ಯಕ್ಷರ ಹೆಸರಿನಲ್ಲಿ ಮತ್ತು ಇನ್ನೂ ಅನೇಕ ಜನರು ಶ್ರೀಮಂತ ವರ್ಗಕ್ಕೆ ಸೇರಿದವರಿಗೆ ಆಯ್ಕೆ ಮಾಡಿದ್ದಾರೆ. ಈ ಪಟ್ಟಿ ರದ್ದುಪಡಿಸಿ, ವಿಶೇಷ ಆಶ್ರಯ ಸಭೆಯನ್ನು ಕರೆದು ಎಲ್ಲರ ಸಮಕ್ಷಮದಲ್ಲಿ ಕಡುಬಡುವರಿಗೆ ಆಯ್ಕೆ ಮಾಡಬೇಕೆಂದು ಮನವಿ ಸಲ್ಲಿಸಿದರ ಪ್ರಯುಕ್ತ ಈ ಪತ್ರ ಬರೆದಿದಾರೆ.
ವಾಜಪೇಯಿ ನಗರ ವಸತಿ ಯೋಜನೆಯಡಿ ಇಲ್ಲಿಯವರೆಗೆ ಯಾದಗಿರಿ ನಗರಸಭೆ ನಿಗಮದಿಂದ ಅನುಮೋದನೆ ಪಡೆದಿರುವುದಿಲ್ಲ. ಒಂದು ವೇಳೆ ನಗರ ಆಶ್ರಯ ಸಮಿತಿಯು ಈಗಾಗಲೇ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದಲ್ಲಿ ಫಲಾನುಭವಿಗಳ ನಿಯಮಾನುಸಾರವಾಗಿ ಆಯ್ಕೆಯಾಗಿರುವ ಬಗ್ಗೆ ಜಿಲ್ಲಾ ಮಟ್ಟದ ಪರಿಶೀಲನಾ ತಂಡವನ್ನು ನೇಮಿಸುವುದು ಹಾಗೂ ಪರಿಶೀಲನೆ ತಂಡವು ಎಲ್ಲ ಫಲಾನುಭವಿಗಳ ಅರ್ಹತೆ ಪರಿಶೀಲಿಸಿ ವರದಿ ನೀಡಿದ ನಂತರ ಅರ್ಹ ಫಲಾನುಭವಿಗಳ ಪಟ್ಟಿಯ ವಿವರಗಳನ್ನು ನಿಗಮದ ವೈಬ್ಸೈಟ್ನಲ್ಲಿ ನಮೂದು ಮಾಡಿ ನಿಗಮದಿಂದ ಅನುಮೋದನೆ ಪಡೆಯುವುದು. ಅನರ್ಹ ಫಲಾನುಭವಿಗಳಿರುವುದು ಕಂಡುಬಂದಲ್ಲಿ ಅಂತಹ ಫಲಾನುಭವಿಗಳನ್ನು ರದ್ದುಗೊಳಿಸಿ, ಹೊಸದಾಗಿ ಅರ್ಹ ಫಲಾನುಭವಿಗಳನ್ನು ನಗರ ಆಶ್ರಯ ಸಮಿತಿ ಮೂಲಕ ಆಯ್ಕೆ ಮಾಡಬೇಕು ಎಂದು ಜಿಲ್ಲಾಧಿಕಾರಿಗೆ ವಸತಿ ಯೋಜನೆ ಎಂಡಿ ಡಾ. ಕೆ.ಜಿ. ಜಗದೀಶ ಅವರು ಬರೆದ ಪತ್ರದಲ್ಲಿ ಸೂಚಿಸಲಾಗಿದೆ.
ಲೋಪದೋಷ ಸರಿಪಡಿಸಿ: ಇದಕ್ಕೆ ಸಂಬಂಧಿಸಿದಂತೆ ಜು.24ರಂದು ಜಿಲ್ಲಾ ಯೋಜನಾ ನಿರ್ದೇಶಕರು, ಪೌರಾಯುಕ್ತರು ಹಾಗೂ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ನೇತೃತ್ವದಲ್ಲಿ ಫಲಾನುಭವಿಗಳ ಆಯ್ಕೆಯಲ್ಲಾದ ಲೋಪದೋಷ ಸರಿಪಡಿಸಿ ಸಮಿತಿ ರಚನೆ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಜಿಲ್ಲಾಧಿಕಾರಿಗಳು ವಸತಿ ಯೋಜನೆಯಡಿಯಲ್ಲಿ ಆಯ್ಕೆ ಮಾಡಲಾಗಿರುವ ಫಲಾನುಭವಿಗಳ ಪಟ್ಟಿಯಲ್ಲಿ ಕಂಡುಬಂದಿರುವ ಲೋಪದೋಷಗಳನ್ನು ಸರಿಪಡಿಸಿ, ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲು ಸಮಿತಿ ರಚಿಸಿ, ಫಲಾನುಭವಿಗಳ ಅರ್ಹತೆ ಕುರಿತು ಪಟ್ಟಿ ಪರಿಶೀಲಿಸಿ, ತಯಾರಿಸಿದ ವರದಿಯನ್ನು ಜಿಲ್ಲಾಧಿಕಾರಿ ಮುಖಾಂತರ ರಾಜೀವ್ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ಬೆಂಗಳೂರು ಸಲ್ಲಿಸುವಂತೆ ಕ್ರಮಕೈಗೊಳ್ಳುವ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

