ಖಾಸಗಿ ವಾಹನಗಳಿಂದ ಕಾನೂನು ಉಲ್ಲಂಘನೆ: ಧರಣಿ
ಗುಲ್ಬರ್ಗ: ಖಾಸಗಿ ಬಸ್, ಟೆಂಪೋ ಟ್ರ್ಯಾಕ್ಸ್, ಮ್ಯಾಕ್ಸಿಕ್ಯಾಬ್, ಮಿನಿ ಬಸ್ ಮುಂತಾದ ವಾಹನಗಳು ಕಾನೂನು ಉಲ್ಲಂಘಿಸಿ ಸಾರಿಗೆ ಕಾರ್ಯಾಚರಣೆ ಮಾಡುತ್ತಿರುವುದನ್ನು ತಡೆಗಟ್ಟಬೇಕೆಂದು ಕೆಎಸ್ಆರ್ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಯೂನಿಯನ್ ಸಿಬ್ಬಂದಿ ಸಾಂಕೇತಿಕ ಧರಣಿ ನಡೆಸಿದರು. ಗುಲ್ಬರ್ಗ ನಗರದಿಂದ ಪ್ರತಿನಿತ್ಯ ಬೆಂಗಳೂರು, ಮಂಗಳೂರು, ದಾವಣಗೆರೆ, ಮುಂಬೈ, ಪುಣೆ, ಹೈದರಾಬಾದ್ ಮಾರ್ಗಗಳಲ್ಲಿ ರಾತ್ರಿ ವೇಳೆ ಸಂಚರಿಸುತ್ತಿವೆ. ಸುಮಾರು 1000 ಖಾಸಗಿ ಮ್ಯಾಕ್ಸಿ ಕ್ಯಾಬ್ ಟೆಂಪೋ ಟ್ರ್ಯಾಕ್ಸ್, ಮಿನಿ ಬಸ್ ಕ್ರೂಜರ್ ಸೇರಿದಂತೆ ಮುಂತಾದ ವಾಹನಗಳು ಜಿಲ್ಲೆಯಲ್ಲಿ ಪ್ರಯಾಣಿಕರನ್ನು ಸಾಗಿಸುತ್ತಿರುವುದರಿಂದ ಕೆಎಸ್ಆರ್ಟಿಸಿ ಗುಲ್ಬರ್ಗ ವಿಭಾಗ-1 ಹಾಗೂ ವಿಭಾಗ-2ಗೆ ಪ್ರತಿದಿನ ಸುಮಾರು 10 ಲಕ್ಷ ಆದಾಯ ನಷ್ಟವಾಗುತ್ತಿದೆ. ಕೂಡಲೇ ಈ ಅನಿಧಿಕೃತ ಖಾಸಗಿ ವಾಹನಗಳನ್ನು ತಡೆಯಬೇಕೆಂದು ಪ್ರತಿಭಟನಾಕಾರರು ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

