ಗುಲ್ಬರ್ಗಾ

ಮುಂಗಾರು: ಹೆಚ್ಚಿದ ಕೃಷಿ ಪರಿಕರಗಳ ಖರೀದಿ

Published On :

ಗುರುಮಠಕಲ್: ಮುಂಗಾರು ಹಂಗಾಮಿನ ಸ್ವಾಗತಕ್ಕೆ ರೈತರಿಂದ ಭರ್ಜರಿ ಸಿದ್ಧತೆ ಸಾಗಿದೆ. ಹೌದು.. ಗುರುಮಠಕಲ್ ಪಟ್ಟಣದಲ್ಲಿ ಮುಂಗಾರು ಬಿತ್ತನೆಗೆಬೇಕಾಗುವ ಪರಿಕರಗಳ ಖರೀದಿಯ ದೃಶ್ಯ ಸಾಮಾನ್ಯವಾಗಿದೆ.
ಬೇಸಿಗೆ ಮುಗಿದು ಕಳೆದ ಒಂದು ವಾರದಿಂದ ತಾಲೂಕಿನೆಲ್ಲೆಡೆಯಲ್ಲಿ ಅಲ್ಪ ಸ್ವಲ್ಪ ಮಳೆಯಾಗುತ್ತಲ್ಲಿರುವ ಹಿನ್ನಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಚಾಲನೆ ದೊರೆತು ಇನ್ನು ಒಂದು ಮಳೆ ಬಂದರೆ ಸಾಕು ಬೀತ್ತನೆ ಮಾಡಬೇಕು ಎನ್ನುವ ರೀತಿಯಲ್ಲಿ ಎಲ್ಲಾ ತರಹದ ಸಿದ್ದತೆಗಳನ್ನು ಮುಗಿಸಿ ಹೊಲಗಳಿಗೆ ಗೊಬ್ಬರ ಹಾಕುವ ಕಾರ್ಯವನ್ನು ಸಹ ರೈತಾಪಿ ಜನ ಮುಗಿಸಿ ಬೀತ್ತನೆಗೆ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ.
ಎತ್ತುಗಳ ಖರೀದಿ ಜೋರು  ಇಲ್ಲಿ ಪ್ರತಿ ಸೋಮವಾರ ನಗರದ ಎಪಿಎಂಸಿ ಅವರಣದಲ್ಲಿ ದನಗಳ ಜಾತ್ರೆಯೆ ನಡೆಯುತ್ತಲ್ಲಿದೆ. ಜಿಲ್ಲೆಯ ವಿವಿಧೆಡೆಗಳಿಂದ ಹಾಗೂ ಪಕ್ಕದ ತೆಲಂಗಾಣದಿಂದ ಇಲ್ಲಿಗೆ ಜಾನುವಾರುಗಳು ಮಾರಾಟಕ್ಕೆ ಬರುತ್ತಿವೆ. ತಮಗೆ ಬೇಕಾದ ಎತ್ತು, ಹೋರಿಗಳನ್ನು ಖರೀದಿಸುವುದರಲ್ಲಿ ರೈತರು ತೊಡಗಿದ್ದಾರೆ.
ಮೊದಲಿನಿಂದಲೂ  ಗುರುಮಠಕಲ್‌ನಲ್ಲಿ ನಡೆಯುವ ಜಾನುವಾರುಗಳ ಸಂತೆಗೆ ತನ್ನದೇ ಆದ ಮಹತ್ವವಿದೆ. ಇದು ತಾಲೂಕಿಗಷ್ಟೇ ಅಲ್ಲದೆ ಪಕ್ಕದ ಆಂಧ್ರಪ್ರದೇಶದ ನಾರಾಯಣ ಪೇಟೆ, ತಾಂಡೂರು ಸೇರಿದಂತೆ ಸುತ್ತ ಮುತ್ತಲ್ಲಿನ ಎಲ್ಲಾ ಗ್ರಾಮ ಹಾಗೂ ವಿವಿಧ ತಾಲೂಕಿನ ರೈತರು ಸಂತೆಯಲ್ಲಿ ಜಾನುವಾರುಗಳ ಖರೀದಿಗೆ ಬರುವ ಹಿನ್ನೆಲೆಯಲ್ಲಿ ವ್ಯಾಪಾರ ಜೋರಾಗಿ ಸಾಗಿದೆ.
ಗಗನಕ್ಕೆ ಏರಿದ ದರ: ಮಾರುಕಟ್ಟೆಯಲ್ಲಿ ದಿನಸಿ ವಸ್ತುಗಳ ದರ ಗಗನಕ್ಕೆ ಏರಿದಂತೆ ರೈತರ ಬೆನ್ನೆಲುಬು ಅಗಿರುವ ಎತ್ತುಗಳ ದರ ಕೂಡ ಗಗನಕ್ಕೆ ಏರಿದಂತೆ ಕಾಣುತ್ತದೆ. ಒಂದು ಜೋಡಿ ಎತ್ತುಗಳನ್ನು ಖರೀದಿ ಮಾಡಬೇಕಾದರೆ ಸುಮಾರು ರು. 50 ರಿಂದ 70 ಸಾವಿರ ಆಗುತ್ತಿವೆ.
ಕಳೆದ ಬಾರಿ ತಿನ್ನಲು ಮೇವು ಇರಲಿಲ್ಲ. ಈಗ ರೈತರಿಗೆ ತೀವ್ರಾ ಸಂಕಷ್ಟದ ಸ್ಥಿತಿ ಎದುರಾಗಿ ರೈತಾಪಿ ಜನತೆ ಎತ್ತುಗಳ ಖರೀದಿ ಮಾಡದಂತಹ ಪರಿಸ್ಥಿತಿ ಉಂಟಾಗಿ ರೈತರ ಪಾಲಿಗೆ ಎತ್ತುಗಳ ಖರೀದಿ ಗಗನ ಕುಸುಮವೇ ಸರಿ ಎನ್ನುವಂತೆ ಆಗಿದೆ.
ಓಟ್ಟಾರೆಯಾಗಿ ಈಗ ಪ್ರಾರಂಭವಾಗುತ್ತಲ್ಲಿರುವ ಈ ಸಂದರ್ಭದಲ್ಲಿ ಮುಂಗಾರಿಗೆ ಬೇಕಾಗುವ ವಸ್ತುಗಳ ಖರೀದಿಯಲ್ಲಿ ರೈತಾಪಿ ಜನತೆ ತುಂಬ ಬ್ಯೂಸಿಯಾಗಿ ಬೀತನೆ ಕಾರ್ಯಕ್ಕೆಬೇಕಾಗುವ ಕೃಷಿ ಪರಿಕರಗಳ ಖರೀದಿ ಜೋರಾಗಿ ನಡೆಸುತ್ತಲ್ಲಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.