ಗುಲ್ಬರ್ಗಾ

ಬ್ಯಾಂಕ್ ಸಿಬ್ಬಂದಿ ವರ್ತನೆಗೆ ಗ್ರಾಹಕರು ಗರಂ

Published On :

ಚಿತ್ತಾಪುರ: ಪಟ್ಟಣದ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ವರ್ತನೆಗೆ ಗ್ರಾಹಕರ ಆಕ್ರೋಶ ವ್ಯಕ್ತಪಡಿಸಿದ್ದು, ಬ್ಯಾಂಕ್ ಸಿಬ್ಬಂದಿ ಗ್ರಾಹಕರನ್ನು ಕಸಕ್ಕಿಂತಲೂ ಕಡೆಯಾಗಿ ಕಾಣುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸದರಿ ಬ್ಯಾಂಕ್‌ನಲ್ಲಿ ಹೆಚ್ಚಿನ ಗ್ರಾಹಕರು ರೈತರು, ವ್ಯಾಪಾರಸ್ಥರು ಮತ್ತು ಅರೆ ಸರ್ಕಾರಿ ನೌಕರರೇ ಇದ್ದಾರೆ. ಇಲ್ಲಿನ ಗ್ರಾಹಕರಿಗೆ ಬ್ಯಾಂಕ್ ವ್ಯವಹಾರದ ಬಗ್ಗೆ ಹೆಚ್ಚಿನ ತಿಳಿವಳಿಕೆ ಇಲ್ಲ. ಈ ಬಗ್ಗೆ ಸಿಬ್ಬಂದಿಗೆ ಕೇಳಿದರೆ ಬಾಯಿಗೆ ಬಂದಂತೆ ಬೈಯುತ್ತಾರೆ. ಅಲ್ಲದೇ ಹೆಚ್ಚಿಗೆ ಏನಾದರೂ ಕೇಳಿದರೆ ನಾಳೆ ಬಾ, ನಾಡಿದ್ದು ಬಾ ಎಂದು ಅಲೆಸುತ್ತಾರೆ. ಇದರಿಂದ ಬ್ಯಾಂಕಿನಲ್ಲಿ ಒಂದು ಸಣ್ಣ ಎಸ್.ಬಿ ಖಾತೆ ತೆಗೆಯಬೇಕೆಂದರೂ ತಿಂಗಳುಗಟ್ಟಲೆ ತಿರುಗಾಡುವಂತಾಗಿದೆ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಸಿಬ್ಬಂದಿ ವರ್ತನೆ ಬೇಜವಾಬ್ದಾರಿಯಿಂದ ಕೂಡಿದೆ. ಮೇಲಧಿಕಾರಿಗಳು ಬ್ಯಾಂಕಿನ ವ್ಯವಸ್ಥೆ ಪರಿಶೀಲಿಸಿ ಬೇರೆ ಸಿಬ್ಬಂದಿ ನೇಮಕ ಮಾಡುವಂತೆ ಒತ್ತಾಯಿಸಿದ್ದಾರೆ. ವೆಂಕಾರೆಡ್ಡಿ ಪಾಟೀಲ್ ಯರಗಲ್, ಶಂಕರ ರಾಠೋಡ, ಚನ್ನಬಸಪ್ಪ ದಂಡೋತಿ, ಕಾಶಿರಾಯ ಕಲಾಲ್, ರವಿ ಪಾಟೀಲ್, ಪುಷ್ಪಾವತಿ, ಸುಶಿಲಾಬಾಯಿ, ಸಿದ್ದು ಗುತ್ತೇದಾರ, ಶೇಖ ಬಬಲು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.