ಮಟ್ಟೂರ್ ಗೆಲವಿಗೆ ವಿಜಯೋತ್ಸವ
ಸಿಂಧನೂರು: ಶಿಕ್ಷಕರ ಪದವಿ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರ ಗೆಲವಿಗೆ ಎಲ್ಲ 6 ಜಿಲ್ಲೆಯ ಶಿಕ್ಷಕರು, ಉಪನ್ಯಾಸಕರು ಸಹಕಾರವೇ ಕಾರಣ ಎಂದು ಶಾಸಕ ಬಾದರ್ಲಿ ಹಂಪನಗೌಡ ಹೇಳಿದರು. ಮಂಗಳವಾರ ಗೆಲವಿನ ಹಿನ್ನೆಲೆಯಲ್ಲಿ ವಿಜಯೋತ್ಸವ ಆಚರಿಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಭಾಗದ ಶಿಕ್ಷಕರ ಹಲವು ಸಮಸ್ಯೆಗಳಿಗೆ ಮತ್ತು ಮೂಲ ಸೌಲಭ್ಯ ಒದಗಿಸುವಲ್ಲಿ ಶರಣಪ್ಪ ಮಟ್ಟೂರು ಅವರು ಮುಂದಾಗಬೇಕು. ಅವರ ನಿಷ್ಠುರವಾದ ಮಾತುಗಳೇ ಅವರ ಗೆಲವಿಗೆ ಮೂಲ ಕಾರಣವಾಗಿದೆ. ತಿಂಗಳ ಹಿಂದೆ ಮೋದಿ ಅಲೆ ಇದೆ ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿ ನಾಯಕರಿಗೆ ಇದೊಂದು ತಕ್ಕಪಾಠ. ತಿಂಗಳಲ್ಲೇ ಲೋಕಸಭೆ ಅಧಿಕಾರಕ್ಕೆ ಬಂದು ರೈಲು ಪ್ರಯಾಣ ದರ ಹೆಚ್ಚಳದಿಂದ ಜನರು ಬಿಜೆಪಿಯನ್ನು ದ್ವೇಷಿಸುತ್ತಿದ್ದಾರೆ. ಇದೇ ಅವರಿಗೆ ಉದಾಹರಣೆಯಾಗಿದೆ ಎಂದು ಹೇಳಿದರು. ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಯುವ ಅಧ್ಯಕ್ಷ ಬಸನಗೌಡ ಬಾದರ್ಲಿ, ಜಿಪಂ ಸದಸ್ಯ ಶಿವನಗೌಡ ಎಲೆಕೂಡ್ಲಗಿ, ನಗರಸಭೆ ಅಧ್ಯಕ್ಷ ಜಾಫರ್ಅಲಿ ಜಾಗೀರದಾರ, ಸದಸ್ಯರಾದ ಪ್ರಭುರಾಜ, ಶರಣಯ್ಯ ಹೊಕ್ರಾಣಿ, ಸುರೇಶ ಶೇಟ್, ಶೇಖರಪ್ಪ ಗಿಣಿವಾರ, ನನ್ನು ಮೇಸ್ತ್ರಿ, ಅಲಿಸಾಬ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿಮಲಿಕ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಶಾಹಿನ್, ಎನ್ಎಸ್ಎಸ್ ರಾಜ್ಯ ಪ್ರಶಸ್ತಿ ವಿಜೇತ ಆರ್.ಸಿ. ಪಾಟೀಲ್, ಎಪಿಎಂಸಿ ಅಧ್ಯಕ್ಷ ಸಣ್ಣಕರಿಯಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

