ಜಿಪಂ ಯೋಜನೆ ಸಮಿತಿ ಸಭೆ 30ಕ್ಕೆ ಮುಂದೂಡಿಕೆ
ಯಾದಗಿರಿ: ಜಿಲ್ಲೆಯಲ್ಲಿನ ವಿವಿಧ ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ಯಾದಗಿರಿ ಮತ್ತು ಶಹಾಪುರ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕ್ರೀಯಾ ಯೋಜನೆ ಸಿದ್ಧಪಡಿಸದ ಕಾರಣ ಸಭೆ ಮಂದೂಡಿದ ಪ್ರಸಂಗ ಗುರುವಾರ ನಡೆದಿದೆ. ಇಲ್ಲಿನ ಜಿಪಂ ಸಭಾಂಗಣದಲ್ಲಿ ಅಧ್ಯಕ್ಷ ಸಿದ್ದಣ್ಣಗೌಡ ಕೆಂಭಾವಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಸರಿಯಾದ ಕ್ರೀಯಾ ಯೋಜನೆ ಸಲ್ಲಿಸದ ಕಾರಣ ಅಧಿಕಾರಿಗಳ ವಿರುದ್ಧ ಹರಿಹಾಯ್ದು, ಜೂ.30 ರವರೆಗೆ ಮುಂದೂಡಿದ ಪ್ರಸಂಗ ಜರುಗಿತು. ಗ್ರಾ.ಪಂ. ವ್ಯಾಪ್ತಿಗಳಲ್ಲಿನ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕ್ರಿಯಾಯೋಜನೆ ಇನ್ನೂ ಸಿದ್ಧಗೊಂಡಿಲ್ಲ. ಹೀಗಾದರೆ ಜಿಲ್ಲೆಯ ಅಭಿವೃದ್ಧಿ ಹೇಗೆ ಸಾಧ್ಯ? ಎಂದು ಸರ್ವ ಸದಸ್ಯರು ಪ್ರಶ್ನಿಸಿದಾಗ, ಉತ್ತರ ನೀಡಿದ ಜಿ.ಪಂ. ಮಖ್ಯ ಯೋಜನಾಕಾರಿ ಬಸವರಾಜ, ಕ್ರೀಯಾ ಯೋಜನೆ ಸಿದ್ಧಪಡಿಸಿ, ಸಲ್ಲಿಸುವಂತೆ ಸಂಬಂಧಪಟ್ಟ ತಾಪಂ ಇಒಗಳಿಗೆ ಹಲವು ಬಾರಿ ಸೂಚಿಸಿದರೂ, ಇನ್ನೂ ನೀಡಿಲ್ಲ. ಅಲ್ಲದೆ ಕೆಲ ಗ್ರಾಪಂಗಳ ಪಿಡಿಓಗಳು ಕ್ರೀಯಾ ಯೋಜನೆ ನೀಡಲು ಹಿಂದೇಟು ಹಾಕುತ್ತಿರುವುದರಿಂದ ಸರ್ಕಾರದಿಂದ ಅನುದಾನ ಬಿಡುಗಡೆಯಾಗುತ್ತಿಲ್ಲ ಎಂದರು.
ಮಂಜೂರಾದ ಗಾರ್ಡನ್ಗಳ ನಿರ್ಮಾಣವೇ ಆಗಿಲ್ಲ
ಯಾದಗಿರಿ: ಇಲ್ಲಿನ ಒಟ್ಟು 233 ಗಾರ್ಡನ್ಗಳು ಮಂಜೂರಾಗಿದ್ದು, ನಿರ್ಮಾಣಗೊಂಡಿರುವುದು ಮಾತ್ರ ಕೇವಲ 33 ಗಾರ್ಡನ್ಗಳು. ಉಳಿದ ಭೂಮಿಯನ್ನು ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದು, ಅದನ್ನು ತೆರವು ಗೊಳಿಸಬೇಕು ಎಂದು ಜೆಡಿಎಸ್ ಹಿಂದುಳಿದ ವರ್ಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಜೇಂದ್ರ ಅಲಿಪೂರ ಆಗ್ರಹಿಸಿದ್ದಾರೆ. ಅವರು ಬುಧವಾರ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸರ್ಕಾರಿ ಜಮೀನನ್ನು ದೊಡ್ಡ ರಾಜಕಾರಣಿಗಳು ಒತ್ತುವರಿ ಮಾಡಿಕೊಂಡಿದ್ದು, ಇವೆಲ್ಲವನ್ನು ಸಿಓಡಿ ತನಿಖೆ ವಹಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದರು. ನಗರದಲ್ಲಿರುವ ಕೆರೆಯು ಜಿಲ್ಲಾಡಳಿತದ ಪ್ರಕಾರ 55 ಏಕರೆ ಇದೆ. ಆದರೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ಪ್ರಕಾರ 52 ಏಕರೆ ಪ್ರದೇಶವಿದೆ ಎಂದು ಹೇಳುತ್ತಿದ್ದಾರೆ. ಇನ್ನೂ 3 ಏಕರೆ ಒತ್ತವರಿಯಾಗಿದೆ. ಇದನ್ನು ಕೂಡಲೆ ತೆರವುಗೊಳಿಸಬೇಕು. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನ ಎಲ್ಲ ಸರ್ಕಾರಿ ಭೂಮಿಯನ್ನು ಸರ್ವೆ ಮಾಡಿಸಬೇಕು. ಮತ್ತು ನಗರದ ರೈಲು ನಿಲ್ದಾಣದಿಂದ ಗಾಂಧಿ ಚೌಕವರೆಗೆ ಯಾವುದೇ ಶೌಚಾಲಯವಿಲ್ಲದೆ ನಾಗರಿಕರು, ಮಹಿಳೆಯರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಕೂಡಲೆ ನಗರಸಭೆ ಹಾಗೂ ಜಿಲ್ಲಾಡಳಿತ ಈ ಕುರಿತು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.
ರಸ್ತೆ ದುರಸ್ತಿಗೆ ಆಗ್ರಹ
ಯಾದಗಿರಿ: ತಾಲೂಕಿನ ಆನೂರ(ಕೆ)-ಸೈದಾಪುರ ನಡುವಿನ ರಸ್ತೆ ಸುಧಾರಣೆಗೆ ಆಗ್ರಹಿಸಿ ಯುವ ಭಾರತ ಕ್ರಾಂತಿದಳದ ಜಿಲ್ಲಾಧ್ಯಕ್ಷ ನಂದಗೋಪಾಲ ಪಟವಾರಿ ನೇತೃತ್ವದಲ್ಲಿ ಲೋಕೋಪಯೋಗಿ ಅಭಿಯಂತರಿಗೆ ಮನವಿ ಸಲ್ಲಿಸಲಾಯಿತು. ಆನೂರ(ಕೆ) ಗ್ರಾಮವು ಸೈದಾಪುರದಿಂದ ಕೇವಲ 10ಕಿ.ಮೀ ಅಂತರದಲ್ಲಿದೆ. ಆದರೆ ರಸ್ತೆಯಿಂದಾಗಿ ವಾಹನ ಸವಾರರು ಸೇರಿದಂತೆ ಪ್ರಯಾಣಿಕರು ಹರ ಸಾಹಸ ಪಡುವಂತಾಗಿದೆ. ಈ ಹಿಂದೆ ಗ್ರಾಮಕ್ಕೆ ಬಸ ಸೌಕರ್ಯವಿತ್ತು ಇದೀಗ ರಸ್ತೆ ಸರಿಯಿಲ್ಲ ಎಂಬ ಕಾರಣಕ್ಕಾಗಿ ಕೆಎಸ್ಆರ್ಟಿಸಿ ಅಧಿಕಾರಿಗಳು ಬಸ್ ಸಂಚಾರವನ್ನೂ ಸ್ಥಗಿತಗೊಳಿಸಿದ್ದಾರೆ. ಇದರಿಂದಾಗಿ ಇಲ್ಲಿನ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

