ಗುಲ್ಬರ್ಗಾ

ಸಿಬ್ಬಂದಿ ಕೊರತೆ ಚಿತ್ತಾಕ್ಕೆ ಚಿಂತೆ

Published On :

ಚಿತ್ತಾಪುರ: ಕಸ ವಿಲೇವಾರಿಯಲ್ಲಿನ ಬೇಕಾಬಿಟ್ಟಿತನ ಚಿತ್ತಾಪುರದಲ್ಲಿ ತಾಂಡವವಾಡುತ್ತಿದೆ. ಆದರೆ ಇಲ್ಲಿನ ಪುರಸಭೆ 'ಸಿಬ್ಬಂದಿ ಕೊರತೆ' ಎಂದು ನೈರ್ಮಲ್ಯ ವಿಚಾರದಲ್ಲಿ ನಿರ್ಲಕ್ಷತನ ತೋರಿಸುತ್ತಿದೆ. ಕಸ ವಿಲೇವಾರಿ, ಶುದ್ಧ ಕುಡಿಯುವ ನೀರು ಪೂರೈಸುವುದು, ಸ್ವಚ್ಛತೆ ಕಾಪಾಡಿಕೊಳ್ಳುವುದು ರಸ್ತೆ ಮತ್ತು ಬೀದಿ ದೀಪ ಇನ್ನಿತರ ಸಾಲಭ್ಯ ಕಲ್ಪಿಸುವುದು ಪುರಸಭೆಯ ಕರ್ತವ್ಯ. ಇದಕ್ಕಾಗಿಯೇ ಪ್ರತಿ ವರ್ಷ ಸರ್ಕಾರದಿಂದ  ಕೋಟ್ಯಂತರ ರು. ಅನುದಾನ ಬರುತ್ತದೆ. ಆದರೆ ಸಮಸ್ಯೆ ಮಾತ್ರ ಕಡಿಮೆಯಾಗದೇ ಹೆಚ್ಚುತ್ತಿದೆ.
ಪೌರ ಕಾರ್ಮಿಕರ ಕೊರತೆ: ಕಾರ್ಮಿಕರ ಕೊರತೆಯಿಂದ ಖಾಸಗಿ ಸಂಸ್ಥೆಯಾದ ಮೇ. ರಾಜುಕುಮಾರ ಲೇಬರ್ ಸಪ್ಲೆ ಚಿತ್ತಾಪುರ ಮೂಲಕ 35 ಜನ ಕಾರ್ಮಿಕರು ಹಾಗೂ ಪುರಸಭೆಯ ಕಾಯಂ 17 ಕಾರ್ಮಿಕರನ್ನು ನೇಮಿಸಿ ಪಟ್ಟಣದ ಸ್ವಚ್ಛತೆ ಹಾಗೂ ಕಸ ವಿಲೇವಾರಿಗೆ ಮಾಡುತ್ತಿದೆ. ಕೈಗಾಡಿ ಮೂಲಕ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಿ ವಿಲೇವಾರಿ ಮಾಡುತ್ತಿರುವುದರಿಂದ ಪಟ್ಟಣದಲ್ಲಿ ಸ್ವಲ್ಪ ಮಟ್ಟಿನ ಸ್ವಚ್ಛತೆ ಕಾಣಿಸುತ್ತದೆ. ಆದರೆ ಈ ಕಾರ್ಯ ಪಟ್ಟಣದ ಮುಖ್ಯ ರಸ್ತೆ ಹಾಗೂ ಕೆಲವೇ ವಾರ್ಡ್‌ನ ಪ್ರದೇಶಗಳಲ್ಲಿ ಇರುವುದರಿಂದ ಉಳಿದ ಕೆಲ ವಾರ್ಡ್‌ಗಳು ಗಬ್ಬೆದ್ದಿವೆ.
ಪಟ್ಟಣದ ಕಸ ಸಂಗ್ರಹಕ್ಕೆ ಇತ್ತೀಚೆಗೆ ಹಲವಾರು ಪ್ರದೇಶಗಳಲ್ಲಿ ಕಸದ ತೊಟ್ಟಿ ಸ್ಥಾಪಿಸಿ ತ್ಯಾಜ್ಯ ಸಂಗ್ರಹಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಆದರೆ ಸರಿಯಾದ ನಿರ್ವಹಣೆ ಇಲ್ಲದೇ ಕೆಲವೂಂದು ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಹಾರಾಡುವ ಪ್ಲಾಸ್ಟಿಕ್, ರಸ್ತೆ ಚರಂಡಿ ಮುಚ್ಚಿಹೋಗುವಷ್ಟು ಕಸ ಕಡ್ಡಿ ಹಾಗೂ ಹಂದಿಗಳ ಕಾಟದಿಂದ ಆ ಪ್ರದೇಶ ನಾರುತ್ತಿದೆ. ಇದರಿಂದ ಕಸ ಕೊಳೆತು ಸೊಳ್ಳೆ ನೊಣಗಳ ಕಾಟ ಹೆಚ್ಚಾಗುತ್ತಿದೆ, ಸಾಂಕ್ರಾಮಿಕ ರೋಗ- ರುಜಿನಗಳು ಚಿತ್ತಾಪುರ ಜನರನ್ನು ಕಾಡುತ್ತಿವೆ.

ಪುರಸಭೆ ಅಧ್ಯಕ್ಷರು ಏನಂತಾರೆ?
ಪಟ್ಟಣದ ಪ್ರತಿ ವಾರ್ಡ್‌ನಲ್ಲೂ ಸ್ವಚ್ಛತೆಕೈಗೊಳ್ಳುತ್ತಿದ್ದೇವೆ. ನಮ್ಮಲ್ಲಿ ಪೌರ ಸಿಬ್ಬಂದಿ ಕೊರತೆಯಿಂದ ಕೆಲವೆಡೆ ಕಸ ವಿಲೇವಾರಿ ವಿಳಂಬವಾಗುತ್ತಿದೆ. ಹೀಗಾಗಿ ಕಸ ವಿಲೇವಾರಿಗೆಂದೇ 5 ಟ್ರ್ಯಾಕ್ಟರ್, 2 ಟಂಟಂ ವಾಹನ, 1 ಜೆಸಿಬಿ ಮೂಲಕ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ.
 ಶಿವಕಾಂತ ಬೆಣ್ಣೂರಕರ್, ಪುರಸಭೆ ಅಧ್ಯಕ್ಷರು, ಚಿತ್ತಾಪುರ,

ವಾರ್ಡ್ ನಂ.9ರಲ್ಲಿರುವ ನಿವಾಸಿಗಳಿಗೆ ಕಸ ವಿಲೇವಾರಿಯ ಅಗತ್ಯ ತುಂಬಾ ಇದೆ. ಇಲ್ಲಿಯ ಸ್ಥಳವನ್ನು ಸ್ವಚ್ಛಗೊಳಿಸಿ ಕಸ ಹಾಕುವ ಹೊಸ ಪೆಟ್ಟಿಗೆ ವ್ಯವ್ಯಸ್ಥೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಮಾಡಬೇಕು. ಇದರಿಂದ ಇಲ್ಲಿಯ ಜನರ ಅರೋಗ್ಯ ಕಾಪಾಡಿದಂತೆ ಅಗುತ್ತದೆ.
 ಮಹಮ್ಮದ್ ಮೋಸಿನ್. ವಾರ್ಡ್ 9ರ ನಿವಾಸಿ

ಪಟ್ಟಣದಲ್ಲಿಯೇ ಹಿಂದುಳಿದ ವಾರ್ಡ್ ಬಾಹರಪೇಟ್. ಇಲ್ಲಿ ಚುನಾಯಿತರಿದ್ದರು ಕೂಡಾ ಇಲ್ಲಿ ಕಸ ವಿಲೇವಾರಿ ಹಾಗೂ ಚರಂಡಿ ಸ್ವಚ್ಛತೆ ಮಾಡುವುದು ಅಪರೂಪ. ಇದರ ಬಗ್ಗೆ ಪುರಸಭೆ ಅಧ್ಯಕ್ಷರು, ಅಧಿಕಾರಿಗಳು ಗಮನಹರಿಸಿ ಇಲ್ಲಿಯ ರಸ್ತೆ, ಕಸ ವಿಲೇವಾರಿ, ಚರಂಡಿ ವ್ಯವಸ್ಥೆ ಮಾಡಬೇಕು.
 ಶಿವು ಅರಬೋಳ, 16 ವಾರ್ಡ್‌ನ ನಿವಾಸಿ.
-ರವಿಶಂಕರ ಬುರ್ಲಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.