ಆಸಕ್ತಿ ಇದ್ದರೆ ಸಾಹಿತ್ಯ ಸಾಧನೆ ಸುಲಭ
ಶಹಾಪುರ: ಬಾಲ್ಯದಿಂದಲೇ ಪಠ್ಯೇತರ ಚಟುವಟಿಕೆಯೊಂದಿಗೆ ಇತರೆ ಕನ್ನಡ ಸಾಹಿತ್ಯ ಪುಸ್ತಕಗಳನ್ನು ನಿರಂತರ ಓದುತ್ತಿದ್ದರೆ ಅದರಲ್ಲಿ ಆಸಕ್ತಿ ಬೆಳೆದು ಸಾಹಿತ್ಯ ಕೃಷಿಯಲ್ಲಿ ಸಾಧನೆ ಮಾಡಲು ಸಾದ್ಯ ಎಂದು ನಿವೃತ್ತ ಪ್ರಾಂಶುಪಾಲ ಸಾಹಿತಿ, ಪಾಲಾಕ್ಷಿ ವಿ. ಅರಕೇರಿ ನುಡಿದರು.
ಪಟ್ಟಣದ ಸುಮಿತ್ರಾ ಸ್ಮಾರಕ ಪ್ರೌಢ ಶಾಲೆಯಲ್ಲಿ ಶನಿವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾದ ಶಾಲೆಗೊಂದು ಸಾಹಿತ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಕರ ಸೃಜನಶೀಲತೆಯಿಂದ ಮಕ್ಕಳಲ್ಲಿ ಸಾಹಿತ್ಯ ಆಸಕ್ತಿ ಮೂಡಿಸುವಲ್ಲಿ ಸಾಧ್ಯವಿದೆ. ಕಲೆ, ಸಾಹಿತ್ಯ, ಸಂಸ್ಕೃತಿಯ ಜತೆ ಕವಿಗಳ ಪರಿಚಯ, ಒಡನಾಟದಿಂದ ಸ್ಪೂರ್ತಿ ತುಂಬಲಿದೆ. ಮಕ್ಕಳ ಮನಸ್ಸು ಉಲ್ಲಾಸಿತಗೊಂಡು ಆನಂದ ಪ್ರಾಪ್ತಿಯಾಗುತ್ತದೆ. ಅಲ್ಲದೆ ಪಠ್ಯವನ್ನು ಪರೀಕ್ಷೆಗಿಂತ ಜೀವನ ಮನೋವಿಕಾಸಕ್ಕಾಗಿ ಓದಬೇಕು ಎಂದರು.
ತಾ. ಕಸಾಪ ಅಧ್ಯಕ್ಷ ಸಿದ್ದಲಿಂಗಪ್ಪ ಆನೆಗುಂದಿ ಮಾತನಾಡಿ, ದಿನ ನಿತ್ಯದ ನಿಮ್ಮ ಚಟುವಟಿಕೆಯಲ್ಲಿ ದೃಷ್ಠಿ ಹಾಯಿಸಿದ್ದನ್ನು ಬರೆದರೆ ಅದೊಂದು ಲೇಖನವಾಗುತ್ತದೆ. ನಾಲ್ಕು ಪದ ಬರೆಯಲು ಶುರುಮಾಡಿದರೆ ಕವನ ಚುಟುಕುಗಳಾಗಿ ನಿಮ್ಮಿಂದ ಹೊರ ಹೊಮ್ಮುತ್ತವೆ. ನೀವು ಬರೆದದ್ದನ್ನ ಪ್ರೋತ್ಸಾಹಿಸಲು ಸಾಹಿತ್ಯ ಪರಿಷತ್ ಬೆನ್ನಹಿಂದಿದೆ ಎಂದರು.
ಇತರೆ ಜಿಲ್ಲೆ, ತಾಲೂಕುಗಳಿಗೆ ಹೋಲಿಸಿದರೆ ಶಹಾಪುರ ತಾಲೂಕಿನಲ್ಲಿ ಹೆಚ್ಚು ಸಾಹಿತಿ, ಕವಿಗಳಿದ್ದಾರೆ. ಮಕ್ಕಳಲ್ಲಿ ಮೂಡಿ ಇನ್ನು ಹೆಚ್ಚು ಕವಿ ಸಾಹಿತಿಗಳಾಗಿ ಹೊರ ಬರಲಿ. ಅಲ್ಲದೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿರಂತರ ಸಾಹಿತ್ಯ ಬಿಂಬಿಸುವ ಕಾರ್ಯಕ್ರಮ ನಡೆಸುವಂತಾಗಲಿ ಎಂದು ತಾಲೂಕು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಚಂದ್ರಶೇಖರ ಆರಬೋಳ ಅಭಿಪ್ರಾಯಪಟ್ಟರು.
ಸಿದ್ದರಾಮ ಹೊನ್ಕಲ್, ಶಿವಣ್ಣ ಇಜೇರಿ, ಹಳಗುಂಡ ವಿ. ದೇಸಾಯಿ, ರವೀಂದ್ರನಾಥ ಪತ್ತಾರ ಇದ್ದರು. ಶಿಕ್ಷಕ ಸುರೇಖಾ ಪಾಟೀಲ, ಬಂಡೇಶ ಎಂ. ಅನವಾರ, ಶಿವುಕುಮಾರ ಪ್ರಭುಗೌಡ, ಸದಾಶಿವ ಬಾಗೇವಾಡಿ, ವೈದೇಹಿ ಗಲಗಲಿ, ಚಂದ್ರಶೇಖರ ನಾಶಿ, ಬಸವರಾಜ ತಳ್ಳಿಕೇರಿ, ನಾನಾಗೌಡ, ಅರ್ಜುನ್, ಪ್ರಕಾಶ ಕುಲ್ಕರ್ಣಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

