ಗುಲ್ಬರ್ಗಾ

'ಪ್ರತಿ ಕ್ವಿಂಟಾಲ್ ಶೇಂಗಾಕ್ಕೆ ರು. 6000 ಬೆಂಬಲ ಬೆಲೆ ನೀಡಿ'

Published On :

ಯಾದಗಿರಿ: ಶೇಂಗಾ ಬೆಲೆಗೆ ಕನಿಷ್ಠ ರು. 6000 ಬೆಂಬಲ ಬೆಲೆ ನೀಡುವಂತೆ ರೈತರು ಆಗ್ರಹಿಸಿದ್ದಾರೆ. ಶನಿವಾರ ನಡೆದ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಜಿಲ್ಲೆಯ ಸಹಸ್ರಾರು ರೈತರು ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.
ಈ ಬಾರಿ ಶೇಂಗಾ ಇಳುವರಿಗೆ ಹೊಡೆತ ಬಿದ್ದಿದ್ದು, ರೈತರು ಕಂಗಾಲಾಗಿದ್ದಾರೆ. ಹಾಗಾಗಿ, ಪ್ರತಿ ಕ್ವಿಂಟಾಲ್‌ಗೆ ರು. 6000 ಬೆಂಬಲ ಬೆಲೆ ನೀಡುವಂತೆ ಅವರು ಮನವಿ ಮಾಡಿದರು.
ವಿದ್ಯುತ್ ಸಮಸ್ಯೆಯಿಂದಾಗಿ ಕಂಗೆಟ್ಟಿದ್ದ ರೈತರಿಗೆ ಹನಿ ನೀರಾವರಿಗಾಗಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳಿಗೆ ಅಲೆದಾಡಿದರೂ ಫಲ ಸಿಗಲಿಲ್ಲ. ಕೆಲವರಿಗೆ ಹನಿ ನೀರಾವರಿ ಸೌಲಭ್ಯ ಸಿಕ್ಕಿತಾದರೂ ಉಳಿದವರು ಆ ಸೌಲಭ್ಯದಿಂದ ದೂರವೇ ಉಳಿದರು.
ನಿರೀಕ್ಷಿತ ಬೆಲೆ ಇಲ್ಲ: ಇಷ್ಟಲ್ಲದೆ ಜೆಸ್ಕಾಂ ಇಲಾಖೆ ಸರಿಯಾಗಿ ವಿದ್ಯುತ್ ಸರಬರಾಜೂ ಮಾಡದ್ದರಿಂದ ಬೆಳೆಯ ಬೆಳವಣಿಗೆ ಕುಂಠಿತಗೊಂಡು ಇಳುವರಿ ಮೇಲೆ ಹೆಚ್ಚಿನ ಪರಿಣಾಮ ಬೀರಿತು. ಈ ಎಲ್ಲಾ ಸಮಸ್ಯೆಗಳಿಂದ ಬಳಲುತ್ತಿರುವ ಹಾಗೂ ಸಾಲದ ಶೂಲದಲ್ಲಿ ನರಳುತ್ತಿರುವ ರೈತರ ಮೇಲೆ ಕೃಷಿ ಉತ್ಪನ್ನ ಮಾರುಕಟ್ಟೆಯ ದರ ಕಡಿಮೆ ಆಗಿರುವುದು ಮತ್ತೊಂದು ಸಂಕಷ್ಟಕ್ಕೀಡು ಮಾಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮಧ್ಯೆ ಪ್ರವೇಶಿಸಿ, ಕಬ್ಬು ಹಾಗೂ ಭತ್ತಕ್ಕೆ ಕೊಟ್ಟಂತೆ ಶೇಂಗಾ ಬೆಳೆಗು ಬೆಂಬಲ ಬೆಲೆಗೂ ಬೆಂಬಲ ಬೆಲೆ ಘೋಷಿಸಬೇಕು ಎಂದು ರೈತರು ಆಗ್ರಹಿದ್ದಾರೆ.
ನೂರೆಂಟು ಕಾನೂನು: ಸರ್ಕಾರ ಈಗಾಗಲೇ ಕೆಓಎಫ್‌ನಿಂದ ಕ್ವಿಂಟಾಲ್‌ಗೆ ರು. 4000 ಬೆಲೆ ನೀಡಿ ಖರೀದಿಸುತ್ತಿದ್ದು, ಅದಕ್ಕೆ ನೂರೆಂಟು ಕಾನುನುಗಳನ್ನು ಅಳವಡಿಸಲಾಗುತ್ತಿದೆ. ಇದನ್ನು ಬದಲಿಸಿ, ರೈತರು ಬೆಳೆದಿರುವ ಶೇಂಗಾ ಬೆಳೆಗೆ ಸಮಾನವಾಗಿ ಕನಿಷ್ಠ ರು. 6000 (ಪ್ರತಿ ಕ್ವಿಂಟಾಲ್‌ಗೆ) ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಚಳುವಳಿಯ ಎಚ್ಚರಿಕೆ: ಬೆಂಬಲ ಬೆಲೆಗಾಗಿ ಈವರೆಗೆ ರಾಜ್ಯ ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ ರೈತರು, ಸರ್ಕಾರ ಈಗ ರೈತರ ಸಮಸ್ಯೆ ಬಗೆಹರಿಸದಿದ್ದರೆ, ರೈತರು ಪ್ರತಿಭಟನೆಯ ಹಾದಿಯನ್ನು ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಪ್ರತಿಭಟನೆಯಲ್ಲಿ, ಉಮೇಶ ಕೆ. ಮುದ್ನಾಳ, ಚಂದ್ರಶೇಖರ ಮುಂಡರಗಿ, ಹಣಮಂತ ಆಶನಾಳ, ಸಿದ್ದಪ್ಪ ಮಾಹದೇವಪ್ಪ ನಾಲಡಗಿ, ಕಸ್ತೂರಪ್ಪ ಕುರಕುಂದಿ, ನಾನ್ಯಾ, ಬೋಜ್ಯಾ ಮುದ್ನಾಳ ತಾಂಡಾ, ಸಾಬರಡ್ಡಿ ಮುದ್ನಾಳ, ಶರಣಪ್ಪ ಸಾಯಬಣ್ಣ, ಕೌಳೂರುಮಹಾದೇಪ್ಪ ಎಂಟಿ ಪಲ್ಲಿ, ನಾಗಪ್ಪ ತಳಿಬಿಡಿ, ರಡ್ಡಿ ಉಳ್ಳೆಸೂಗುರ, ಶರಣಪ್ಪ ಮೈಲಾಪೂರ, ನಿಂಗಪ್ಪ ಮಳ್ಳಳ್ಳಿ, ಆಶಪ್ಪ, ಶರಣು ಯಡ್ಡಳ್ಳಿ, ಈಶ್ವರ ಹೋರುಂಚಾ, ಮಲ್ಲಪ್ಪ ಹತ್ತಿಕುಣಿ, ಶರಣಪ್ಪ, ಸಾಬಣ್ಣ, ರೋಹಿತ, ಚಾಂದಾಫಾಶಾ, ರಮೇಶ ಹಾಗೂ ಸುತ್ತುಮುತ್ತಲಿನ ಗ್ರಾಮದ ರೈತರ ಸಹಸ್ರಾರು ಸಂಖ್ಯೆಯಲ್ಲಿ ಉಪಸ್ಥತಿರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.