ಗುಲ್ಬರ್ಗಾ

10ರಂದು ಹಾರಕೂಡ ಚೆನ್ನಬಸವ ಶಿವಯೋಗಿಗಳ ರಥೋತ್ಸವ

Published On :

ಚಿಂಚೋಳಿ: ಪಟ್ಟಣದ ಲಿಂ. ಹಾರಕೂಡ ಚೆನ್ನಬಸವ ಶಿವಯೋಗಿಗಳ 63ನೇ ಜಾತ್ರಾ ಮಹೋತ್ಸವದ ರಥೋತ್ಸವ ಮಾ.10ರಂದು ನಡೆಯಲಿದೆ.
ಜಾತ್ರೆ ನಿಮಿತ್ತವಾಗಿ ಮಾ.2ರಿಂದ 10ರವರೆಗೆ ಪ್ರತಿದಿನ ಸಂಜೆ 8 ಗಂಟೆಗೆ ಪಂಡಿತ ಪುಟ್ಟರಾಜ ಗವಾಯಿಗಳ ಶಿಷ್ಯರಾದ ಹಿರೇಮಠ ಮಹಾರಾಜಪೇಠದ ಪಂ. ಪ್ರಭಯ್ಯ ಶಾಸ್ತ್ರಿಗಳಿಂದ ಶ್ರೀ ಹಾರಕೂಡ ಚೆನ್ನಬಸವ ಶಿವಯೋಗಿಗಳ ಪುರಾಣ ಪ್ರಾರಂಭವಾಗಿದೆ. ವಿರೂಪಾಕ್ಷಯ್ಯ ಗವಾಯಿಗಳಿಂದ ಸಂಗೀತ ಸೇವೆ, ಸಿದ್ದಣ್ಣ ದೇಸಾಯಿ ಕಲ್ಲೂರ ಅವರಿಂದ ತಬಲಾ ವಾದನ ನಡೆಯಲಿದೆ.
ಮಾ.9ರಂದು ಬೆಳಗ್ಗೆ 10 ಗಂಟೆಗೆ ಜಾತ್ರೆ ನಿಮಿತ್ತವಾಗಿ ಗಾಳಿಪಟ, ರಂಗೋಲಿ ರಸಪ್ರಶ್ನೆ ಕಾರ್ಯಕ್ರಮ ನಡೆಯಲಿವೆ. ಸಂಜೆ 5 ಗಂಟೆಗೆ ವರ್ಣರಂಜಿತ ಪಲ್ಲಕ್ಕಿ ಉತ್ಸವ್ ಹಾಗೂ ಉಚ್ಚಾಯಿ ಮೆರವಣಿಗೆ ನಡೆಯಲಿದೆ.
ಮಾ.10ರಂದು ಬೆಳಗ್ಗೆ 8 ಗಂಟೆಗೆ ಸುಮಂಗಲೆಯವರಿಂದ ಕುಂಭಾಭಿಷೇಕ, 11 ಗಂಟೆಗೆ ತಾತನವರ ತೊಟ್ಟಿಲು ಕಾರ್ಯಕ್ರಮ. ಸಂಜೆ 6 ಗಂಟೆಗೆ ರಥೋತ್ಸವ ನಡೆಯಲಿದೆ.
ಸಂಜೆ 7 ಗಂಟೆಗೆ ತೇರ ಮೈದಾನ ಪಂಚಲಿಂಗೇಶ್ವರ ಬುಗ್ಗಿ ಹತ್ತಿರ ಶಿವಾನುಭವ ಚಿಂತನಗೋಷ್ಠಿ ಸಮಾರಂಭದ ನಡೆಯಲಿದೆ. ಶಿವಾನಂದ ಸ್ವಾಮಿಗಳ ನೇತೃತ್ವದಲ್ಲಿ ಚೆನ್ನವೀರ ಶಿವಾಚಾರ್ಯರ ಸಮ್ಮುಖದಲ್ಲಿ ಪರ್ವತಲಿಂಗ ಮಹಾರಾಜರು, ಸೈಯದ್ ಅಕ್ಬರ್ ಹುಸೇನಿ ಸಜ್ಜಾದೇ ಇರುವರು. ಶಾಸಕ ಡಾ. ಉಮೇಶ ಜಾಧವ ಅಧ್ಯಕ್ಷತೆ ವಹಿಸುವರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬೀದರ್ ಸಂಸದ ಎನ್. ಧರಂಸಿಂಗ್, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಮಾಜಿ ಸಚಿವ ವೈಜನಾಥ ಪಾಟೀಲ್, ಸುನೀಲ್ ವಲ್ಯಾಪೂರೆ ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.