ಗುಲ್ಬರ್ಗಾ

ಕಸ ವಿಲೇವಾರಿಯಲ್ಲಿ ಪುರಸಭೆ ದಿವ್ಯ ನಿರ್ಲಕ್ಷ್ಯ

Published On :

ಶಹಾಪುರ: ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿನ ಹಲವಾರು ವಾರ್ಡ್‌ಗಳಲ್ಲಿ ಅಧಿಕಾರಿಗಳು ಕಸವಿಲೇವಾರಿ ಬಗ್ಗೆ ಗಮನಹರಿಸದೆ ಇರುವ ಹಿನ್ನೆಲೆಯಲ್ಲಿ ಇದೀಗ ಈ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ ಎಂದು ಹಳೆಪೇಟೆ ವಾರ್ಡ್‌ನ ಮಹ್ಮದ್ ಇಸ್ಮಾಯಿಲ್ ಇಬ್ರಾಹಿಂ ಖಲೀಲ ತಿಮ್ಮಾಪುರಿ ಆರೋಪಿಸಿದ್ದಾರೆ.
  ಈ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ತಿಳಿದು ಬಂದ ಪ್ರಕಾರ 2013-13ನೇ ಸಾಲಿಗಾಗಿ ಸುಮಾರು 26 ಲಕ್ಷಕ್ಕಿಂತಲೂ ಹೆಚ್ಚಿನ ಹಣವನ್ನು ಕಸ ವಿಲೇವಾರಿ ಮಾಡಲು ಖರ್ಚು ಮಾಡಲಾಗಿದೆ. ಅದರೂ ನಿಗದಿತವಾಗಿ ಹಳೆಪೇಟೆಗೆ ಸಂಬಂಧಿಸಿದಂತೆ 15ರಿಂದ 18ನೇ ವಾರ್ಡ್‌ನವರೆಗೆ ಚರಂಡಿಗಳ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ನೀರು ಸರಾಗವಾಗಿ ಹರಿಯದೆ ಮುಖ್ಯರಸ್ತೆಯಲ್ಲಿ ಕಸಗುಡಿಸುವವರ ಕೊರತೆ ಎದ್ದು ಕಾಣುತ್ತಿದೆ. ಕಾರ್ಮಿಕರ ಕೊರತೆ ನೆಪದಲ್ಲಿ ಪಟ್ಟಣದ ಮೂಲಭೂತ ಸೌಕರ್ಯವನ್ನು ಕಡೆಗಣಿಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
  ಇಲ್ಲಿನ ಬೀದಿ ದೀಪಗಳು ಸಂಪೂರ್ಣವಾಗಿ ಕೆಟ್ಟು ಹೋಗಿದ್ದು ಜನತೆ ಕತ್ತಲಲ್ಲಿ ಕಾಲ ಕಳೆಯುವಂಥ ಸ್ಥಿತಿ ಉಂಟಾಗಿದೆ. ಇನ್ನು ಹಳೆಪೇಟೆಯ ಆದಿಲ್‌ಪುರ ಬಡಾವಣೆಯಂತೂ ಪುರಸಭೆಯ ಕಣ್ಣಿಗೆ ಕಾಣದಂತಾಗಿದೆ. ಈ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳು ಶೀಘ್ರ ಈ ಕುರಿತು ಗಮನ ಹರಿಸಿ ವಾರ್ಡ್‌ಗಳನ್ನು ಶುದ್ಧ ಮತ್ತು ಸ್ವಚ್ಛವಾಗಿಡುವಂತೆ ತಿಮ್ಮಾಪುರಿ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.