ಮತಗಟ್ಟೆಗಳ ಬದಲಾವಣೆಗೆ ಪುರಸಭೆ ಸದಸ್ಯೆ ಒತ್ತಾಯ
ಶಹಾಬಾದ್: ಪಟ್ಟಣದ ವಿವಿಧೆಡೆ ಇರುವ ಮತಗಟ್ಟೆ ಸಂಖ್ಯೆ 136, 137, 128, 129 ಇವುಗಳನ್ನು ಜನರ ಅನುಕೂಲಕ್ಕೆ ತಕ್ಕಂತೆ ಬದಲಾವಣೆ ಮಾಡಬೇಕೆಂದು ಪುರಸಭೆ ಕಾಂಗ್ರೆಸ್ ಸದಸ್ಯ ಶ್ವೇತಾ ಪ್ರೀತಮ್ ಜೈನ್ ಹಾಗೂ ಮರೆಮ್ಮ ಸೈದಾಪುರ ಮನವಿ ಮಾಡಿದ್ದಾರೆ.
ಈ ಕುರಿತು ಜಿಲ್ಲಾ ಚುನಾವಣಾಧಿಕಾರಿಗೆ ಮನವಿ ಸಲ್ಲಿಸಿ, ಬೇಡಿಕೆಗೆ ಸ್ಪಂದಿಸುವಂತೆ ಕೋರಿದ್ದಾರೆ. ಗಾಂಧಿ ವೃತ್ತದ ಸರ್ಕಾರಿ ಹಿರಿಯ ಕನ್ಯಾ ಪ್ರಾಥಮಿಕ ಶಾಲೆಯ 136, 137 ಸಂಖ್ಯೆಯ ಮತಗಟ್ಟೆಗೆ ಪಟ್ಟಣ ಹೊರ ವಲಯದ ವಿಜಯನಗರ ಹಾಗೂ ಹನುಮಾನ್ ನಗರದ ಮತದಾರರು ಬರುವಂತಾದರೆ, ವಿ.ಪಿ. ನಾಯಕ ಶಾಲೆಯಲ್ಲಿರುವ 128, 129 ಸಂಖ್ಯೆಯ ದೂರದ ಮತಗಟ್ಟೆಗಳಿಗೆ ಮಲ್ಲಿಕಾರ್ಜುನ ಬಡಾವಣೆ, ಇಂದಿರಾ ಕಾಲೋನಿ, ಶಿವಾಜಿ ಚೌಕ್ ಹಾಗೂ ಗಾಂಧಿ ಚೌಕ್ ನಿವಾಸಿಗಳು ಹೋಗುವ ದುಸ್ಥಿತಿ ಪ್ರತಿ ಚುನಾವಣೆಗೂ ಎದುರಾಗುತ್ತಿದ್ದು, ಜನರ ಗೋಳಾಟಕ್ಕೆ ಕೊನೆ ಇಲ್ಲದಂತಾಗಿದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ. ಗಾಂಧಿ ವೃತ್ತದ ಕನ್ಯಾ ಶಾಲೆಯಲ್ಲಿ ಸ್ಥಾಪಿಸಿರುವ 136 ಹಾಗೂ 137 ಮತಗಟ್ಟೆಗಳನ್ನು ವಿಜಯನಗರ ಸರ್ಕಾರಿ ಶಾಲೆಗೆ ಸ್ಥಳಾಂತರಿಸಬೇಕು. ಅಲ್ಲದೆ ವಿ.ಪಿ. ನಾಯಕ ಶಾಲೆಯ 128, 129 ಸಂಖ್ಯೆಯ ಮತಗಟ್ಟೆಗಳನ್ನು ಗಾಂಧಿ ವೃತ್ತದ ಕನ್ಯಾ ಶಾಲೆಗೆ ಸ್ಥಳಾಂತರಗೊಂಡರೆ ಹಲವು ಬಡಾವಣೆಗಳ ಮತದಾರರಿಗೆ ಅನುಕೂಲವಾಗುತ್ತದೆ. ವೃದ್ಧರು, ಅಂಗವಿಕಲರು ತೊಂದರೆ ಎದುರಿಸದೆ ಮತದಾನದಲ್ಲಿ ಪಾಲ್ಗೊಳ್ಳಲು ಇದು ಸಹಕಾರಿಯಾಗುತ್ತದೆ.
ಮತಗಟ್ಟೆಗಳ ಬದಲಾವಣೆಗೆ ಪದೇ ಪದೇ ಮನವಿ ಮಾಡಿಕೊಳ್ಳಲಾಗುತ್ತಿದ್ದರೂ ಚುನಾವಣಾಧಿಕಾರಿಗಳು ಕಿಂಚಿತ್ತೂ ಗಮನ ಹರಿಸುತ್ತಿಲ್ಲ. 2014ರ ಲೋಕಸಭೆ ಚುನಾವಣೆಯಲ್ಲಾದರೂ ಮತಗಟ್ಟೆಗಳ ಬದಲಾವಣೆ ಮಾಡಿ ಮತದಾರರ ಬೇಡಿಕೆಗೆ ಸ್ಪಂದಿಸಬೇಕೆಂದು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

