ಬಲಶೆಟ್ಟಿಹಾಳ: ಬ್ಯಾಂಕ್ನಲ್ಲಿ ಕಳವಿಗೆ ಯತ್ನ
ಹುಣಸಗಿ:ಸಮೀಪದ ಬಲಶೆಟ್ಟಿಹಾಳ ಗ್ರಾಮದ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನಲ್ಲಿ ಸೋಮವಾರ ಮಧ್ಯರಾತ್ರಿ ಕಳವಿಗೆ ಪ್ರಯತ್ನಿಸಿದ ಘಟನೆ ವರದಿಯಾಗಿದೆ.
ಬ್ಯಾಂಕಿನ ಶಟರ್ ಮುರಿದು ಒಳ ನುಗ್ಗಿದ ಕಳ್ಳರು ಕಂಪ್ಯೂಟರ್, ಕಾಗದ ಪತ್ರಗಳಿರುವ ಅಲ್ಮೇರಾ ಮುರಿದಿದ್ದಾರೆ. ಹಣವಿರುವ ಸೇಫ್ ಒಡೆಯುವ ವಿಫಲ ಪ್ರಯತ್ನ ಮಾಡಿದ್ದಾರೆ ಎಂದು ಬ್ಯಾಂಕಿನ ವ್ಯವಸ್ಥಾಪಕ ಗಂಗನಗೌಡರ್ ಹುಣಸಗಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸ್ಥಳಕ್ಕೆ ಹುಣಸಗಿ ಸಿಪಿಐ ವಿಜಯಕುಮಾರ್ ಮುರಗುಂಡಿ ಹಾಗೂ ಎಎಸ್ಐ ನರಸಿಂಹರಾವ್ ಕುಲಕರ್ಣಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದರು. ಈ ಬ್ಯಾಂಕ್ ಗ್ರಾಮದ ಹೊರಗಿರುವುದು ಹಾಗೂ ಸಿಸಿ ಕ್ಯಾಮರಾ, ಭದ್ರತಾ ಸಿಬ್ಬಂದಿ ಇಲ್ಲದಿರುವುದು ಕಳವಿನ ಪ್ರಯತ್ನಕ್ಕೆ ಪ್ರಮುಖ ಕಾರಣವಾಗಿದೆ. ಒಂದೂವರೆ ವರ್ಷದ ಹಿಂದೆಯೂ ಇದೇ ಬ್ಯಾಂಕಿನಲ್ಲಿ ಕಳವಿನ ಪ್ರಯತ್ನ ನಡೆದಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಆಯುಧಗಳ ಠೇವಣಿ ಮಾಡಲು ಡಿಸಿ ಆದೇಶ
ಗುಲ್ಬರ್ಗ: ಲೋಕಸಭೆ ಚುನಾವಣೆಯು ಶಾಂತಿಯುತವಾಗಿ ಜರುಗಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಸಾರ್ವಜನಿಕರ ಹಿತಾಸಕ್ತಿಗಳ ಅನುಗುಣವಾಗಿ ಗುಲ್ಬರ್ಗ ಜಿಲ್ಲೆಯಾದ್ಯಂತ ಅನುಮತಿ ಪಡೆದ ಲೈಸನ್ಸ್ದಾರರು (ರಾಷ್ಟ್ರೀಕೃತ ಬ್ಯಾಂಕುಗಳನ್ನು, ಹಾಗೂ ಭಾರತ ರಿಸರ್ವ್ ಬ್ಯಾಂಕ್ ಅವರಿಂದ ಅನುಮೋದಿತ ಶೆಡ್ಯೂಲ್ ಬ್ಯಾಂಕುಗಳ ಸೆಕ್ಯೂರಿಟಿ ಗಾರ್ಡ್ಗಳ ಆಯುಧಗಳನ್ನು ಹೊರತುಪಡಿಸಿ) ತಕ್ಷಣದಿಂದ ಜಾರಿ ಬರುವಂತೆ ಸದರಿ ಆಯುಧಗಳನ್ನು ಸಂಬಂಧಪಟ್ಟ ಠಾಣೆಗಳಲ್ಲಿ ಠೇವಣಿ ಮಾಡಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ಎನ್.ವಿ. ಪ್ರಸಾದ ಆದೇಶಿಸಿದ್ದಾರೆ. ಮೇ 31ರವರೆಗೆ ಯಾವುದೇ ಆಯುಧ ಲೈಸೆನ್ಸ್ದಾರರು ತಮ್ಮ ಆಯುಧವನ್ನು ಸಾರ್ವಜನಿಕವಾಗಿ ಹೊತ್ತೊಯ್ಯುವಂತಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

