ಅಂಧರ ಬಾಳಿಗೆ ಬೆಳಕಾದ ಪುಟ್ಟರಾಜ ಗವಾಯಿ: ಶಾಸಕ
ಜೇವರ್ಗಿ: ಸಂಗೀತ ಕ್ಷೇತ್ರದ ದಿಗ್ಗಜ ಡಾ. ಪಂಡಿತ ಪುಟ್ಟರಾಜ ಗವಾಯಿಗಳು ನಾಡಿನ ಸಹಸ್ರಾರು ಜನ ಅಂಧರಿಗೆ ಸಂಗೀತ ಕಲೆಯನ್ನು ಕಲಿಸುವುದರ ಮೂಲಕ ಅಂಧರ ಬಾಳಿಗೆ ಬೆಳಕು ನೀಡಿದ್ದಾರೆ ಎಂದು ಶಾಸಕ ಡಾ.ಅಜಯಸಿಂಗ್ ಹೇಳಿದರು.
ಪಟ್ಟಣದ ಸರ್ಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇತ್ತೀಚೆಗೆ ಪಂಡಿತ ಪಂಚಾಕ್ಷರಿ ಗವಾಯಿ ಅಂಧರ ಸಂಗೀತ ಕಲಾ ಬಳಗ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಪಂಡಿತ ಪುಟ್ಟರಾಜ ಗವಾಯಿಗಳ ಜನ್ಮ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಂಡಿತ ಪುಟ್ಟರಾಜ ಗವಾಯಿ ನಡೆದಾಡುವ ದೇವರು. ಅವರು 22 ಪುರಾಣಗಳು, 28 ನಾಟಕಗಳನ್ನು ರಚಿಸಿದ್ದಾರೆ. ಪುಟ್ಟರಾಜ ಗವಾಯಿ ಕನ್ನಡ, ಹಿಂದಿ ಮತ್ತು ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಹೊಂದಿದ್ದರು. ಅವರು ತಮ್ಮ ಜೀವನದುದ್ದಕ್ಕೂ ನಾಡಿನಲ್ಲಿರುವ ಸಹಸ್ರಾರು ಜನರಿಗೆ ಸಂಗೀತ ಅಭ್ಯಾಸ ಮಾಡಿಸಿ ಅವರ ಬದುಕಿಗೆ ಬೆಳಕು ನೀಡಿದ್ದಾರೆಂದು ಅಭಿಪ್ರಾಯಪಟ್ಟರು.
ಸೊನ್ನ ದಾಸೋಹ ಮಠದ ಡಾ. ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ರಾಜಶೇಖರ ಸೀರಿ, ಶಾಂತಗೌಡ ದುಮ್ಮದ್ರಿ, ಸಿದ್ರಾಮಪ್ಪಗೌಡ ಹರನೂರ, ಭೀಮರಾವ ಗುಜಗೊಂಡ, ಶರಣಬಸವ ಕಲ್ಲಾ, ಕಾಶಿರಾಯಗೌಡ ಯಲಗೋಡ, ನಿಂಗಣ್ಣ ಶರಣರು, ಸಿದ್ರಾಮಪ್ಪ ಪಾಟೀಲ್, ಸುಮಂಗಲಾ ಪಾಟೀಲ್ ಆಗಮಿಸಿದ್ದರು. ಅಣಿಗಿರಿ ಸಿದ್ಧಬಸವೇಶ್ವರ ಸುಜ್ಞಾನ ಮಂದಿರದ ಧಮದರ್ಶಿ ಶರಣಗೌಡ ಮಾಲಿಪಾಟೀಲ್ ರಾಸಣಗಿ ಅಧ್ಯಕ್ಷತೆ ವಹಿಸಿದ್ದರು. ಸಂಗೀತ ಕಲಾ ಬಳಗದ ಸದಸ್ಯರು, ಪಟ್ಟಣದ ನಾಗರಿಕರು, ಮಹಿಳೆಯರು ಪಾಲ್ಗೊಂಡಿದ್ದರು. ನೀಲಮ್ಮ ಪಾಟೀಲ್ ಮತ್ತು ಸಮತಾ ಪಾಟೀಲ್ ಪ್ರಾರ್ಥಿಸಿದರು. ದಾನಪ್ಪಗೌಡ ಹಳಿಮನಿ ಸ್ವಾಗತಿಸಿದರು. ಬಸವರಾಜ ಶಾಸ್ತ್ರಿ ಕುಕನೂರ ನಿರೂಪಿಸಿದರು. ಮಲ್ಲಿಕಾರ್ಜುನ ಇಬ್ರಾಹಿಂಪುರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

