ನೀತಿ ಸಂಹಿತೆ ಕಟ್ಟುನಿಟ್ಟು ಜಾರಿಗೆ ಆದೇಶ
ಶಹಾಪುರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಹಾಪುರ ವಿಧಾನಸಭಾ ಮತಕ್ಷೇತ್ರದ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ತಹಸೀಲ್ದಾರ್ ಕಚೇರಿಯಲ್ಲಿ ಗುರುವಾರ ನಡೆಯಿತು.
ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮತ್ತು ವಿಧಾನಸಭಾ ಮತ ಕ್ಷೇತ್ರದ ಚುನಾವಣಾಧಿಕಾರಿ ರಾಮನಗೌಡ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾಹೀರಾತು ಪ್ರಕಟಣೆಗಳನ್ನು ಪ್ರಕಟಿಸುವ ಮುನ್ನ ಚುನಾವಣಾ ಅಧಿಕಾರಿಗಳ ಪರವಾನಗಿ ಅಗತ್ಯವಾಗಿದ್ದು ಖರ್ಚು ವೆಚ್ಚಗಳ ಮೇಲೆ ತೀವ್ರ ನಿಗಾ ವಹಿಸಲಾಗುತ್ತದೆ ಎಂದರು.
ಯಾವುದೇ ರಾಜಕೀಯ ಪಕ್ಷಗಳು ದೇಣಿಗೆ ಮತ್ತು ಸಹಾಯಧನ ವಿತರಣೆ ಮಾಡಿದ್ದಲ್ಲಿ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಲಾಗುವುದು. ಪ್ರಚಾರದ ಸಮಯದಲ್ಲಿ ಧಾರ್ಮಿಕ ಸ್ಥಳಗಳನ್ನು ಬಳಸಕೂಡದು. ಮಾ.14ರಂದು ಜಿಲ್ಲಾ ಕೇಂದ್ರ ಗೋಕುಲ ಭವನದಲ್ಲಿ ಚುನಾವಣಾ ಅಧಿಕಾರಿಗಳ ಸಭೆ ಕರೆಯಲಾಗಿದ್ದು ಸಮಸ್ತ ಅಧಿಕಾರಿಗಳು ಹಾಜರಾಗಲು ತಿಳಿಸಿದರು.
ಉಪ ಚುನಾವಣಾಧಿಕಾರಿ ಡಿ.ವೈ. ಪಾಟೀಲ್ ಮಾತನಾಡಿ ಗೋಗಿ, ಶಹಾಪುರ ಹಾಗೂ ಕೆಂಭಾವಿಗಳಲ್ಲಿ ಸಂಚಾರಿ ದಳಗಳನ್ನು ನೇಮಕ ಮಾಡಲಾಗಿದ್ದು ತಳ್ಳಳ್ಳಿ ಮತ್ತು ಹದನೂರ ಮೂಡಬೂಳ ಕ್ರಾಸ್‌ಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದೆ. 17 ತಂಡಗಳನ್ನು ರಚನೆ ಮಾಡಿದ್ದು ಪ್ರತಿ ಚುನಾವಣಾ ಖರ್ಚು ಮತ್ತು ಇತರೆ ಚಟುವಟಿಕೆಗಳ ಮೇಲೆ ನಿಗಾ ವಹಿಸುವಂತೆ ಮತ್ತು ಚುನಾವಣಾ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಶಹಾಪುರ ಪಿಐ ಜಿ.ಎಸ್. ನ್ಯಾಮೇಗೌಡ, ಗೋಗಿ ಪಿಎಸ್‌ಐ ಸತೀಶ ಕಾಂಬ್ಳೆ, ಕೆಂಭಾವಿ ಪಿಎಸ್‌ಐ ಸುನಿಲ್ ಕಾಂಬಳೆ, ಜಿಪಂ ಸಿಇಒ ಕೆ.ಭೀಮರಾಯ, ಬಿಇಒ ರಾಯಪ್ಪರೆಡ್ಡಿ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

