ಗುಲ್ಬರ್ಗಾ

ವೆಚ್ಚ ಸಲ್ಲಿಸದ 11 ಅಭ್ಯರ್ಥಿಗಳ ಅನರ್ಹತೆ ಪ್ರಕಟ

Published On :

ಗುಲ್ಬರ್ಗ: ಭಾರತದ ಚುನಾವಣಾ ಆಯೋಗವು ಕರ್ನಾಟಕದಲ್ಲಿನ ಲೋಕಸಭಾ ಸಾರ್ವತ್ರಿಕ ಚುನಾವಣೆ- 2014ರ ಚುನಾವಣಾ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಿದೆ. ಆಯೋಗವು ಈ ಹಿಂದೆ 2008ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಚುನಾವಣಾ ವೆಚ್ಚ ಸಲ್ಲಿಸದೇ ಇರುವ ಗುಲ್ಬರ್ಗ ಜಿಲ್ಲೆಯ 11 ಅಭ್ಯರ್ಥಿಗಳನ್ನು ಪ್ರಜಾಪ್ರತಿನಿಧಿ ಕಾಯ್ದೆಯ 1951ರ ಕಲಂ- 10(ಎ) ರನ್ವಯ ಅನರ್ಹಗೊಳಿಸಿ ಪ್ರಕಟಿಸಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಎನ್.ವಿ. ಪ್ರಸಾದ್ ತಿಳಿಸಿದ್ದಾರೆ.
ಗುಲ್ಬರ್ಗ ದಕ್ಷಿಣ ಕ್ಷೇತ್ರದಲ್ಲಿ ಸ್ಪರ್ಧಿಸಿದ ಗುಲಾಮ ರಬ್ಬಾನಿ, ಅಂಬಾರಾಯ ಮುನಿ, ಜಗನ್ನಾಥ ಮನ್ನೂ ಚವ್ಹಾಣ, ಮೊಹಮ್ಮದ್ ಗಾಲೀಬ್ ಪಾಶಾ, ಶೇಖ್ ಮೆಹಬೂಬ್ ಭೋಗನಳ್ಳಿ. ಚಿತ್ತಾಪುರ (ಪರಿಶಿಷ್ಟ ಜಾತಿ) ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ ಸಂಜೀವಕುಮಾರ ಘತ್ತರಗಿ. ಗುಲ್ಬರ್ಗ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ ದಯಾನಂದ ಪಾಟೀಲ್, ಮೊಹಮ್ಮದ್ ಹುಸೇನ್ ಅವರು 7.7.2011ರಂದು ಅನರ್ಹಗೊಂಡಿದ್ದು, 7.7.2014ರಂದು ಅನರ್ಹತೆ ಮುಕ್ತಾಯಗೊಳ್ಳುತ್ತದೆ.
ಅದೇ ರೀತಿ ಗುಲ್ಬರ್ಗ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ ಅಶೋಕ್ ದೊಡ್ಡಮನಿ, ಎಸ್.ಎಂ. ಸುಭಾನ ಹುಸೇನಿ ಹಾಗೂ ಗುಲ್ಬರ್ಗ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ ಚಂದ್ರಕಾಂತ್ ಕಾಳಗಿ ಅವರು 8. 8. 2011 ಅನರ್ಹಗೊಂಡಿದ್ದು, 8.8.2014 ಅನರ್ಹತೆ ಅಂತ್ಯಗೊಳ್ಳುತ್ತದೆ.
ಹೆಸರು ಸೇರ್ಪಡೆಗೆ ಎರಡೇ ದಿನ ಬಾಕಿ: ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿರುವವರು ಹಾಗೂ ದಿನಾಂಕ 1.1. 2013ಕ್ಕೆ 18 ವರ್ಷ ಪೂರ್ಣಗೊಂಡವರು ಹೆಸರು ಸೇರ್ಪಡೆ ಮಾಡಲು ಕೇವಲ ಎರಡೇ ದಿನ ಬಾಕಿಯಿದೆ. ಇದಕ್ಕಾಗಿ ಮಾ.16ರೊಳಗೆ ಅರ್ಜಿ ನಮೂನೆ- 6ರಲ್ಲಿ ವಿವರಗಳನ್ನು ಭರ್ತಿ ಮಾಡಿ ಬಣ್ಣದ ಭಾವಚಿತ್ರ, ವಯಸ್ಸಿನ ಮತ್ತು ವಾಸಸ್ಥಳದ ದಾಖಲೆಗಳೊಂದಿಗೆ ಸಲ್ಲಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಎನ್.ವಿ.ಪ್ರಸಾದ್ ತಿಳಿಸಿದ್ದಾರೆ. ಜಿಲ್ಲೆಯ ಎಲ್ಲ ಸಾರ್ವಜನಿಕರು ಹಾಗೂ ಮತದಾರರು ತಮ್ಮ ಹೆಸರುಗಳ ಮತದಾರರ ಪಟ್ಟಿಯಲ್ಲಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಸಂಬಂಧಪಟ್ಟ ತಾಲೂಕುಗಳ ತಹಸೀಲ್ದಾರರ ಕಚೇರಿಗಳಲ್ಲಿ ಹಾಗೂ ಗುಲ್ಬರ್ಗ ನಗರದ ಮತದಾರರು ಗುಲ್ಬರ್ಗ ಮಹಾನಗರ ಪಾಲಿಕೆಯ ಚುನಾವಣಾ ಶಾಖೆಯಲ್ಲಿ ಪರಿಶೀಲಿಸಿ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರ್ಪಡೆ ಮಾಡಬಹುದು.
ಈ ಪಟ್ಟಿಯಲ್ಲಿ ಹೆಸರುಗಳನ್ನು ಸೇರ್ಪಡೆ ಮಾಡಲು ಆನ್‌ಲೈನ್ ಮೂಲಕವೂ ಅವಕಾಶವಿರುತ್ತದೆ. ಹೆಚ್ಚಿನ ವಿವರಗಳಿಗಾಗಿ ಢಿಢಿಢಿ.್ಛಜ್ಟ್ಞಛ್ಠಟಿಛಡಿಛ್ಞಛ.್ಞಛ್ಠ.್ಝಟಿ ದಿಂದ ಪಡೆಯಬಹುದು. ಮತದಾರರ ಪಟ್ಟಿ ಪರಿಶೀಲಿಸಿ ತಿದ್ದುಪಡಿಗಳೇನಾದರೂ ಇದ್ದಲ್ಲಿ ನಮೂನೆ 8ರಲ್ಲಿ, ವರ್ಗಾವಣೆಗಾಗಿ ನಮೂನೆ 8ಎ ರಲ್ಲಿ ಹಾಗೂ ಹಾಲಿ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲು ನಮೂನೆ 7ರಲ್ಲಿ ಅರ್ಜಿ ಸಲ್ಲಿಸಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.