ಗುಲ್ಬರ್ಗಾ

ವಿದ್ಯಾರ್ಥಿಗಳಿಗೆ ಹೊಸೂರ ಶಾಲೆಯಿಂದ ಪುರಸ್ಕಾರ

Published On :

ಅಫಜಲ್ಪುರ: ತಾಲೂಕಿನ ಹೊಸೂರ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ 2013-2014ನೇ ಸಾಲಿನ ಶಾಲಾ ಆದರ್ಶ ವಿದ್ಯಾರ್ಥಿ ಮತ್ತು ವಿದ್ಯಾರ್ಥಿ ಪುರಸ್ಕಾರವು ಕುಮಾರಿ ಪ್ರೇಮಿಳಾ ಭೀ. ಬರಗಾಲೆ ವಿದ್ಯಾರ್ಥಿನಿಗೆ ಶಾಲಾ ಮುಖ್ಯಗುರು ಶಾಂತಪ್ಪ ಝಲ್ಲಿ ಹಾಗೂ ಶಿಕ್ಷಕ ವೃಂದಿಂದ ನೀಡಿ ಸತ್ಕರಿಸಲಾಯಿತು. ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಮಣ್ಣೂರ ಸರ್ಕಾರಿ ಪ್ರೌಢಶಾಲೆ ಮುಖ್ಯಗುರು ಎ.ಎಸ್. ಬಿರಾದಾರರು ಮಾತನಾಡಿ, ನಿಮ್ಮ ಭವಿಷ್ಯ, ನಿಮ್ಮ ಕೈಯಲ್ಲಿದೆ. ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಿ ಎಂದು ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವೃಂದವು ಉಪಸ್ಥಿತರಿದ್ದರು. ಶಾಲಾಪಕ್ಷಿ ನೋಟವನ್ನು ಸುರೇಶ ಕೊರಚಗಾಂವ ಹೇಳಿದರು. ಶ್ರೀಧರಪ್ಪ ನ್ಯಾಮಗೌಡರು ಸ್ವಾಗತಿಸಿದರು. ಹಣಮಂತ ನಾಟೀಕಾರ ನಿರೂಪಿಸಿ, ಗುರುಬಸಯ್ಯ ಹಿರೇಮಠ ವಂದಿಸಿದರು.

ಶಿವಲಿಂಗಪ್ಪ ಇಂಗಳಗಿ
ಪುಸ್ತಕಗಳು ಗ್ರಂಥಾಲಯಕ್ಕೆ
ಗುಲ್ಬರ್ಗ: ಶಾಂತಪ್ಪ ಪಾಟೀಲ ನರಿಬೋಳ ಪ್ರತಿಷ್ಠಾನದಡಿ ನರಿಬೋಳ ಹಾಗೂ ನಂದೂರಿನಲ್ಲಿ ಗ್ರಂಥಾಲಯ ಸ್ಥಾಪಿಸಲು ಯೋಜನೆ ಹಾಕಿದ್ದು ಸೇಡಂ ತಾಲೂಕಿನ ಕೊಡ್ಲಾ ಗ್ರಾಮದ ಶಿವಲಿಂಗಪ್ಪ ಇಂಗಳಗಿಯವರು ಮನೆಯಲ್ಲಿದ್ದ ಮುಖ್ಯವಾದ ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡಿರುವುದು ಓದುಗರ ಪ್ರೋತ್ಸಾಕ್ಕೆ ದಾರಿದೀಪವಾಗಿದೆ ಎಂದು ಪ್ರತಿಷ್ಠಾನ ಅಧ್ಯಕ್ಷ ಎಂ.ಎಸ್. ಪಾಟೀಲ್, ಮಹಾದೇವ ಬಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಾ. ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಪುರಸಭೆ ನಿರ್ಲಕ್ಷ್ಯ
ಆಳಂದ: ಪಟ್ಟಣದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ಸ್ಥಳೀಯ ಪುರಸಭೆ ಆಡಳಿತ ಮಂಡಳಿಯೂ ಸಂಪೂರ್ಣ ನಿರ್ಲಕ್ಷಿಸಿದೆ ಎಂದು ಆರೋಪಿಸಿರುವ ಕರ್ನಾಟಕ ದಲಿತ ಸೇನೆಯೂ ಬರುವ ಲೋಕಸಭಾ ಚುನಾವಣೆ ಬಹಿಷ್ಕರಿಸುವ ಕುರಿತು ಶೀಘ್ರವೇ ಸಭೆ ಕರೆಯಲಾಗುವುದು ಎಂದು ಹೇಳಿಕೆ ನೀಡಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸೇನೆಯ ರಾಜ್ಯ ಅಧ್ಯಕ್ಷ ಬಾಬುರಾವ್ ಅರುಣೋದಯ, ಪಟ್ಟಣದಲ್ಲಿ ಮೂರ್ತಿ ಸ್ಥಾಪನೆ ಕೈಗೊಳ್ಳುವುದಕ್ಕಾಗಿ ಹಿಂದಿನ ಶಾಸಕರು ಮತ್ತು ಪುರಸಭೆ ಆಡಳಿತ ಮಂಡಳಿ ಅವಧಿಯಲ್ಲಿ ಪುತ್ಥಳಿಯನ್ನು ಶೇ.22 ಅನುದಾನದಿಂದ ಖರೀದಿಸಿ ಪುರಸಭೆ ಆವರಣದಲ್ಲಿ ಪುತ್ಥಳಿ ತಂದಿರಿಸಲಾಗಿದೆ. ಆದರೆ, ಇದುವರೆಗೂ ಪಟ್ಟಣದ ಸೂಕ್ತ ಸ್ಥಳದಲ್ಲಿ ಪುತ್ಥಳಿ ಸ್ಥಾಪನೆ ಕೈಗೊಳ್ಳದೆ ದಿನದೂಡಿ ಸಂವಿಧಾನ ಶಿಲ್ಪಿಗೆ ಮತ್ತು ಅಭಿಮಾನಿಗಳಿಗೆ ಅವಮಾನಿಸಿದ್ದಾರೆ ಎಂದು ಕಿಡಿ ಕಾರಿದರು. ಇದರಿಂದ ಚುನಾವಣೆ ಬಹಿಷ್ಕಾರ ಕೈಗೊಳ್ಳಲು ಸಂಘಟನೆ ಈ ನಿರ್ಧಾರಕ್ಕೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವ ಕುರಿತು ಶೀಘ್ರವೇ ಪಟ್ಟಣದಲ್ಲಿ ಸಭೆ ಕರೆದು ತೀರ್ಮಾನಿಸಲಾಗುವುದು ಎಂದು ಸ್ಪಷ್ಟಪಡಿಸಿರುವ ಅವರು, 10ಲಕ್ಷ ವೆಚ್ಚದಲ್ಲಿ ಪ್ರತಿಮೆ ಖರೀದಿಸಿ ಪುರಸಭೆ ಆವರಣದ ಪತ್ರಾಶೆಡ್‌ನಲ್ಲಿ ಮುಚ್ಚಿಡುವ ಮೂಲಕ ಆಡಳಿತವು ಸ್ವಾಭಿಮಾನಕ್ಕೆ ಧಕ್ಕೆಯುಂಟು ಮಾಡಿದೆ. ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಕೂಡಲೇ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ತೊಗರಿ ಖರೀದಿ; ಹಣ ಬಿಡುಗಡೆಗೆ ಮನವಿ
ಗುಲ್ಬರ್ಗ: ಜೈ ಕರ್ನಾಟಕ ರಕ್ಷಣಾ ವೇದಿಕೆ ಸರ್ಕಾರ ಕೂಡಲೇ ಕೃಷಿ ಉತ್ಪನ್ನ ಮಾರುಕಟ್ಟೆಗೆ ತೊಗರಿ ಖರೀದಿಗೆ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ವೇದಿಕೆ ಮುಖ್ಯಮಂತ್ರಿಗೆ ಮನವಿ ಮಾಡಿತು. ಸರ್ಕಾರ ತೊಗರಿ ಬೆಳೆಗೆ ಹಣ ಬಿಡುಗಡೆ ಮಾಡದೆ ಇರುವ ಪಕ್ಷದಲ್ಲಿ ಈಗಾಗಲೇ ರೈತ ಮಾರುಕಟ್ಟೆಗೆ ಬೆಳೆ ತಲುಪಿಸಿದರೂ ಅದನ್ನು ಖರೀದಿಸಲು ಸರ್ಕಾರ ಸಿದ್ದವಿಲದಲ್ಲದಿರುವುದು ರೈತನು ಕಡಿಮೆ ಬೆಲೆಯಲ್ಲಿ ತೊಗರಿ ಮಾರಿಕೊಳ್ಳುತ್ತಿರುವುದರಿಂದ ರೈತರಿಗೆ ನಷ್ಟವಾಗುತ್ತಿರುವುದು ದುರದೃಷ್ಟಕರ. ಒಂದೆಡೆ ಆಕಾಲಿಕ ಆಲಿಕಲ್ಲಿನಿಂದ ಹಾಗೂ ಬೆಳೆಗೆಂದೆ ಸಾಲ ಮಾಡಿದ ಹಿನ್ನಲೆಯಲ್ಲಿ ಒದ್ದಾಡುತ್ತಿರುವಾಗ ಸರ್ಕಾರ ಕೂಡಲೇ ಹಣ ಬಿಡುಗಡೆ ಮಾಡಬೇಕು. ಇಲ್ಲವಾದರೆ ವೇದಿಕೆ ಹಾಗೂ ರೈತರು ಕೂಡಿ ಉಗ್ರ ಹೋರಾಟ ಮಾಡುವುದಾಗಿ ರಾಜ್ಯ ಉಪಾಧ್ಯಕ್ಷ ಮಂಜುನಾಥ ಬಿ. ಹಾಗರಗಿ ಎಚ್ಚರಿಕೆ ನೀಡಿದ್ದಾರೆ. ಜಗನ್ನಾಥ ಪಟ್ಟಣಶೆಟ್ಟಿ, ಚನ್ನುಮರಬ, ಶರಣು ಸರಡಗಿ, ಚಂದ್ರು ಪಾಟೀಲ, ಶಿವಕುಮಾರ ಹಾಗರಗಾ, ಶ್ರೀಕಾಂತ ಆಲೂರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.