ಗ್ರಾಮೀಣ ಅಂಚೆ ಜೀವ ವಿಮೆಯ ಲಾಭ ಪಡೆಯಿರಿ
ಯಾದಗಿರಿ: ಗ್ರಾಮೀಣ ಜನರ ಉಜ್ವಲ ಭವಿಷ್ಯಕ್ಕಾಗಿ ಅಂಚೆ ಇಲಾಖೆಯ ಗ್ರಾಮೀಣ ಅಂಚೆ ಜೀವವಿಮೆ ಮಾಡಿಸಿ ಹೆಚ್ಚಿನ ಲಾಭ ಪಡೆಯಬೇಕೆಂದು ಯಾದಗಿರಿ ಅಂಚೆ ಉಪವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಕೆ. ಮಹಾದೇವಪ್ಪ ಹೇಳಿದರು.
ತಾಲೂಕಿನ ಸೈದಾಪುರ ಮತ್ತು ಮಾದವಾರ ಉಪ ಅಂಚೆಕಚೇರಿಗಳ ವ್ಯಾಪ್ತಿಯೊಳಗೆ ಬರುವ ನಂದೇಪಲ್ಲಿ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮೀಣ ಅಂಚೆ ಜೀವವಿಮಾ ಮೇಳದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಜನರಿಗಾಗಿ ಗ್ರಾಮೀಣ ಅಂಚೆ ಜೀವವಿಮಾ ಪಾಲಿಸಿಯನ್ನು ಜಾರಿಗೆ ತರಲಾಗಿದೆ. ಹೆಚ್ಚು ಬೋನಸ್ ಹಾಗೂ ಕಡಿಮೆ ಪ್ರೀಮಿಯಂನಿಂದ ಬಡಜನರಿಗೆ ಅನುಕೂಲವಾಗಲಿದೆ. ಜೀವವಿಮೆ ಮಾಡಿಸುವುದರಿಂದ ಉಳಿತಾಯದ ಜೊತೆಗೆ ಸುರಕ್ಷತೆಗೆ ಅನುಕೂಲವಾಗಲಿದೆ. ಅದ್ದರಿಂದ ಗ್ರಾಮೀಣ ಪ್ರದೇಶದ ಜನರು ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ಮೇಳದಲ್ಲಿ ಎಂ. ರಾಘವೇಂದ್ರರೆಡ್ಡಿ, ಎಸ್. ಬಿ. ಕುದರಿ, ಜಿ. ಕೃಷ್ಣಾ, ರಾಚಯ್ಯ ಸ್ಥಾವರಮಠ, ಬಾಪುಗೌಡ, ವಿಶ್ವನಾಥ, ಬಸವರಾಜ ಕಾಳೆಬೆಳಗುಂದಿ, ಸುಭಾಷ ಬದ್ದೆಪಲ್ಲಿ ಸೇರಿದಂತೆ ಗ್ರಾಮೀಣ ಅಂಚೆ ನೌಕರರು, ಗ್ರಾಮಸ್ಥರು ಭಾಗವಹಿಸಿದರು. ಕರಣಗಿ ಶಾಖಾ ಅಂಚೆಪಾಲಕರಾದ ಉಮಾಪತಿ ಮತ್ತು ಇಡ್ಲೂರ್ ಶಾಖಾ ಅಂಚೆಪಾಲಕ ರಾಘವೇಂದ್ರರಾವ ಕುಲಕರ್ಣಿ ಇವರ ಸೇವಾ ನಿವೃತ್ತಿ ನಿಮಿತ್ತ ಇಲಾಖೆ ಪರವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

