ಗುಲ್ಬರ್ಗಾ

ಪ್ರತಿಭಾ ಪರೀಕ್ಷೆ ರಾಜ್ಯ, ರಾಷ್ಟ್ರಕ್ಕೆ ಪ್ರಥಮ

Published On :

ಶಹಾಬಾದ್: ಸಮೀಪದ ಸಿದ್ಧಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಪ್ರತಿಭಾ ವಿಜ್ಞಾನ ದಾವಣಗೆರೆ ವತಿಯಿಂದ ಗಣಿತ ಮತ್ತು ಇಂಗ್ಲಿಷ್ ವಿಷಯದಲ್ಲಿ ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾಮಟ್ಟಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪದಕ ಪ್ರಶಸ್ತಿ ಪತ್ರಗಳನ್ನು ಇತ್ತೀಚೆಗೆ ನೀಡಲಾಯಿತು. ಗಣಿತ ವಿಷಯದಲ್ಲಿ ಕೃಷ್ಣ ತಂದೆ ನಿಂಗಣ್ಣ ರಾಷ್ಟ್ರಮಟ್ಟಕ್ಕೆ ಪ್ರಥಮ ಸ್ಥಾನ, ಬೀರಲಿಂಗ ತಂದೆ ಮಹಾದೇವಪ್ಪ ರಾಜ್ಯಮಟ್ಟಕ್ಕೆ ಪ್ರಥಮ ಸ್ಥಾನ, ಲಕ್ಷ್ಮೀ ತಂದೆ ಬಸಲಿಂಗಪ್ಪ ಜಿಲ್ಲಾಮಟ್ಟಕ್ಕೆ ಪ್ರಥಮ ಸ್ಥಾನ ಆನಂತ ತಿಪ್ಪಣ್ಣ ರಾಜ್ಯ ಮಟ್ಟಕ್ಕೆ 5ನೇ ರ್ಯಾಂಕ್ ಪಡೆದಿದ್ದಾರೆ. ಇಂಗ್ಲಿಷ್‌ನಲ್ಲಿ ಕಾಶಿನಾಥ ತಂದೆ ದುರ್ಗಪ್ಪ ರಾಷ್ಟ್ರಮಟ್ಟಕ್ಕೆ 5ನೇ ರ್ಯಾಂಕ್, ಚೇತನ ತಂದೆ ಕಾಶಿನಾಥ ರಾಜ್ಯಮಟ್ಟಕ್ಕೆ ಪ್ರಥಮ ಸ್ಥಾನ, ಸಿದ್ರಾಮ ತಂದೆ ಲಕ್ಷ್ಮಣ ಜಿಲ್ಲಾಮಟ್ಟಕ್ಕೆ ಪ್ರಥಮ ಸ್ಥಾನ ಮತ್ತೆ ಹಲವಾರು ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ.ವಿದ್ಯಾರ್ಥಿಗಳಿಗೆ ಪದಕ ಹಾಗೂ ಪ್ರಮಾಣ ಪತ್ರ ನೀಡಲಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.