ಗುಲ್ಬರ್ಗಾ

ನೀತಿ ಸಂಹಿತೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿ

Published On :

ಆಳಂದ: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಯಾವುದೇ ರೀತಿಯಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಫ್ಲ್ಲೈಯಿಂಗ್ ಸ್ಕ್ವಾಡ್, ಪೊಲೀಸ್, ಅಬಕಾರಿ ಇಲಾಖೆಯ ಅಧಿಕಾರಿಗಳು ಎಚ್ಚರ ವಹಿಸಬೇಕು. ಪಾರದರ್ಶಕ ಮತ್ತು ಮುಕ್ತ ಚುನಾವಣೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕೆಂದು ಸಹಾಯಕ ಚುನಾವಣಾಧಿಕಾರಿ ಎಂ.ಎಚ್. ಚಿದಾನಂದ ಹೇಳಿದ್ದಾರೆ.
ಪಟ್ಟಣದ ತಹಸೀಲ ಕಚೇರಿಯಲ್ಲಿ ಗುರುವಾರ ಲೋಕಸಭಾ ಚುನಾವಣೆ ಅಧಿಕಾರಿಗಳ ಸಿದ್ಧತಾ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಜಿಲ್ಲಾ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧಿಕಾರಿ ಮಹಬೂಬ ಪಾಷಾ, ತೋಟಗಾರಿಕೆ ಅಧಿಕಾರಿ ರಾಹುಲ ಬಾವಿದೊಡ್ಡಿ, ಎಇ ಭೀಮರಾವ ಏನಾಪೂರ ನೇತೃತ್ವದಲ್ಲಿ ಜಾಗೃತ ತಂಡ ರಚಿಸಲಾಗಿದೆ. ಅಕ್ರಮ ಮದ್ಯ ಮತ್ತು ಸಾರಾಯಿ, ಹಣ ಸಾಗಾಣಿಕೆ ತಡೆಗಟ್ಟಲು ಬಿಗಿ ಕ್ರಮಕೈಗೊಳ್ಳಲು ತಾಲೂಕಿನ ಹಿರೋಳಿ, ಖಜೂರಿ, ಮಾದನಹಿಪ್ಪರ್ಗಾ, ನಿಂಬಾಳ, ವಿ.ಕೆ.ಸಲಗರ, ಕಡಗಂಚಿ ಅಲ್ಲದೇ ಆಳಂದ ಚೆಕ್ ಪೋಸ್ಟ್ ಹತ್ತಿರ ತಪಾಸಣಾ ಕೇಂದ್ರವನ್ನು ತೆರೆಯಲಾಗಿದೆ ಎಂದರು.
ಮದುವೆ, ಇತರ ಶುಭಕಾರ್ಯಗಳ ಮೇಲೆ ನಿಗಾ ಇಡಲು, ದಾಖಲೆ ರಹಿತವಾಗಿ 50 ಸಾವಿರ ಹಣ ಸಾಗಿಸುತ್ತಿದ್ದರೆ ಕ್ರಮ ಜರುಗಿಸಲು ಹಾಗೂ ಯಾವುದೇ ಪಕ್ಷದ ಅಭ್ಯರ್ಥಿ, ಬೆಂಬಲಿಗರು ಚುನಾವಣಾ ಉದ್ದೇಶದಿಂದ ಧಾರ್ಮಿಕ, ಸರ್ಕಾರಿ ಸೌಲಭ್ಯಗಳನ್ನು ಬಳಸದಂತೆ ಎಚ್ಚರ ವಹಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಹಸೀಲ್ದಾರ ಪರಮೇಶ್ವರ  ಸ್ವಾಮಿ ಮಾತನಾಡಿ, ಪ್ರಚಾರ, ಬ್ಯಾನರ್ ಬಳಕೆ, ಮೆರವಣಿಗೆ ಸೇರಿದಂತೆ ಅಧಿಕಾರಿಗಳು ನೀತಿ ಸಂಹಿತೆಯನ್ನು ಪಾಲಿಸಬೇಕು ಎಂದರು. ಅಗತ್ಯ ಪೊಲೀಸ್ ನೆರವು ಪಡೆದು ಜಾಗೃತಿ ವಹಿಸುವಂತೆ ಸೂಚಿಸಿದರು. ಸಿಪಿಐ ಕೆ.ಎಸ್.ಹಟ್ಟಿ, ಪಿಎಸ್‌ಐ ಮಹಾದೇವ ಪಂಚಮುಖಿ, ಅಬಕಾರಿ ಅಧಿಕಾರಿ ಕೇದಾರನಾಥ, ಶಿರಸ್ತೆದಾರ ಪ್ರಕಾಶ ಬಿ.ಸಿಂದಗಿ ಇತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.