ಗುಲ್ಬರ್ಗಾ

ಕರ್ತವ್ಯನಿರತ ಸಿಬ್ಬಂದಿಗೆ ಅಂಚೆ ಮತ ಪತ್ರ ನಮೂನೆ

Published On :

ಗುಲ್ಬರ್ಗ: ಗುಲ್ಬರ್ಗ(ಪ.ಜಾ.) ಮೀಸಲು ಲೋಕಸಭಾ ಕ್ಷೇತ್ರಕ್ಕೆ ಏ.17ರಂದು ನಡೆಯುವ ಚುನಾವಣೆಯ ಮತದಾನ ಕರ್ತವ್ಯದಲ್ಲಿ ನಿರತರಾಗಿರುವ ಅಧಿಕಾರಿ, ಸಿಬ್ಬಂದಿ ಮತ ಚಲಾಯಿಸಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ  ಅಂಚೆ ಮತಪತ್ರ (ಕ್ಟಿಡಡಿಛಟ ಇಛಟಟಜಡಿ ಕಿಛಠಜ್ಠ) ನಮೂನೆ-12, ಇಡಿಸಿ(ನಮೂನೆ-12ಎ)ಗಳನ್ನು ಕರ್ತವ್ಯ ನಿಯೋಜನೆ ಆದೇಶದೊಂದಿಗೆ ನೀಡಲಾಗುವುದೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಎನ್.ವಿ.ಪ್ರಸಾದ್ ತಿಳಿಸಿದ್ದಾರೆ.
ಎಲ್ಲಾ ಸರ್ಕಾರಿ ನೌಕರರು ಮತದಾರರ ಯಾದಿಯಲ್ಲಿ ತಮ್ಮ ಹೆಸರು, ಭಾಗಸಂಖ್ಯೆ ಹಾಗೂ ಕ್ರಮಸಂಖ್ಯೆಯನ್ನು ಕಡ್ಡಾಯವಾಗಿ ಕೂಡಲೇ ಪರಿಶೀಲಿಸಿ ಪ್ರಥಮ ತರಬೇತಿಯ ದಿನಾಂಕದೊಳಗೆ ಸಂಬಂಧಿಸಿದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ತಹಸೀಲ್ದಾರ ಕಚೇರಿಯ ಚುನಾವಣಾ ಶಾಖೆಯಲ್ಲಿ ಸಲ್ಲಿಸಬೇಕು. ಅನಂತರ ಬರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಬೆಳೆ ಹಾನಿ; ಕೇಂದ್ರದಿಂದ ಅಧ್ಯಯನ ತಂಡ
ಗುಲ್ಬರ್ಗ: ಜಿಲ್ಲೆಯ ಆಳಂದ ತಾಲೂಕಿನಲ್ಲಿ ಮಾರ್ಚ್ ತಿಂಗಳಲ್ಲಿ ಸುರಿದ ಅಕಾಲಿಕ ಮತ್ತು ಆಲಿಕಲ್ಲು ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡವು 22ರಂದು ಮಧ್ಯಾಹ್ನ 2.30 ಗಂಟೆಗೆ ಭೇಟಿ ನೀಡಲಿದೆ. ನವದೆಹಲಿಯ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಆಯುಕ್ತ ಪ್ರಸನ್ನ ವಿ. ಸಾಲಿಯನ್ ಹಾಗೂ ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಇಲಾಖೆ ನಿರ್ದೇಶಕ ಕಾಲಸಿಂಗ್ ಸದಸ್ಯರನ್ನೊಳಗೊಂಡ ತಂಡವು ಸಂಜೆ 7 ಗಂಟೆಗೆ ಗುಲ್ಬರ್ಗಕ್ಕೆ ಭೇಟಿ ವಾಸ್ತವ್ಯ ಮಾಡುವುದು. ತಂಡದ ಸದಸ್ಯರು ಮಾ.23ರಂದು ಬೆಳಗ್ಗೆ 10 ಗಂಟೆಗೆ ಗುಲ್ಬರ್ಗದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ 11 ಗಂಟೆಗೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನಲ್ಲಿ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಲು ತೆರಳುವರು.

ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕಕ್ಕೆ ನೇಮಕ
ಗುರುಮಠಕಲ್: ಮತಕ್ಷೇತ್ರದ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಪಟ್ಟಣದ ಯುವ ಕಾಂಗ್ರೆಸ್ ಕಾರ್ಯಕರ್ತ ಸೈಯದ್ ಖಾಜ ಮೈನೊದ್ದೀನ್ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಅಲ್ಹಾಜ್ ಲಾಯಕ್ ಹುಸೇನ್ ಬಾದಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೀಡಿಯೋ ಕಾನ್ಫೆರೆನ್ಸ್ ಮೂಲಕ ಪ್ರಕರಣದ ವಿಚಾರಣೆ ಇದೇ ಮೊದಲು
ಬೆಂಗಳೂರು: ರಾಜ್ಯ ಹೈಕೋರ್ಟ್‌ನಲ್ಲಿ ಇದೇ ಮೊದಲ ಬಾರಿಗೆ ವೀಡಿಯೋ ಕಾನ್ಫೆರೆನ್ಸ್ ಮೂಲಕ ಗುಲ್ಬರ್ಗ ಪೀಠದ ಶೈಕ್ಷಣಿಕ ಪ್ರಕರಣವೊಂದರ ವಿಚಾರಣೆ ನಡೆಸಲಾಯಿತು. ಗುಲ್ಬರ್ಗ ಪೀಠದಲ್ಲಿ ತಾವು ಅರ್ಧ ವಿಚಾರಣೆ ನಡೆಸಿದ್ದ ಶಿಕ್ಷಣಕ್ಕೆ ಸಂಬಂಧಿಸಿದ ವಿಚಾರಣೆಯೊಂದನ್ನು ನ್ಯಾ.ಅಬ್ದುಲ್ ನಜೀರ್ ಅವರಿದ್ದ ಏಕಸದಸ್ಯ ಪೀಠ, ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿತು. ಆದರೆ, ಪ್ರಕರಣದ ವಿಚಾರಣೆ ಅಷ್ಟೊಂದು ತುರ್ತು ಅಗತ್ಯವಾಗಿರದ ಹಿನ್ನೆಲೆಯಲ್ಲಿ ಅದನ್ನು ಗುಲ್ಬರ್ಗ ಪೀಠದಲ್ಲೇ ಬೇರೊಂದು ನ್ಯಾಯಾಲಯದ ಮುಂದೆ ವಿಚಾರಣೆ ನಡೆಸುವಂತೆ ಆದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.

ನಾಳೆ ಮಾಸಿಕ ವಚನೋತ್ಸವ ಉದ್ಘಾಟನೆ
ಗುಲ್ಬರ್ಗ: ವಚನೋತ್ಸವ ಪ್ರತಿಷ್ಠಾನ ಘಟಕ ಹಾಗೂ ಪ್ರಗತಿ ಕಾಲೋನಿ ವಚನೋತ್ಸವ ಸಮಿತಿಯಡಿ ಮಾಸಿಕ ವಚನೋತ್ಸವ ಉದ್ಘಾಟನಾ ಸಮಾರಂಭವನ್ನು ಮಾರ್ಚ್ 23 ರವಿವಾರದಂದು ಸಂಜೆ 6ಕ್ಕೆ ಪ್ರಗತಿ ಕಾಲೋನಿ ರೇವಣಸಿದ್ದಪ್ಪ ಜೀವಣಗಿ ಮಹಾಮನೆಯಲ್ಲಿ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ. ವಿಕ್ರಮ ವಿಸಾಜೀ ಉದ್ಘಾಟನೆ ಮಾಡಲಿದ್ದಾರೆ. ವಿದ್ಯಾನಗರ ವೆಲ್ಫೇರ್ ಸೋಸಾಯಿಟಿ ಅಧ್ಯಕ್ಷ ಬಸವರಾಜ ಎನ್. ಪುಣ್ಯಶಟ್ಟಿ ಆಗಮಿಸಲಿದ್ದಾರೆ. ಅಧ್ಯಕ್ಷ ಡಾ. ಬಸವರಾಜ ಮೋದಿ ವಹಿಸಲಿದ್ದಾರೆಂದು ಅಧ್ಯಕ್ಷ ಶಿವರಾಜ ತಿಳಿಸಿದ್ದಾರೆ.

ಕೆರೆ ಕಾಮಗಾರಿ ಕಳಪೆ: ಆರೋಪ
ಶಹಾಪುರ: ಪಟ್ಟಣದ ವಾರ್ಡ್ ಸಂಖ್ಯೆ 16ರ ವ್ಯಾಪ್ತಿಯಲ್ಲಿ ಬರುವ ರಾಕಂಗೇರಾ ಕೆರೆಯ ಕಾಮಗಾರಿ ತೀರಾ ಕಳಪೆಯಾಗಿದೆ ಎಂದು ಅಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ. ರಾಕಂಗೇರಾ ಸೀಮಾಂತರದ ಕೆರೆಯು ಈ ಭಾಗಕ್ಕೆ ಬಹು ಮುಖ್ಯವಾಗಿದ್ದು ಗುತ್ತೇದಾರರು ಕೆರೆಯ ಒಡ್ಡುಗಳ ಮೇಲೆ ಜಾಲಿ ಕಟಿಂಗ್ ಮಾಡದೇ ಕಾಟಾಚಾರಕ್ಕೆ ಮರ್ಮ ಹಾಕಿರುತ್ತಾರೆ ಮತ್ತು ಕೆರೆಯ ತೂಬಿನ ಸುತ್ತಲೂ ಸೂಕ್ತ ಕಾಮಗಾರಿ ಕೈಗೊಂಡಿಲ್ಲ. ಈ ಕುರಿತು ಪರಿಶೀಲನೆ ಮಾಡಬೇಕಾದ ಎಂಜಿನಿಯರು ನಿರ್ಲಕ್ಷ್ಯ ವಹಿಸಿದ್ದಾರೆ. ತಕ್ಷಣವೇ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ನಿಂಗಪ್ಪ ಹೈಯಾಳಪ್ಪ ಆಗ್ರಹಿಸಿದ್ದಾರೆ. ಗ್ರಾಮದ ನಿವಾಸಿಗಳಾದ ಹೈಯಾಳಪ್ಪ ಮಾಗಿದ್ದು ನಾಲ್ವಡಿಗಿ, ಅಂಬ್ರೇಶಗೌಡ ಮಾಲಿಪಾಟೀಲ, ವಗ್ಗರಾಯಪ್ಪ ಪೂಜಾರಿ, ಮಲ್ಲಣಗೌಡ ಮಾಲಿಪಾಟೀಲ ಅವರು ಜಿಪಂ ಸಹಾಯಕ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ  ಈ ಬಗ್ಗೆ ಮನವಿ ಸಲ್ಲಿಸಿ ಸೂಕ್ತವಾಗಿ ಪರಿಶೀಲನೆ ನಡೆಸಲು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.