ಆಪ್ ಅಭ್ಯರ್ಥಿ ಲಲಿತಾನಾಯಕ್ ಆಸ್ತಿ 48.38 ಲಕ್ಷ
ಗುಲ್ಬರ್ಗ: ಆಮ್ ಆದ್ಮಿ ಪಾರ್ಟಿ (ಎಎಪಿ) ಅಭ್ಯರ್ಥಿಯಾಗಿ ಗುಲ್ಬರ್ಗ ಲೋಕಸಭೆ (ಪರಿಶಿಷ್ಟ ಜಾತಿ) ಮೀಸಲು ಕ್ಷೇತ್ರಕ್ಕೆ ಶನಿವಾರದಂದು ನಾಮಪತ್ರ ಸಲ್ಲಿಸಿರುವ ಮಾಜಿ ಸಚಿವೆ ಬಿ.ಟಿ. ಲಲಿತನಾಯಕ ಅವರು ಚರ ಹಾಗೂ ಸ್ಥಿರ ಸೇರಿ ಒಟ್ಟು 48.38 ಲಕ್ಷ ಆಸ್ತಿ ಹೊಂದಿದ್ದಾರೆ. ಬೆಂಗಳೂರಿನ ಸಂಜಯನಗರದ ಜುಡಿಷಿಯಲ್ ಲೇಔಟ್ನಲ್ಲಿ ಮನೆ ಹೊಂದಿರುವ ಅವರು, 2012-13 ನೇ ಸಾಲಿನ ಆದಾಯ ರಿಟರ್ನಲ್ಲಿ 4 ಲಕ್ಷ ಆದಾಯ ತೋರಿಸಿದ್ದಾರೆ. ಒಟ್ಟು ಚರ ಆಸ್ತಿ 2323. 38 ಲಕ್ಷ ಇದ್ದು, ಅದರಲ್ಲಿ ನಗದು 1.5 ಲಕ್ಷ ಹೊಂದಿದ್ದರೆ, 2005 ರಲ್ಲಿ ಬ್ಯಾಂಕ್ನಲ್ಲಿ 2 ಲಕ್ಷ ಮುದ್ದತಿ ಠೇವಣಿ ಇಟ್ಟಿದ್ದಾರೆ. ಅಂಚೆ ಕಚೇರಿ ಮುದ್ದತಿ ಠೇವಣಿಯಲ್ಲಿ 6 ಲಕ್ಷ ತೊಡಗಿಸಿದ್ದಾರೆ. 3.28 ಲಕ್ಷ ಮೌಲ್ಯದ ಒಂದು ಸ್ಕೋಡಾ ಕಾರನ್ನು ಹೊಂದಿದ್ದಾರೆ. 60 ಸಾವಿರ ಮೌಲ್ಯದ ಒಂದು ಚಿನ್ನದ ಸರವಿದೆ ಎಂದು ಬಿ.ಟಿ. ಲಲಿತಾ ನಾಯಕ್ ಸಲ್ಲಿಸಿರುವ ಅಫಿಡ್ವಿಟ್ನಲ್ಲಿ ದಾಖಲಿಸಿದ್ದಾರೆ. ಬೆಂಗಳೂರಿನ ಸಂಜಯನಗರ ಜುಡಿಷಯಲ್ ಲೇಔಟ್ನಲ್ಲಿ ಸ್ವಂತ ಮನೆ ಹೊಂದಿದ್ದು, ಅದರ ಮೌಲ್ಯ 25 ಲಕ್ಷ ಆಗಿರುತ್ತದೆ ಎಂದು ಸ್ಥಿರ ಆಸ್ತಿ ವಿಭಾಗದಲ್ಲಿ ನಮೂದಿಸಿದ್ದಾರೆ. 68ರ ವರ್ಷ ವಯೋವಾನದ ಬಿ.ಟಿ. ಲಲಿತಾನಾಯಕ್ ಅವರು ಚಿತ್ರದುರ್ಗದ ಬಾಲಕಿಯರ ಪ್ರೌಢಶಾಲೆಯಲ್ಲಿ 6ನೇ ತರಗತಿ ಮುಗಿಸಿದ್ದಾರೆ.
ಪ್ರವೇಶ ಭರವಸೆ
ಗುಲ್ಬರ್ಗ: ಬಿಸಿಎ 6ನೇ ಸೆಮೆಸ್ಟರ್ಗೆ 2ನೇ ಸೆಮೆಸ್ಟರ್ನಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರವೇಶ ಮತ್ತು ಪರೀಕ್ಷೆ ಬರೆಯಲು ಗುಲ್ಬರ್ಗ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಈ.ಟಿ. ಪುಟ್ಟಯ್ಯ ಸಮ್ಮತಿಸಿದ್ದಾರೆ. ಪ್ರೊ. ಪುಟ್ಟಯ್ಯ ಸೇರಿದಂತೆ ಕುಲಸಚಿವರಾದ ಪ್ರೊ. ಚಂದ್ರಕಾಂತ ಯಾತನೂರ, ಡಾ. ಎಸ್.ವಿ. ಹಲ್ಸೆರವರ ಈ ನಿರ್ಧಾರವನ್ನು ಈಶಾನ್ಯ ವಲಯ ಶಿಕ್ಷಕರ ವೇದಿಕೆ ಅಧ್ಯಕ್ಷ ಎಂ.ಬಿ ಅಂಬಲಗಿ ಸ್ವಾಗತಿಸಿದ್ದಾರೆ. ವಿದ್ಯಾರ್ಥಿಗಳ ತೊಂದರೆ ಅರಿತ ವಿವಿ ಮುಖ್ಯಸ್ಥರು ಈ ನಿರ್ಧಾರ ಕೈಗೊಂಡಿರುವುದು ಶ್ಲಾಘನೀಯ ಎಂದು ಅವರು ತಿಳಿಸಿದ್ದಾರೆ. ಈ ಕುರಿತಾಗಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸುವ ಮುನ್ನ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು.
ಜಾಥಾ ಇಂದು
ಗುಲ್ಬರ್ಗ: ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಜನಸಾಮಾನ್ಯರಲ್ಲಿ ಕ್ಷಯರೋಗದ ಬಗ್ಗೆ ಅರಿವು ಮೂಡಿಸಲು ಮಾ. 24ರಂದು ಬೆಳಗ್ಗೆ 8 ಗಂಟೆಗೆ ಗುಲ್ಬರ್ಗದಲ್ಲಿ ಜನಜಾಗೃತಿ ಜಾಥಾ ಆಯೋಜಿಸಲಾಗಿದೆ. ಜಿಲ್ಲಾ ಆಸ್ಪತ್ರೆಯಿಂದ ಎಸ್ಪಿ ಕಚೇರಿ ಹಿಂಭಾಗದ ಹೆಚ್ಐಟಿ ಸಭಾಂಗಣದವರೆಗೆ ಈ ಜಾಥಾ ನಡೆಯಲಿದೆ. ನಂತರ ಇದೇ ಸಭಾಂಗಣದಲ್ಲಿ ಬೆಳಗೆ ್ಗ10 ಗಂಟೆಗೆ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಶರಣಬಸಪ್ಪ ಗಣಜಲಖೇಡ ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯ
ಗುಲ್ಬರ್ಗ: ಮಹಾರಾಷ್ಟ್ರದ ಸೋಲಾಪುರದಿಂದ ರಾಯಚೂರುವರೆಗಿನ 765 ಕೆ.ವಿ. ಸಿಂಗಲ್ ಸರ್ಕ್ಯೂಟ್ ವಿದ್ಯುತ್ ಪ್ರಸರಣ ಮಾರ್ಗದ ನಿರ್ಮಾಣ ಕಾರ್ಯದ ಪ್ರಯುಕ್ತ ಮಾ. 25ರಂದು ಶಹಾಬಾದ-ಬಾಗೇವಾಡಿ 110 ಕೆ.ವಿ. ಮಾರ್ಗದ ವಿದ್ಯುತ್ ನಿಲುಗಡೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಂದೇವಾಲ, ಯಡ್ರಾಮಿ, ಮೋರಟಗಿ, ಅಫಜಲ್ಪುರ ಮತ್ತು ಕರಜಗಿಯ 33 ಕೆ.ವಿ. ವಿದ್ಯುತ್ ಉಪ-ಕೇಂದ್ರಗಳ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಬೆಳಗಿನ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಸಹಕರಿಸಲು ಕೋರಲಾಗಿದೆ.
ದರಪಟ್ಟಿ ಆಹ್ವಾನ
ಗುಲ್ಬರ್ಗ: ಜಿಲ್ಲಾ ಪಂಚಾಯತಿಯ ಪರಿಷತ್ ಶಾಖೆಗೆ ಒಳ್ಳೆ ಗುಣಮಟ್ಟದ ಸ್ಕ್ಯಾನರ್ ಸರಬರಾಜು ಮಾಡಲು ಅರ್ಹರಿಂದ ದರಪಟ್ಟಿ ಕರೆಯಲಾಗಿದೆ. ಮೊಹರು ಮಾಡಿದ ದರಪಟ್ಟಿಯ ಲಕೋಟೆಯನ್ನು ಮಾ.24 ರೊಳಗಾಗಿ ಈ ಕಚೇರಿಗೆ ಸಲ್ಲಿಸಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.
ದೂರು ಹಿಂದಕ್ಕೆ
ಜೇವರ್ಗಿ: ತಾಲೂಕಿನ ರಾಸಣಗಿ ಗ್ರಾಮದ ನ್ಯಾಯಬೆಲೆ ಅಂಗಡಿ ಮಾಲೀಕ ಸಮರ್ಪಕವಾಗಿ ಪಡಿತರ ಧಾನ್ಯ ವಿತರಿಸುವ ಭರವಸೆ ನೀಡಿದ ನಂತರ ಗ್ರಾಮಸ್ಥರು ತಹಸೀಲ್ದಾರ್ ಅವರಿಗೆ ನೀಡಿದ ದೂರನ್ನು ಹಿಂದಕ್ಕೆ ಪಡೆದಿದ್ದಾರೆ. ಈ ವಿಷಯವಾಗಿ ಗ್ರಾಮಸ್ಥರು ಮಾ.13 ರಂದು ತಹಸೀಲ್ದಾರ್ ಅವರಿಗೆ ತಕರಾರು ಅರ್ಜಿ ಸಲ್ಲಿಸಿದ್ದರು. ವಿಶ್ವನಾಥ ಪಾಟೀಲ್, ಭೀಮಣ್ಣ, ಮಲ್ಲೇಶಪ್ಪ, ಕಲ್ಲಪ್ಪ ಪೂಜಾರಿ, ಮಲ್ಲಿಕಾರ್ಜುನ, ಪ್ರಭುನಂದ ಕಟ್ಟಿಮನಿ ಸೇರಿದಂತೆ ಇತರರು ಮನವಿ ಪತ್ರಕ್ಕೆ ಸಹಿ ಹಾಕಿದ್ದರು.
ವಿಜ್ಞಾನ ಶಿಬಿರ
ಗುಲ್ಬರ್ಗ: ಜಿಲ್ಲಾ ವಿಜ್ಞಾನ ಕೇಂದ್ರದ ವತಿಯಿಂದ ಏ.3ರಿಂದ 19ರವರೆಗೆ ಪ್ರತಿ ದಿನ 10.30ರಿಂದ ಸಂಜೆ 4ರ ವರೆಗೆ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಬೇಸಿಗೆ ವಿಜ್ಞಾನ ಶಿಬಿರ ಹಮ್ಮಿಕೊಂಡಿದೆ. ಶಿಬಿರದಲ್ಲಿ 7ನೇ ತರಗತಿಯಿಂದ 10ನೇ ತರಗತಿ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದು ವಿದ್ಯಾರ್ಥಿಗಳಿಂದ ಭೌತಶಾಸ್ತ್ರ, ವಿದ್ಯುನ್ಮಾನಶಾಸ್ತ್ರದಲ್ಲಿ ಮಾದರಿ ತಯಾರಿಕೆ ರಸಾಯನಿಕ ಶಾಸ್ತ್ರದಲ್ಲಿ ಹಲವಾರು ಪ್ರಯೋಗಗಳನ್ನು ಮಾಡಿಸಲಾಗುವುದು. ಡಿಜಿಟಲ್ ತಾರಾಲಯ ಮತ್ತು ದೂರದರ್ಶಕದ ಸಹಾಯದಿಂದ ಖಗೋಳ ವಿಜ್ಞಾನ ಕುರಿತು ಪರಿಚಯಾತ್ಮಕ ಶಿಬಿರ ನಡೆಸಲಾಗುವುದು. ವಿವರಕ್ಕೆ 94817 81486, 94817 74872ಗೆ ಸಂಪರ್ಕಿಸಬಹುದು.
ಸ್ಪೋಕನ್ ಇಂಗ್ಲಿಷ್
ಗುಲ್ಬರ್ಗ: ಶಾರದಾ ಶಿಕ್ಷಣ ಕೇಂದ್ರವತಿಯಡಿ ಉಚಿತ ಇಂಗ್ಲಿಷ್ ಗ್ರಾಮರ್ ಹಾಗೂ ಸ್ಪೋಕನ್ ಇಂಗಿಷ್ ತರಬೇತಿ ತರಗತಿಗಳು ಏ.1 ರಿಂದ ಬೆಳಗ್ಗೆ 7ರಿಂದ 8.30ರವರೆಗೆ ಪ್ರಾರಂಭವಾಗಲಿವೆ. ಆಸಕ್ತ ವಿದ್ಯಾರ್ಥಿಗಳು ಶಹಾಬಜಾರ ನಾಕಾ ಹತ್ತಿರವಿರುವ ದುರ್ಗಾ ನಿವಾಸ ಶಾರದಾ ಶಿಕ್ಷಣ ಕೇಂದ್ರ ಕಾರ್ಯಾಲಯದಲ್ಲಿ ಅಭ್ಯಾಸ ವರ್ಗ ನಡೆಸಲಾಗುತ್ತದೆ.
ಕಾನೂನು ಅರಿವು-ನೆರವು: ಸಂಚಾರಿ ಪ್ರದರ್ಶನಕ್ಕೆ ಚಾಲನೆ
ಗುಲ್ಬರ್ಗ: ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದಿಂದ ಜನಸಾಮಾನ್ಯರಿಗೆ ಸಿಗುವ ಉಚಿತ ಕಾನೂನು ನೆರವು ಮತ್ತಿತರ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸಲು ರೂಪಿಸಲಾದ ಕಾನೂನು ಸೇವೆಗಳ ಪ್ರಾಧಿಕಾರದ ಸಂಚಾರಿ ವಸ್ತುಪ್ರದರ್ಶನ ಕಾರ್ಯಕ್ರಮಕ್ಕೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಡಿ. ಆರ್. ಸುದರ್ಶನ್ ಗುಲ್ಬರ್ಗ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಶುಕ್ರವಾರ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಶರಣಬಸವೇಶ್ವರರ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಜನರು ಆಗಮಿಸಲಿರುವ ಹಿನ್ನೆಲೆಯಲ್ಲಿ ಕಾನೂನು ಸೇವಾ ಪ್ರಾಧಿಕಾರದಿಂದ ಸ್ಥಾಪಿಸಿದ ಮಳಿಗೆಯ ಹಾಗೂ ಪ್ರದರ್ಶನ ವಾಹನದ ಮೂಲಕ ಜನರಲ್ಲಿ ಕಾನೂನು ಅರಿವು-ನೆರವು ಬಗ್ಗೆ ಉಚಿತ ಕಾನೂನು ಸಲಹೆ ಹಾಗೂ ತಿಳಿವಳಿಕೆ ನೀಡಲಾಗುವುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿ ಎ. ವಿಜಯನ್ ಈ ಸಂದರ್ಭದಲ್ಲಿ ತಿಳಿಸಿದರು. ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ಎಲ್.ಪಾಟೀಲ್, ಗುಲ್ಬರ್ಗ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಡಿ.ಕೆ.ಯೂಸುಫ್, ಕಾರ್ಯದರ್ಶಿ ಬಿ.ಕೆ.ಪಾಟೀಲ್, ಹಿರಿಯ ನ್ಯಾಯವಾದಿ ಉಸ್ತಾದ್ ಸಾದತ್ ಹುಸೇನ್ ಸೇರಿದಂತೆ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

