ಪ್ರಾಚೀನ ಪದ್ಧತಿ ಮರೆಯುತ್ತಿರುವ ಜನ
ಯಾದಗಿರಿ: ಸಮಾಜದಲ್ಲಿ ಪ್ರಾಚೀನ ಪದ್ಧತಿಗಳನ್ನು ಮರೆಯುತ್ತಿರುವ ಕಾರಣ ಚಿಕ್ಕ ವಯಸ್ಸಿನಲ್ಲಿ ವಿವಿಧ ರೋಗಗಳಿಗೆ ಬಲಿಯಾಗುವಂತಾಗಿದೆ ಎಂದು ಆಯುಷ್ ಅಧಿಕಾರಿ ಡಾ. ಪ್ರಕಾಶ ರಾಜಾಪುರ ಹೇಳಿದರು.
ನಗರದ ಹಿಂದಿ ಪ್ರಚಾರಸಭಾ ಆವರಣದಲ್ಲಿ ಭಾರತ ಸ್ವಾಭಿಮಾನ ಟ್ರಸ್ಟ್, ಪತಂಜಲಿ ಯೋಗ ಸಮಿತಿ, ಮಹಿಳಾ ಪತಂಜಲಿ ಯೋಗ ಸಮಿತಿ ಮತ್ತು ಯುವ ಭಾರತ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ
ಹುತಾತ್ಮ ದಿವಸ ಮತ್ತು ಜಿಲ್ಲಾ ಯೋಗ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿಜ ಅವರು, ಯೋಗ ಪದ್ಧತಿಗಳನ್ನು ಅಳವಡಿಸಿಕೊಂಡರೆ ನಮ್ಮ ಜೀವನ ಸದಾ ಹಸಿರಾಗಿರುತ್ತದೆ. ಪ್ರಾಚೀನ ಭಾರತದ ಪದ್ಧತಿಗಳಲ್ಲಿ ಯೋಗವೂ ಒಂದಾಗಿದೆ ಎಂದು ಹೇಳಿದರು.
ಯೋಗ ಮತ್ತು ಆಯುರ್ವೇದ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆಯುರ್ವೇದ ಪದ್ಧತಿಯಲ್ಲಿ ಸಾಕಷ್ಟು ವಿಧಾನಗಳಿವೆ. ಮನೆಮದ್ದು ತಯಾರಿಸಿಕೊಂಡು ಸಣ್ಣಪುಟ್ಟ ಕಾಯಿಲೆಗಳನ್ನು ವಾಸಿ ಮಾಡಿಕೊಳ್ಳಬಹುದು. ಹೀಗಾಗಿ ಜನತೆ ಆಯುರ್ವೇದ ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ದೇವಾಪುರ ಗ್ರಾಮದ ಜಡಿ ಶಾಂತಲಿಂಗೇಶ್ವರ ಸಂಸ್ಥಾನ ಪಠದ ಶಿವಮೂರ್ತಿ ಸ್ವಾಮೀಜಿ, ಕಿತ್ತೂರು ರಾಣಿ ಚನ್ನಮ್ಮ ವಸತಿಶಾಲೆಯ ಪ್ರಾಂಶುಪಾಲೆ ಶಾಂತಾ ಸಜ್ಜನ್, ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ಯೋಗ ಪತಂಜಲಿ ಸಮಿತಿ ಜಿಲ್ಲಾ ಸಂಚಾಲ ಅನಿಲ್ ಗುರೂಜಿ, ನಿವೃತ್ತ ಶಿಕ್ಷಕ ಅಯ್ಯಣ್ಣಾ ಹುಂಡೇಕಾರ್, ನೂರೊಂದಪ್ಪ ಲೇವಡಿ ಸೇರಿದಂತೆ ಇನ್ನಿತರರು ಇದ್ದರು.
ಅಂಬೇಡ್ಕರ್ ಜಯಂತಿ ಪೂರ್ವಭಾವಿ ಸಭೆ
ಯಾದಗಿರಿ: ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ಅವರ 111ನೇ ಜಯಂತಿಯನ್ನು ಈ ಬಾರಿ ಅತ್ಯಂತ ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆ ನಡೆಸಲಾಗುತ್ತಿದೆ ಎಂದು ದಲಿತ ಮುಖಂಡ ಮರೆಪ್ಪಾ ಚೆಟ್ಟೇರಕರ್ ಹೇಳಿದರು.
ಇಲ್ಲಿನ ಅಂಬೇಡ್ಕರ್ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬಾಬಾ ಸಾಹೇಬರ ಜಯಂತಿಯನ್ನು ಈ ಬಾರಿ ಏ.14ರಂದೇ ಆಚರಿಸುವುದು ಸೂಕ್ತ. ಲೋಕಸಭೆ ಚುನಾವಣೆ ನಿಮಿತ್ತ ಯಾವುದೇ ರೀತಿಯ ಸಮಸ್ಯೆಗಳು ಎದುರಾಗದಂತೆ ಸಮಿತಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಎಂದರು.
ಮುಖಂಡರಾದ ಪ್ರಭು ಬೊಮ್ಮನ ಮಾತನಾಡಿ, ಸಮಾಜದ ಯುವಕರು ಒಗ್ಗಟ್ಟಾಗಿ ಅಂಬೇಡ್ಕರ್ ಜಯಂತಿ ಆಚರಣೆ ಮಾಡಲು ಮುಂದಾಗಬೇಕು. ಯಾವುದೇ ರೀತಿಯ ಅಹಿತಕರ ಘಟನೆ ಜರುಗದಂತೆ ಆಯಾ ಸಮಿತಿಗಳಿಗೆ ಒಪ್ಪಿಸಲಾದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ ಸಮಿತಿ ಪದಾಧಿಕಾರಿಗಳನ್ನು ನೇಮಿಸಲಾಯಿತು.
ಪದಾಧಿಕಾರಿಗಳು: ಡಾ.ಭಗವಂತ ಅನವಾರ(ಅಧ್ಯಕ್ಷ), ದೇವಿಂದ್ರಪ್ಪ ಡಿ.ಎಂ (ಗೌರವಾಧ್ಯಕ್ಷ), ರಂಗಪ್ಪ ನಾಟೆಕಾರ (ಕಾರ್ಯಾಧ್ಯಕ್ಷ), ಮರೆಪ್ಪ ಚೆಟ್ಟೇರಕರ್ (ಪ್ರಧಾನ ಕಾರ್ಯದರ್ಶಿ), ಚಂದ್ರಕಾಂತ ಮುನಿಯಪ್ಪನೋರ, ಸ್ವಾಮಿದೇವ ದಾಸನಕೇರಿ, ಶರಣು ನಾಟೇಕಾರ, ಚಂದ್ರಶೇಖರ ದಾಸನಕೇರಿ (ಉಪಾಧ್ಯಕ್ಷರು), ಮಲ್ಲಿನಾಥ ಸುಂಗಲಕರ್, ಶಿವು ಕುರಕುಂಬಳ, ಶಿವುಕುಮಾರ ಗಿರೆಪ್ಪನೂರ, ಚಂದ್ರು ಕುರಕುಂಬಳ (ಸಹ ಕಾರ್ಯದರ್ಶಿಗಳು), ಮಲ್ಲಿಕಾರ್ಜ್ಜುನ ಈಟೆ, ಬಾಲಪ್ಪ ಸುಂಗಲಕರ್, ಅನಿಲ್ ಕುಮಾರ ಹೆಡಗಿಮದ್ರಾ (ಖಜಾಂಚಿಗಳು)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

