ನೀರಿಗೆ ಪರಿತಪಿಸಿದ ಊರಲ್ಲೀಗ ಪೋಲು
ಕ.ಪ್ರ. ವಾರ್ತೆ ಆಳಂದ ಮಾ.26
ತಾಲೂಕಿನ ಹಿರೋಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಭೀಂಪುರ ಗ್ರಾಮದಲ್ಲಿ ನಲ್ಲಿಯ ತೊಟ್ಟಿಯಿಂದ ಕುಡಿಯುವ ನೀರು ಪ್ರತಿನಿತ್ಯ ಸತತ ವ್ಯರ್ಥವಾಗಿ ಹರಿಯತೊಡಗಿದೆ ಎಂದು ಗ್ರಾಮದ ಯುವಕರು ಆರೋಪಿಸಿದ್ದಾರೆ.
ಕಳೆದ ಬೇಸಿಗೆಯಲ್ಲಿ ನೀರಿಗಾಗಿ ಬಾವಿ, ಬೋರುವೆಲ್, ಹೊಲ ಗದ್ದೆಗಳಿಗೆ ಓಡಾಡಿ ಪರಿತಪ್ಪಿಸಿದ ಇದೇ ಭೀಂಪುರ ಗ್ರಾಮದಲ್ಲಿ ಈ ಬಾರಿ ಜಿಪಂ ಸಹಯೋಗದ 25 ಲಕ್ಷ ವೆಚ್ಚದಲ್ಲಿ ನೀರಿನ ಸೌಲಭ್ಯ ಕಲ್ಪಿಸಿದ ಸಂತಸವಾದರೆ, ಮತ್ತೊಂದೆಡೆ ನೀರು ದೊರೆತ ಮೇಲೆ ಸಂಬಂಧಿಸಿದವರು ನಿರ್ವಹಣೆ ಮಾಡದೆ ವ್ಯರ್ಥವಾಗಿ ಹರಿಬಿಡುತ್ತಿರುವುದು ಗ್ರಾಮಸ್ಥರಿಗೆ ಚಿಂತೆಗೀಡು ಮಾಡಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಎನ್ಆರ್ಡಿಡಬ್ಲೂಪಿ ಯೋಜನೆಡಿಯಲ್ಲಿ ಸರ್ಕಾರ ಪೂರೈಸಿದ ನೀರು ಗ್ರಾಪಂ ಸಿಬ್ಬಂದಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ತೊಟ್ಟಿತುಂಬಿ ಪೋಲಾಗುತ್ತಿದೆ.
ಹತೋಟಿಗೆ ಮುಂದಾಗದ ಸಿಬ್ಬಂದಿ: ಈ ನೀರು ವ್ಯರ್ಥವಾಗಿ ಹರಿದರೂ ಪ್ರತಿದಿನ ಅದರ ಹತೋಟಿಗೆ ಸಿಬ್ಬಂದಿ ಮುಂದಾಗುತ್ತಿಲ್ಲ. ಹಲವು ಬಡಾವಣೆಯಲ್ಲಿನ ತೊಟ್ಟಿಗಳು ತುಂಬಿ ಹರಿಯುವ ಈ ದೃಶ್ಯ ಸಾಮಾನ್ಯವಾಗಿದೆ ಎಂದು ಗ್ರಾಮಕ್ಕೆ ಭೇಟಿ ನೀಡಿದ ಮಾಧ್ಯಮ ಪ್ರತಿನಿಧಿಗಳ ಮುಂದೆ ಗ್ರಾಮಸ್ಥರು ನೋವು ತೊಡಿಕೊಂಡಿದ್ದಾರೆ.
ಇಂದಿಗೂ ಜ್ವಲಂತ ಸಮಸ್ಯೆ: ಈ ಭಾಗದಲ್ಲಿ ಒಂದೆಡೆ ನೀರಿನ ಭೀಕರ ಸಮಸ್ಯೆ ಇದೆ. ನೀರು ಹಿತಮಿತ ಬಳಕೆ ಇಲ್ಲದೆ ಹಾಗೂ ನಿರ್ವಹಣೆ ಸಮಸ್ಯೆಯಿಂದಾಗಿ ಆಯಾ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿವ ನೀರಿನ ಭಾರೀ ಸಮಸ್ಯೆ ಇಂದಿಗೂ ಜ್ವಲಂತ ಸಮಸ್ಯೆಯಾಗಿ ಕಾಡುತ್ತಿದೆ. ಹೀಗಾಗಿ ನೀರಿನ ಸಮಸ್ಯೆ ಎದುರಾಗಿ ತಾಲೂಕು ಆಡಳಿತವು ಕಳೆದ ಬೇಸಿಗೆಯಲ್ಲಿ 80 ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಿದ ವಿಷಯ ಕಣ್ಣೇದುರಿಗಿದೆ.
ನೆರೆಯ ಗ್ರಾಮಗಳಾದ ಅಂಬೇವಾಡ, ಸಕ್ಕರಗಾ, ಸರಸಂಬಾ, ಸಾವಳೇಶ್ವರ ಗ್ರಾಮಕ್ಕೆ ಟ್ಯಾಂಕರ್ ನೀರು ಪೂರೈಸಲಾಗಿದೆ. ನೀರಿನ ಹಿತಮಿತ ಬಳಕೆಯಾಗಬೇಕು. ಅಗತ್ಯಕಷ್ಟೇ ನೀರು ಪೂರೈಸಬೇಕೆಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರು ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಜಿಪಂ ಸದಸ್ಯೆ ಭರವಸೆ: ನೀರಿನ ಭೀಕರ ಸಮಸ್ಯೆ ಮನಗಂಡು ಜಿಪಂ ಸಹಯೋಗದಡಿ ಎನ್ಆರ್ಡಿಡಬ್ಲೂಪಿ ಅಡಿಯಲ್ಲಿ 25 ಲಕ್ಷ ವೆಚ್ಚದಲ್ಲಿ ಭೀಂಪುರ ಗ್ರಾಮಕ್ಕೆ ನೀರಿನ ಸಮಸ್ಯೆ ನಿವಾರಿಸಲಾಗಿದೆ.
ನೀರಿನ ಟ್ಯಾಂಕ್ ಕೊರತೆಯಿಂದಾಗಿ ತೊಟ್ಟಿಗಳಲ್ಲಿ ನೀರು ಹೆಚ್ಚಾಗಿ ಪೋಲಾಗುತ್ತಿರುವುದು ನಿಜ. ಸದ್ಯ ಟ್ಯಾಂಕ್ ನಿರ್ಮಾಣ ಕಾರ್ಯ ಚಾಲ್ತಿಯಲ್ಲಿದೆ. ಟ್ಯಾಂಕ್ ನಿರ್ಮಾಣವಾದ ಮೇಲೆ ವ್ಯರ್ಥ ನೀರು ಹರಿಯದಂತೆ ನೋಡಿಕೊಳ್ಳಲು ಸಂಬಂಧಿಸಿದವರಿಗೆ ಸೂಚನೆ ನೀಡಲಾಗುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

